LatestLeading NewsMain PostNational

ನಾಳೆ ಬಿಜೆಪಿ-ಶಿಂಧೆ ಸರ್ಕಾರ ರಚನೆ ಸಾಧ್ಯತೆ- ಹೊಸ ಸರ್ಕಾರ ರಚನೆ ಉಸ್ತುವಾರಿ ಹೊತ್ತ ಸಿ.ಟಿ ರವಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ಕೊಟ್ಟಿದ್ದಾರೆ. ಎರಡೂವರೆ ವರ್ಷದ ಮಹಾ ಆಘಾಡಿ ಸರ್ಕಾರ ಪತನಗೊಂಡಿದೆ.

ಬುಧವಾರ ಸುಪ್ರೀಂಕೋರ್ಟ್‍ನಲ್ಲಿ ಸುದೀರ್ಘ ವಾದ-ಪ್ರತಿವಾದ ನಡೀತು. ಆದರೆ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿತು. ಇದರಿಂದ ಸೋಲೊಪ್ಪಿಕೊಂಡ ಉದ್ಧವ್ ಠಾಕ್ರೆ ಇವತ್ತಿನ ವಿಶ್ವಾಸಮತಕ್ಕೂ ಮುನ್ನ ನಿನ್ನೆ ರಾತ್ರಿಯೇ ರಾಜೀನಾಮೆ ಘೋಷಿಸಿದ್ರು. ಇದನ್ನೂ ಓದಿ: ಶಿಂಧೆ ಬಣದ ಹೊಡೆತಕ್ಕೆ ಅಘಾಡಿ ಸರ್ಕಾರ ಪತನ – ಉದ್ಧವ್‌ ಠಾಕ್ರೆ ರಾಜೀನಾಮೆ

ಫೇಸ್‍ಬುಕ್‍ನಲ್ಲಿ ಲೈವ್ ಬರುವ ಮೂಲಕ ತಮ್ಮ ರಾಜೀನಾಮೆ ಘೋಷಿಸಿದ ಠಾಕ್ರೆ, ವಿಧಾನ ಪರಿಷತ್ ಸ್ಥಾನಕ್ಕೂ ರಾಜೀನಾಮೆ ಕೊಡುತ್ತಿರುವುದಾಗಿ ಹೇಳಿದ್ರು. ಸೋನಿಯಾ, ಶರದ್ ಪವಾರ್‍ಗೆ ಧನ್ಯವಾದ ತಿಳಿಸಿದ್ರು. ಬಳಿಕ ರಾಜಭವನಕ್ಕೆ ಖುದ್ದು ಕಾರು ಚಲಾಯಿಸಿಕೊಂಡು ಹೋಗಿ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ್ರು. ರಾಜ್ಯಪಾಲರು ಠಾಕ್ರೆ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಈ ವೇಳೆ ಠಾಕ್ರೆಗೆ ಇಬ್ಬರು ಮಕ್ಕಳಾದ ಆದಿತ್ಯ, ತೇಜಸ್ ಸಾಥ್ ನೀಡಿದ್ರು.

ರಾಜೀನಾಮೆ ಬಳಿಕ ಮಳೆಯಲ್ಲೂ ದೇಗುಲಕ್ಕೆ ಠಾಕ್ರೆ ಭೇಟಿ ನೀಡಿದ್ರು. ಇತ್ತ ಶಿಂಧೆ ಬಣದೊಂದಿಗೆ ಮಹಾರಾಷ್ಟ್ರದಲ್ಲೂ ಕಮಲ ಅರಳುವುದು ಬಹುತೇಕ ಪಕ್ಕಾ ಆಗಿದೆ. ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಫಡ್ನವೀಸ್‍ಗೆ ಸಿಹಿ ತಿನ್ನಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ರು. ಶಿಂಧೆ ದೂರವಾಣಿ ಮೂಲಕ ಫಡ್ನವೀಸ್ ಜೊತೆ ಮಾತಾಡಿದ್ರು.

ಇಂದು ಸರ್ಕಾರ ರಚನೆಗೆ ಹಕ್ಕು ಪ್ರತಿಪಾದಿಸೋ ಸಾಧ್ಯತೆಗಳಿವೆ. ಜುಲೈ 1ಕ್ಕೆ ರೆಬೆಲ್ಸ್ ಬೆಂಬಲಿತ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಇತ್ತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿಗೆ ಹೈಕಮಾಂಡ್ ಮುಂಬೈಗೆ ಬರುವಂತೆ ಬುಲಾವ್ ನೀಡಿದೆ. ರವಿ ಮಹಾರಾಷ್ಟ್ರ, ಗೋವಾ, ತಮಿಳನಾಡಿನಲ್ಲಿ ಪಕ್ಷದ ಉಸ್ತುವಾರಿ ಆಗಿದ್ದಾರೆ.

Live Tv

Leave a Reply

Your email address will not be published.

Back to top button