ಅಬುಧಾಬಿ: ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಬ್ಯಾರೀಸ್ ಚೇಂಬರ್ ಆಫ್ ಕಾನರ್ಸ್ (ಯುಎಇ) ವತಿಯಿಂದ ಸೆಪ್ಟೆಂಬರ್ 10ರಂದು ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್ ಶಿಪ್’ ಎಂಬ ವಿಷಯದಲ್ಲಿ ವೆಬಿನಾರ್ ಹಮ್ಮಿಕೊಂಡಿದೆ.
ಬ್ಯುಸಿನೆಸ್ ನೆಟ್ ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆ ಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಯುಎಇಯಲ್ಲಿ ಸಕ್ರಿಯವಾಗಿರುವ ಬಿಸಿಸಿಐ ಯುಎಇ ಚಾಪ್ಟರ್, ಯುವ ಉದ್ಯಮಿಗಳ ಹಾಗೂ ವೃತ್ತಿಪರರ ಆಸಕ್ತಿದಾಯಕ ವಿಷಯವಾದ ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್ ಶಿಪ್’ ಕುರಿತು ಆನ್ ಲೈನ್ ವೆಬಿನಾರ್ ಹಮ್ಮಿಕೊಂಡಿದೆ ಎಂದು ಬ್ಯಾರೀಸ್ ಚೇಂಬರ್ಸ್ ಯುಎಇ ಚಾಪ್ಟರ್ ಅಧ್ಯಕ್ಷ ಎಸ್.ಎಂ ಬಶೀರ್ ತಿಳಿಸಿದ್ದಾರೆ. ಇದನ್ನೂ ಓದಿ:ದೂಡಾದಲ್ಲಿ ಅರ್ಜಿ ಹಾಕೋಕೆ 4ರಿಂದ 5 ಸಾವಿರ ಕೊಡ್ಬೇಕಂತೆ..!
Advertisement
ದುಬೈ ಸರ್ಕಾರದ ಎಕೋನಮಿಕ್ ಡೆವಲಪ್ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞ ರಾಶಿದ್ ಹಜಾರಿಯವರು, ಡಿಜಿಟಲ್ ಮಾಧ್ಯಮವು ಉದ್ಯಮರಂಗದಲ್ಲಿ ಸೃಷ್ಟಿಸಿದ ಹೊಸ ಸಂಚಲನದ ಬಗ್ಗೆ ಉಪಯುಕ್ತ ಮಾಹಿತಿಯನ್ನು ವೆಬಿನಾರ್ ಮೂಲಕ ನೀಡಲಿದ್ದಾರೆ. ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಿಸಿಸಿಐ ಯುಎಇ ಚಾಪ್ಟರ್ ತಿಳಿಸಿದೆ. ಇದನ್ನೂ ಓದಿ:ನನ್ನ ಹೃದಯ ನಿನ್ನ ಬಳಿ ಇದೆ – ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದ ಕತ್ರಿನಾ ಪೋಸ್ಟ್