ಬೆಂಗಳೂರು: ನಮ್ಮ ಒತ್ತಾಯಕ್ಕೆ ಸರ್ಕಾರ ಮಣಿಯುತ್ತಾ ಇಲ್ಲವಾ ಎಂದು ನೋಡಲು ಧರಣಿ ಮಾಡುತ್ತಿಲ್ಲ. ಸಚಿವ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆ. ಅದನ್ನು ಖಂಡಿಸಿ ನಮ್ಮ ನೋವನ್ನು ವ್ಯಕ್ತಪಡಿಸಿ ಧರಣಿ ಮಾಡುತ್ತಿದ್ದೇವೆ, ಎಲ್ಲಿಯ ತನಕ ಆಗುತ್ತದೆಯೋ ನೋಡೋಣ. ಈ ವಿಚಾರದಲ್ಲಿ ನಾವು ತಾರ್ಕಿಕ ಅಂತ್ಯ ಕಾಣುತ್ತೇವೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
Advertisement
ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಹಿಜಬ್ ವಿಚಾರದಲ್ಲಿ ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲ ಇಲ್ಲ. ರಾಜ್ಯದ ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಬಿಜೆಪಿ ವಿಫಲವಾಗಿದೆ. ಬಿಜೆಪಿ ವಿರುದ್ಧ ಇವತ್ತು ಪೋಷಕರು ಶಾಪ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮಾನಸಿಕ ಒತ್ತಡ ಹಾಕದೇ ಉತ್ತಮ ಶಿಕ್ಷಣ ಕೊಡಬೇಕು. ಈ ಒತ್ತಾಯ ಕಾಂಗ್ರೆಸ್ ಮೊದಲಿಂದಲೂ ಮಾಡುತ್ತಿದೆ. ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಇಂತಹ ಪ್ರಕರಣಗಳು ಕಂಡು ಬಂದಿಲ್ಲ. ಎಲ್ಲರ ಸಹಕಾರದಿಂದ ನಾವು ಉತ್ತಮ ಆಡಳಿತ ನೀಡಿದ್ದೇವೆ. ನಮ್ಮ ಅವಧಿಯಲ್ಲಿ ಇಂತಹ ಒಂದೇ, ಒಂದು ಕಿರುಕುಳ ಇರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಹಿಜಬ್ ಆಯ್ಕೆಯಲ್ಲ, ನಾವು ಪ್ರೀತಿಸುವ ದೇವರು ವಿಧಿಸಿರುವ ಶಿಷ್ಟಾಚಾರ: ಝೈರಾ ವಾಸಿಮ್
Advertisement
Advertisement
ಬಿಜೆಪಿ ಸಮಸ್ಯೆಯೊಳಗೆ ಸಮಸ್ಯೆ ಸೃಷ್ಟಿಸುತ್ತಿದೆ. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಆದೇಶ ವಿದ್ಯಾರ್ಥಿಗಳಿಗೆ ಮಾತ್ರ. ಈ ಆದೇಶವನ್ನು ತಳಮಟ್ಟದಲ್ಲಿ ಗೊಂದಲ ಹುಟ್ಟಿಸಲಾಗಿದೆ. ಶಿಕ್ಷಕಿಯರನ್ನೇ ಹೊರಗೆ ನಿಲ್ಲಿಸಿ ಪ್ರವೇಶ ನಿರ್ಬಂಧಿಸುವ ಪ್ರಕರಣಗಳು ನಡೆಯುತ್ತಿವೆ. ಈ ಆದೇಶ ಶಾಲೆ, ಕಾಲೇಜುಗಳ ಸಿಬ್ಬಂದಿಗೆ ಅನ್ವಯ ಆಗಲ್ಲ. ಇದರ ಬಗ್ಗೆ ಕಾಂಗ್ರೆಸ್ ವಿಧಾನಸಭೆಯಲ್ಲೂ ಚರ್ಚಿಸಿದೆ. ಹಿಜಬ್ ಧರಿಸಿ ಪಾಠ ಮಾಡಲು ಶಿಕ್ಷಕಿಯರಿಗೆ ಅವಕಾಶ ಇದೆ. ಅವರಿಗೆ ಅಡ್ಡಿ ಮಾಡುವುದು ಬೇಡ. ಎಲ್ಲವನ್ನೂ ಕೋರ್ಟ್ ಈ ಸರ್ಕಾರಕ್ಕೆ ಹೇಳಾಬೇಕಾ? ಎಂದು ಆಕ್ರೋಶ ವ್ಯಕ್ತಪಡಿಸಿದರು
Advertisement
ಕೋಮುವಾದಿಗಳ ಪ್ರಸ್ತಾಪಿತ ವಿಚಾರ: ಇದರಲ್ಲಿ ಬಿಜೆಪಿ ಲಾಭ ಮಾಡಿಕೊಳ್ಳಲು ಮುಂದಾಗಿದೆ. ಮುಂದೆ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುತ್ತಾರೆ ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!