Max: ಕೇಕ್‌ ತಿನಿಸಿ ಉಗ್ರಂ ಮಂಜು ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ & ಟೀಮ್

Public TV
1 Min Read
sudeep 1

ಸ್ಯಾಂಡಲ್‌ವುಡ್‌ನ ಪ್ರತಿಭಾನ್ವಿತ ನಟ ಉಗ್ರಂ ಮಂಜು (Ugramm Manju) ಅವರ ಹುಟ್ಟುಹಬ್ಬ ಸ್ಪೆಷಲ್ ಆಗಿ ಮ್ಯಾಕ್ಸ್ ಸಿನಿಮಾ ಸೆಟ್‌ನಲ್ಲಿ ಆಚರಿಸಲಾಗಿದೆ. ಕಿಚ್ಚ & ಟೀಮ್ ನೇತೃತ್ವದಲ್ಲಿ ಉಗ್ರಂ ಮಂಜು ಅವರ ಹುಟ್ಟುಹಬ್ಬ ಆಚರಿಸಲಾಗಿದೆ.

ugramm manju

ಕೇಕ್ ಕತ್ತರಿಸುವ ಮೂಲಕ ಉಗ್ರಂ ಮಂಜು ಹುಟ್ಟುಹಬ್ಬದ ಸೆಲೆಬ್ರೇಶನ್ ಮೋಡ್‌ನಲ್ಲಿದ್ದಾರೆ. ಸಹನಟನಿಗೆ ಕೇಕ್ ತಿನಿಸಿ ವಿಶೇಷವಾಗಿ ಸುದೀಪ್ (Kichcha Sudeep) ಮತ್ತು ಮ್ಯಾಕ್ಸ್ ಟೀಮ್ ಶುಭಕೋರಿದ್ದಾರೆ. ಈ ವೇಳೆ, ನಟಿ ಸಂಯುಕ್ತಾ ಹೊರನಾಡ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಕುರಿತ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ugramm manju 1

‘ಮ್ಯಾಕ್ಸ್’ (Max) ಚಿತ್ರದಲ್ಲಿ ಉಗ್ರಂ ಮಂಜು ಅವರು ಪೊಲೀಸ್ ಅಧಿಕಾರಿ ರೋಲ್‌ನಲ್ಲಿ ನಟಿಸಿದ್ದಾರೆ. ಅವರ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಸಿಗಲಿದೆ. ಇದನ್ನೂ ಓದಿ:ರಣ್‌ಬೀರ್ ಜೊತೆಯೂ ರಶ್ಮಿಕಾ ಲಿಪ್ ಲಾಕ್

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರದಲ್ಲಿ ಸಂಯುಕ್ತಾ, ವರಲಕ್ಷ್ಮಿ ಶರತ್ ಕುಮಾರ್ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡ್ತಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

Share This Article