ನವದೆಹಲಿ: ಟೆಲಿಪ್ರಾಂಪ್ಟರ್ ಕೂಡ ಇಷ್ಟೊಂದು ಸುಳ್ಳುಗಳನ್ನು ಹೇಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೋದಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
Advertisement
ಕೊರೋನಾ ವೈರಸ್ ಕಾರಣ ಸತತ ಎರಡನೇ ಬಾರಿಗೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆಯನ್ನು ವರ್ಚುವಲ್ ಆಗಿ ನಡೆಸಲಾಗಿತ್ತು. ಈ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಪರಿಸ್ಥಿತಿಗಳು ವಿಷಯದ ಕುರಿತು ಭಾಷಣ ಮಾಡುತ್ತಿದ್ದ ವೇಳೆ ಮಧ್ಯದಲ್ಲಿಯೇ ಮಾತು ನಿಲ್ಲಿಸಿದ್ದರು. ಈ ಘಟನೆ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ನಂಬರ್ 1 ಸ್ಥಾನದಲ್ಲಿತ್ತು. ಇದೀಗ ಈ ಬಗ್ಗೆ ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಪರಿಸ್ಥಿತಿ ಕಾದು ನೋಡಬೇಕು, ಕರ್ಫ್ಯೂ, ಲಾಕ್‍ಡೌನ್ ಹೇರಬಾರದು: ಸಿ.ಟಿ ರವಿ
Advertisement
इतना झूठ Teleprompter भी नहीं झेल पाया।
— Rahul Gandhi (@RahulGandhi) January 18, 2022
Advertisement
ಹಳೆಯ ವೀಡಿಯೋವೊಂದನ್ನು ರಾಹುಲ್ ಗಾಂಧಿ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ನರೇಂದ್ರ ಮೋದಿ ಅವರಿಗೆ ಸ್ವಂತವಾಗಿ ಮಾತನಾಡಲು ಬರುವುದಿಲ್ಲ. ನಿಯಂತ್ರಕದಿಂದ ನಿರ್ವಹಿಸಲ್ಪಡುವ ಟೆಲಿಪ್ರಾಂಪ್ಟರ್ ನಿಂದ ಅವರು ಭಾಷಣವನ್ನು ಓದುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ರಾಜಪಥ್‍ನಲ್ಲಿ ಗಣರಾಜ್ಯೋತ್ಸ ಪರೇಡ್‍ಗೆ ಭರ್ಜರಿ ಸಿದ್ಧತೆ
Advertisement
Once again Rahul Gandhi Ji’s statement came true pic.twitter.com/dLRHBMqirz
— With Congress (@WithCongress) January 18, 2022
ದಾವೋಸ್ ಅಜೆಂಡಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ದೇಶದ ಹಿಂದಿನ ತೆರಿಗೆ ಸಮಸ್ಯೆಯನ್ನು ಪರಿಹರಿಸಲು ತಮ್ಮ ಆಡಳಿತವು ಜಾರಿಗೆ ತಂದ ಸುಧಾರಣೆಗಳನ್ನು ವಿವರಿಸಿದರು. ಅವರು ತಮ್ಮ ಸರ್ಕಾರದ ಆಸ್ತಿ ಹಣಗಳಿಕೆಯ ಪ್ರಯತ್ನಗಳು ಮತ್ತು ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಪ್ರಮಾಣದ ಮೂಲಸೌಕರ್ಯ ಯೋಜನೆಗಳನ್ನು ಪ್ರಸ್ತಾಪಿಸಿದರು.