ಹಾಸನ: ನಿಧಾನವಾಗಿ ಕಾರು (Car) ಓಡಿಸುವಂತೆ ತಿಳಿ ಹೇಳಿದ ಯುವಕನಿಗೆ ಗುದ್ದಿಸಿ ಹತ್ಯೆ ಮಾಡಿದ ಘಟನೆ ಹೊಳೆನರಸೀಪುರ (Holenarasipura) ತಾಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಮನು (27) ಎಂದು ಗುರುತಿಸಲಾಗಿದೆ. ನಡುರಾತ್ರಿ 12 ಗಂಟೆ ಸಮಯದಲ್ಲಿ ಮನು, ಅಭಿಷೇಕ್, ರಾಕೇಶ್ ಹಾಗೂ ಕುಶಾಲ್ ರಸ್ತೆ ಪಕ್ಕದಲ್ಲಿ ನಿಂತು ಮಾತನಾಡುತ್ತಿದ್ದರು. ಈ ವೇಳೆ KA-01-ಎಂಎಫ್-2883 ನಂಬರ್‌ನ ಕಾರಿನಲ್ಲಿ ಅತಿ ವೇಗವಾಗಿ ಅಪರಿಚಿತ ವ್ಯಕ್ತಿ ಬಂದಿದ್ದಾನೆ. ಇದನ್ನು ಕಂಡ ಯುವಕರ ತಂಡ, ಕಾರು ಚಾಲಕನಿಗೆ ನಿಧಾನವಾಗಿ ಹೋಗು ಎಂದು ಹೇಳಿದ್ದರು. ಇದರಿಂದ ಕೋಪಗೊಂಡ ಕಾರು ಚಾಲಕ ಸ್ಬಲ್ಪ ದೂರು ಹೋಗಿ ತಿರುಗಿಸಿಕೊಂಡು ಬಂದು, ಮಾತನಾಡುತ್ತ ನಿಂತಿದ್ದವರಿಗೆ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಾಗ್ಪುರದ ಕಾರ್ಖಾನೆಯಲ್ಲಿ ಭೀಕರ ಸ್ಫೋಟ – 17 ಮಂದಿ ಸಾವು, 18ಕ್ಕೂ ಹೆಚ್ಚು ಜನರಿಗೆ ಗಾಯ
ಡಿಕ್ಕಿ ರಭಸಕ್ಕೆ ಮನು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಭಿಷೇಕ್ ಸೇರಿ ಮೂವರು ಯುವಕರಿಗೆ ಗಾಯಗಳಾಗಿವೆ. ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಯುವಕರು ಸಂಬಂಧಿಗಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಕಲಬುರಗಿ| ಜಮೀನಿನಲ್ಲಿ ಯುವಕ ಅನುಮಾನಾಸ್ಪದ ಸಾವು – ಕೊಲೆ ಶಂಕೆ



