ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ (International Border) ಎರಡು ಹಾಗೂ ನಿಯಂತ್ರಣ ರೇಖೆ (LoC) ಬಳಿ 6 ಭಯೋತ್ಪಾದಕ ಶಿಬಿರಗಳು ಇನ್ನೂ ಸಕ್ರಿಯವಾಗಿವೆ. ಅವುಗಳ ಮೇಲೆ ಭದ್ರತಾ ಪಡೆಗಳು ನಿಗಾ ಇಟ್ಟಿವೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ (Army Chief General Upendra Dwivedi) ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ವೇಳೆ ನಮ್ಮ ಮಾಹಿತಿಯ ಪ್ರಕಾರ ಎಂಟು ಭಯೋತ್ಪಾದಕ ಶಿಬಿರಗಳು ಇನ್ನೂ ಸಕ್ರಿಯವಾಗಿವೆ. ಅವುಗಳಲ್ಲಿ ಎರಡು ಗಡಿಯಲ್ಲಿ ಮತ್ತು ಆರು ನಿಯಂತ್ರಣ ರೇಖೆ ಬಳಿ ಇವೆ. ಈ ಶಿಬಿರಗಳಲ್ಲಿ ತರಬೇತಿ ನಡೆಯುತ್ತಿದೆ ಎಂಬ ಶಂಕೆ ಇದೆ. ಇವುಗಳ ಮೇಲೆ ನಿಗಾ ಇಟ್ಟಿದ್ದೇವೆ. ಅವುಗಳನ್ನು ವಿರುದ್ಧ ಹೋರಾಟಕ್ಕೆ ಸೇನೆ ಸಿದ್ಧವಿದೆ ಎಂದಿದ್ದಾರೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಪಾಕಿಸ್ತಾನದ ಡ್ರೋನ್‌ಗಳು ಪತ್ತೆ; ಡಿಜಿಎಂಓಗಳ ಸಭೆಯಲ್ಲಿ ಪಾಕ್‌ಗೆ ಖಡಕ್ ಎಚ್ಚರಿಕೆ

ಉಗ್ರರ ವಿಚಾರದಲ್ಲಿ ನಮ್ಮ ಕಣ್ಣು ಮತ್ತು ಕಿವಿಗಳು ಸದಾ ತೆರೆದೆ ಇರುತ್ತವೆ. 2025 ರಲ್ಲಿ ಭದ್ರತಾ ಕ್ಷೇತ್ರದಲ್ಲಿ ಸಾಧಿಸಿದ ಪ್ರಗತಿಯಿಂದ ಭಾರತ ತೃಪ್ತವಾಗಬಹುದು. ಆಪರೇಷನ್ ಸಿಂದೂರ್ ಭಾರತದ ಸಿದ್ಧತೆ, ನಿಖರತೆ ಮತ್ತು ಕಾರ್ಯತಂತ್ರದ ಸ್ಪಷ್ಟತೆಯನ್ನು ಪ್ರದರ್ಶಿಸಿದೆ ಎಂದು ಸೇನೆಯನ್ನು ಬಣ್ಣಿಸಿದ್ದಾರೆ.
ಆಪರೇಷನ್ ಸಿಂದೂರ್ ವೇಳೆ ಸೇನೆಯು ಒಂಬತ್ತು ಗುರಿಗಳಲ್ಲಿ ಏಳನ್ನು ಯಶಸ್ವಿಯಾಗಿ ನಾಶಪಡಿಸಿದೆ. ನಂತರ ಪಾಕ್ ನಡೆಸಿದ ದಾಳಿಗೆ ತಕ್ಕ ಉತ್ತರಕೊಟ್ಟಿದೆ. CAPF ಪಡೆ, ಗುಪ್ತಚರ ಸಂಸ್ಥೆಗಳು, ನಾಗರಿಕ ಸಂಸ್ಥೆಗಳು, ರಾಜ್ಯ ಆಡಳಿತ ಮತ್ತು ಇತರ ಸಚಿವಾಲಯಗಳು, ರೈಲ್ವೆ, ಸೇರಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಎಲ್ಲಾ ಪಾಲುದಾರರ ಪಾತ್ರವನ್ನು ಈ ವೇಳೆ ಅವರು ಸ್ಮರಿಸಿದರು.
ಕಳೆದ ವರ್ಷ ವಿಶ್ವಾದ್ಯಂತ ಸಶಸ್ತ್ರ ಸಂಘರ್ಷಗಳ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಈ ಜಾಗತಿಕ ಬದಲಾವಣೆಗಳನ್ನು ಸಿದ್ಧರಾಗಿರುವ ರಾಷ್ಟ್ರಗಳು ನಿಯಂತ್ರಿಸಿವೆ. ಭಾರತ ಸಹ ಆಪರೇಷನ್ ಸಿಂದೂರ್ ವೇಳೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ ಎಂದಿದ್ದಾರೆ. ಇದನ್ನೂ ಓದಿ: 10 ನಿಮಿಷದಲ್ಲಿ ಡೆಲಿವರಿ ಭರವಸೆಗೆ ಬ್ರೇಕ್ ಹಾಕಿದ ಕೇಂದ್ರ; ಜಾಹೀರಾತು ನಿಲ್ಲಿಸುವ ಭರವಸೆ ನೀಡಿದ ಝೆಪ್ಟೋ, ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್

