ಬೆಂಗಳೂರು: ತಿಲಕ್ ನಗರದಲ್ಲಿ ಬಂಧನಕ್ಕೆ ಒಳಗಾದ ಇಬ್ಬರು ಶಂಕಿತ ಉಗ್ರರ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ(NIA) ವರ್ಗಾವಣೆಯಾಗಿದೆ.
ಜುಲೈನಲ್ಲಿ ಸಿಸಿಬಿ(CCB) ಪೊಲೀಸರು ಅನುಮಾನದ ಮೇರೆಗೆ ಇಬ್ಬರು ಡೆಲಿವರಿ ಹುಡುಗರನ್ನು ಬಂಧಿಸಿದ್ದರು. ಬಂಧಿತ ಅಕ್ತರ್ ಮತ್ತು ಜುಬಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(UAPA) ಅಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಹಿಂದೂಗಳಿಂದ ನೆಮ್ಮದಿ ಹಾಳಾಗಿದ್ದಕ್ಕೆ ಉಗ್ರ ಸಂಘಟನೆ ಸೇರಲು ಮುಂದಾಗಿದ್ದೆ: ಶಂಕಿತ ಉಗ್ರ
Advertisement
Advertisement
ಸಿಸಿಬಿ ಎಸಿಪಿ ನೀಡಿದ ದೂರಿನ ಆಧಾರದ ಪ್ರಕರಣ ದಾಖಲಿಸಿಕೊಂಡು ತಡರಾತ್ರಿ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
Advertisement
ವಿಚಾರಣೆಯ ಸಮಯದಲ್ಲಿ ಶಂಕಿತರು ಬೇರೆ ಬೇರೆ ರಾಜ್ಯಗಳ ವ್ಯಕ್ತಿಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪ್ರಕರಣ ಸಿಸಿಬಿಯಿಂದ ಈಗ ಎನ್‌ಐಎಗೆ ಅಧಿಕೃತವಾಗಿ ವರ್ಗಾವಣೆಯಾಗಿದೆ.