ಮುಂಬೈ: ಮಹಾರಾಷ್ಟ್ರ ಮೈತ್ರಿಕೂಟದ ಸರ್ಕಾರಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿರುವುದಕ್ಕೆ ಶಿವಸೇನಾ ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ್ ಶಿಂಧೆ ಬಣದ ಶಾಸಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ನಮಗೆ ಸಂತೋಷದ ವಿಷಯವಲ್ಲ ಎಂದು ಶಿವಸೇನಾ ಬಂಡಾಯ ಶಾಸಕ ಅಭಿಪ್ರಾಯಪಟ್ಟಿದ್ದಾರೆ. ಆದರೆ ಶಾಸಕನ ಹೆಸರು ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ನಾಳೆ ಬಿಜೆಪಿ-ಶಿಂಧೆ ಸರ್ಕಾರ ರಚನೆ ಸಾಧ್ಯತೆ- ಹೊಸ ಸರ್ಕಾರ ರಚನೆ ಉಸ್ತುವಾರಿ ಹೊತ್ತ ಸಿ.ಟಿ ರವಿ
Advertisement
Advertisement
ನಾವು ಸೂಚಿಸಿದ ವಿಷಯಗಳನ್ನು ಉದ್ಧವ್ ಠಾಕ್ರೆ ಗಮನಿಸಲಿಲ್ಲ ಎಂದು ಬಂಡಾಯ ಶಾಸಕರ ಬಣದ ವಕ್ತಾರ ದೀಪಕ್ ಕೇಸರ್ಕರ್ ಹೇಳಿದ್ದಾರೆ. ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿ ವಿರುದ್ಧ ಹೋರಾಡುವಾಗ ನಮ್ಮ ನಾಯಕನ (ಉದ್ಧವ್ ಠಾಕ್ರೆ) ನಡೆಯ ಬಗ್ಗೆಯೂ ಬೇಸರವಾಯಿತು ಎಂದು ಅವರು ತಿಳಿಸಿದ್ದಾರೆ.
Advertisement
ಇದಕ್ಕೆಲ್ಲ ಕಾರಣ ಎನ್‌ಸಿಪಿ ಮತ್ತು ಸಂಜಯ್ ರಾವತ್. ಕೇಂದ್ರ ಸರ್ಕಾರದ ವಿರುದ್ಧ ನಿತ್ಯ ಹೇಳಿಕೆಗಳನ್ನು ನೀಡುವುದು, ಕೇಂದ್ರ ಮತ್ತು ರಾಜ್ಯದ ನಡುವೆ ನಕಾರಾತ್ಮಕ ಅಭಿಪ್ರಾಯ ಮೂಡಿಸುವುದು ಅವರ ಕೆಲಸವಾಗಿತ್ತು ಎಂದಿದ್ದಾರೆ. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್ ಠಾಕ್ರೆ ರಾಜೀನಾಮೆ
Advertisement
ಮಹಾರಾಷ್ಟ್ರದ ಮೈತ್ರಿಕೂಟ ಸರ್ಕಾರದ ವಿರುದ್ಧ 50 ಶಾಸಕರು ಬಂಡಾಯ ಎದ್ದಿದ್ದಾರೆ. ಅವರಲ್ಲಿ 40 ಶಾಸಕರು ಶಿವಸೇನಾದವರಾಗಿದ್ದಾರೆ. ಬಂಡಾಯ ಶಾಸಕರ ಬಣದ ನೇತೃತ್ವವನ್ನು ಏಕನಾಥ್ ಶಿಂಧೆ ವಹಿಸಿದ್ದಾರೆ.