ಚೆನ್ನೈ:ತಮಿಳುನಾಡಿನ ಅಮ್ಮ ಜಯಲಲಿತಾ ಸಾವಿನ ಬಗ್ಗೆ ಇದ್ದ ಗೊಂದಲಗಳಿಗೆ ತೆರೆ ಬಿದ್ದಿದೆ. ಸುದ್ದಿಗೋಷ್ಠಿ ನಡೆಸಿದ ಲಂಡನ್ ವೈದ್ಯ ರಿಚರ್ಡ್ ಬಿಲೆ ಅವರು ಅಮ್ಮಾ ಅನಾರೋಗ್ಯದ ಗುಟ್ಟನ್ನು ರಟ್ಟು ಮಾಡಿದ್ದಾರೆ.
ಜಯಲಲಿತಾಗೆ ದಿಢೀರ್ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಅಲ್ಲದೇ ಅವರ ರಕ್ತದಲ್ಲಿ ಬ್ಯಾಕ್ಟೀರಿಯಾ ತುಂಬಿಕೊಂಡಿತ್ತು. ಅದು ಹೃದಯಕ್ಕೂ ವಿಸ್ತಿರಿಸಿತ್ತು. ಜೊತೆಗೆ ಸಕ್ಕರೆ ಕಾಯಿಲೆಯಿಂದ ಬಹು ಅಂಗಾಂಗ ವೈಫಲ್ಯಕ್ಕೂ ಗುರಿಯಾದರು. ಜಯಲಲಿತಾರನ್ನು ಬದುಕಿಸಲು ಅಂತಿಮ ಕ್ಷಣದವರೆಗೂ ಪ್ರಯತ್ನ ಮಾಡಿದ್ದೆವು. ಕೃತಕ ಉಸಿರಾಟ ಯಂತ್ರ ಅಳವಡಿಸಿದ್ದರೂ ಸಂಜೆ 5 ಗಂಟೆಗೆ ಅವರಿಗೆ ಹೃದಯಸ್ತಂಭನವಾಗಿತ್ತು. ಅದಕ್ಕೆ ನಾವೇ ಸಾಕ್ಷಿ. ನಮ್ಮ ಬಳಿ ಯಾವುದೇ ಸಿಸಿಟೀವಿ ದೃಶ್ಯಗಳಿಲ್ಲ, ದೃಶ್ಯಗಳಿದ್ರೂ ನಾವು ರಿಲೀಸ್ ಮಾಡಲ್ಲ. ರೋಗಿಯ ಖಾಸಗಿತನ ನಮಗೆ ಅತ್ಯಂತ ಮುಖ್ಯ ಎಂದು ವೈದ್ಯ ರಿಚರ್ಡ್ ಬಿಲೆ ಹೇಳಿದ್ರು.
Advertisement
ಡಿಸೆಂಬರ್ 5 ರಾತ್ರಿ ಎಂಜಿಆರ್ ಅವರಿಗೆ ಎಂಬ್ಲಂ ಮಾಡಿದಂತೆ ಜಯಲಲಿತಾ ಅವರಿಗೂ ಮಾಡಲಾಗಿತ್ತು. ಎಂಬ್ಲಂ ಮಾಡಿ ಜಯಾ ಅವರ ಪಾರ್ಥಿವ ಶರೀರ ಕೆಡದಂತೆ ನೋಡಿಕೊಳ್ಳಲಾಗಿತ್ತು. ಎಂದು ಅಪೋಲೋ ಆಸ್ಪತ್ರೆ ವೈದ್ಯ ಡಾ. ಬಾಲಾಜಿ ಹೇಳಿದ್ರು.
Advertisement
ಅಮ್ಮಾ ಆರೋಗ್ಯದ ಕ್ಷಣಕ್ಷಣದ ಮಾಹಿತಿಯನ್ನ ಅವರ ಪರಮಾಪ್ತೆ ಶಶಿಕಲಾ ನಟರಾಜನ್, ಸರ್ಕಾರದ ಮುಖ್ಯಕಾರ್ಯದರ್ಶಿ ಹಾಗೂ ಲೋಕಸಭೆ ಡೆಪ್ಯೂಟಿ ಸ್ಪೀಕರ್ ತಂಬಿದೊರೈ ಅವರಿಗೆ ಇಂಚಿಂಚು ಮಾಹಿತಿ ನೀಡಲಾಗ್ತಿತ್ತು. ಸಾವಿಗೂ ಮುನ್ನ ಜಯಲಲಿತಾ ವೈದ್ಯ ರಿಚರ್ಡ್ ಬಿಲೆ ಅವರ ಜೊತೆಯೂ ಮಾತನಾಡಿದ್ದರು. ಇನ್ನೂ ಜಯಲಲಿತಾ ಚಿಕಿತ್ಸೆಗೆ ಖರ್ಚಾಗಿದ್ದು ಬರೋಬ್ಬರಿ 5.5 ಕೋಟಿ ರೂ. ಮೆಡಿಕಲ್ ಬಿಲ್ ಅನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಿದ್ದೇವೆ. ಆ ಹಣವನ್ನು ಅವರು ಕೊಡುವ ನಿರೀಕ್ಷೆ ಇದೆ ಎಂದು ವೈದ್ಯ ಬಾಲಾಜಿ ಅವರು ಹೇಳಿದರು.