ಉಡುಪಿ: ಕೃಷ್ಣಾಪುರ ಮಠದ ವಿದ್ಯಾಸಾಗರ ಸ್ವಾಮೀಜಿ ಸರ್ವಜ್ಞ ಪೀಠಾರೋಹಣ ಮಾಡಿ ಕೃಷ್ಣಮಠದ ಅಧಿಕಾರ ಆರಂಭಿಸಿದ್ದಾರೆ. ಪರ್ಯಾಯ ದರ್ಬಾರ್ ನಲ್ಲಿ ತನ್ನ ಎರಡು ವರ್ಷದ ಪರ್ಯಾಯದ ಕೆಲ ಯೋಜನೆಗಳನ್ನು ಶ್ರೀಗಳು ಘೋಷಿಸಿದ್ದಾರೆ.
ದರ್ಬಾರ್ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಪ್ರತಿದಿನ ಶ್ರೀಕೃಷ್ಣನಿಗೆ ಲಕ್ಷ ತುಳಸಿ ಅರ್ಚನೆ ಮಾಡಬೇಕು ಎಂದು ಸಂಕಲ್ಪ ಮಾಡಿದ್ದೇನೆ. ನನ್ನ ಕೈಲಾದಷ್ಟು ತುಳಸಿ ದಳಗಳನ್ನು ಶ್ರೀಕೃಷ್ಣನಿಗೆ ಅರ್ಪಿಸುತ್ತೇನೆ. ಪಲಿಮಾರು ಸ್ವಾಮೀಜಿಗಳು ಮಾಡಿದಷ್ಟು ದೇವರ ಸೇವೆ ಮಾಡಲು ಸಾಧ್ಯ ಆಗದಿದ್ದರೂ ನನ್ನ ಕೈಲಾದಷ್ಟು ಮಾಡುತ್ತೇನೆ ಎಂದರು.
Advertisement
Advertisement
ಪ್ರತಿದಿನ ವಿಷ್ಣು ಸಹಸ್ರನಾಮ ಪಠಣ ಮಾಡುವ ಉತ್ಸಾಹದಲ್ಲಿ ಇದ್ದೇನೆ. ದೇವರು ನಡೆಸಿದರೆ ಅದನ್ನು ಮಾಡಬೇಕೆಂಬ ಇಚ್ಛೆಯಿದೆ. ನಿರಂತರ ಎರಡು ವರ್ಷ ಭಜನೆ ನಡೆಯಬೇಕು ಎಂಬ ಆಸೆಯಿದೆ. ಭಕ್ತರ ಭಜನಾ ತಂಡಗಳ ಮತ್ತು ಸಾರ್ವಜನಿಕರ ಬೆಂಬಲ ಇದ್ದರೆ ಇದು ಸಾಧ್ಯವಾಗಲಿದೆ. ನಿಮ್ಮ ಸಹಕಾರ ಬೇಕು ಎಂದು ವಿನಂತಿಸಿದರು. ಇದನ್ನೂ ಓದಿ: ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‍ಡೌನ್ ಹೇರಬಾರದು: ಸಿ.ಟಿ ರವಿ
Advertisement
Advertisement
ತಮ್ಮ ಪರ್ಯಾಯ ಕಾಲಾವಧಿಯಲ್ಲಿ ಭಗವಂತನಿಗೆ ಪ್ರಿಯವಾದ ಹಲವು ಕೆಲಸಗಳನ್ನು ಮಾಡಿದ್ದಾರೆ. ಅವರು ಮಾಡಿದ ಕೆಲಸ ಮುಂದುವರಿಸಬೇಕು ಎಂದಿದ್ದೇನೆ. ಕೊರೋನಾ ಕಷ್ಟ ಕಾಲದಲ್ಲಿ ನಾನು ಸಂಚಾರ ಹೋದಲ್ಲೆಲ್ಲ ಜನ ಸಹಕಾರ ನೀಡಿದ್ದಾರೆ. ನಾನು ಜನರ ವಿಶ್ವಾಸ ಉಳಿಸಿಕೊಳ್ಳುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಪರ್ಯಾಯ ದರ್ಬಾರ್‍ನಲ್ಲಿ ಪಲಿಮಾರು, ಪೇಜಾವರ, ಕಾಣಿಯೂರು, ಸೋದೆ, ಅದಮಾರು, ಶೀರೂರು ಶ್ರೀಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಟೆಲಿಪ್ರೊಂಪ್ಟರ್ ಕೂಡ ಇಷ್ಟೊಂದು ಸುಳ್ಳುಗಳನ್ನು ಹೇಳಲು ಸಾಧ್ಯವಿಲ್ಲ – ಮೋದಿ ವಿರುದ್ಧ ರಾಹುಲ್ ವ್ಯಂಗ್ಯ