-ಏಳು ಸುತ್ತಿನಲ್ಲಿ ಸೀಟು ಹಂಚಿಕೆ ಮಾಡಿ ದಾಖಲೆ
-ದಂತ ವೈದ್ಯಕೀಯ ಸೀಟು ಪೂರ್ಣ ಹಂಚಿಕೆ
ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಕೋರ್ಸ್ನ ಸ್ಟ್ರೇ ವೇಕೆನ್ಸಿ-4 ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karnataka Examination Authority) ಸೋಮವಾರ ಪ್ರಕಟಿಸಿದ್ದು, ಏಳು ಸುತ್ತುಗಳ ಕೌನ್ಸೆಲಿಂಗ್ ನಂತರವೂ 191 ವೈದ್ಯಕೀಯ ಸೀಟು ಹಂಚಿಕೆಯಾಗದೇ ಉಳಿದಿವೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ (H Prasanna) ಹೇಳಿಕೆ ಬಿಡುಗಡೆ ಮಾಡಿದ್ದಾರೆ. ದಂತ ವೈದ್ಯಕೀಯ (Dentistry) ಸೀಟು ಸಂಪೂರ್ಣ ಹಂಚಿಕೆಯಾಗಿದ್ದು, ಯಾವೊಂದು ಸೀಟು ಉಳಿಕೆಯಾಗಿಲ್ಲ. ಈ ಮೂಲಕ 2026ನೇ ಸಾಲಿನ ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್ಗಳ ಸೀಟು ಹಂಚಿಕೆ ಪ್ರಕ್ರಿಯೆ ಕೊನೆಯಾದಂತಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗ್ಯಾಸ್ ರೀಫಿಲ್ಲಿಂಗ್ ಸೆಂಟರ್ ಅಗ್ನಿ ಅವಘಡ – ಎರಡು ದಿನಗಳ ಬಳಿಕ ದಂಪತಿ ಡೆಡ್ ಬಾಡಿ ಪತ್ತೆ
ಸ್ಟ್ರೇ ವೇಕೆನ್ಸಿ-2 ಸುತ್ತಿನ ನಂತರ ಭಾನುವಾರ ಒಟ್ಟು 273 ವೈದ್ಯಕೀಯ ಸೀಟು (Medical Seat) ಉಳಿದಿತ್ತು. ಬಳಿಕ ಆಪ್ಷನ್ಸ್ ಎಂಟ್ರಿ ದಾಖಲಿಸಲು ಕೊನೆ ಅವಕಾಶ ನೀಡಿ, ಅ.26ರಂದು ಎರಡು ಪ್ರತ್ಯೇಕ ಸ್ಟ್ರೇ ವೇಕೆನ್ಸಿ ಸುತ್ತಿನ ಕೌನ್ಸೆಲಿಂಗ್ ನಂತರ ಒಟ್ಟು 84 ವೈದ್ಯಕೀಯ ಸೀಟು ಹಂಚಿಕೆಯಾಗಿವೆ. ಈ ವರ್ಷ ಒಟ್ಟಾರೆ ಏಳು ಸುತ್ತಿನ ಸೀಟು ಹಂಚಿಕೆ ಮಾಡಿ, ದಾಖಲೆ ಬರೆದಂತಾಗಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟೊಂದು ಸಂಖ್ಯೆಯ ಸುತ್ತುಗಳಲ್ಲಿ ಸೀಟು ಹಂಚಿಕೆ ಮಾಡಿದ್ದು ಇದೇ ಮೊದಲು ಎಂದು ವಿವರಿಸಿದ್ದಾರೆ.
ಎಂಸಿಸಿ ಆದೇಶಾನುಸಾರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಇಂದು ಕೊನೆ ದಿನವಾದ ಕಾರಣ ಪೋಷಕರು/ಅಭ್ಯರ್ಥಿಗಳ ಕೋರಿಕೆ ಮೇರೆಗೆ ಒಂದೇ ದಿನ ಎರಡು ಪ್ರತ್ಯೇಕ ಸುತ್ತಿನ ಸೀಟು ಹಂಚಿಕೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಲಾಯಿತು. ಬೆಳಗಿನ ಸುತ್ತಿನಲ್ಲಿ 62 ವೈದ್ಯಕೀಯ ಹಾಗೂ 6 ದಂತ ವೈದ್ಯಕೀಯ ಸೀಟು ಹಂಚಿಕೆಯಾದರೆ, ಸಂಜೆ ಸುತ್ತಿನಲ್ಲಿ 22 ವೈದ್ಯಕೀಯ ಮತ್ತು 5 ದಂತ ವೈದ್ಯಕೀಯ ಸೀಟು ಹಂಚಿಕೆಯಾಯಿತು ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದಲ್ಲಿ ವಿದ್ಯುತ್ ಅಭಾವದ ಆತಂಕ, ಕಬ್ಬು ಬೆಳೆಗಾರರಿಗೆ ಹೆಚ್ಚಿನ ಹಣ ನೀಡುವುದು ಸವಾಲು: ಡಿಕೆಶಿ ಕಳವಳ
ಉಳಿಕೆ ಸೀಟುಗಳ ಹಂಚಿಕೆಗೆ ಎಂಸಿಸಿ ಮತ್ತೆ ಅವಕಾಶ ನೀಡಿದರೆ ಮುಂದುವರಿದ ಸುತ್ತುಗಳನ್ನು ಮಾಡಿ, ಸೀಟು ಹಂಚಿಕೆ ಮಾಡಲಾಗುವುದು ಎಂದಿದ್ದಾರೆ.ಇದನ್ನೂ ಓದಿ: ನ್ಯಾಯಾಧೀಶರ ಅಪ್ರಾಪ್ತ ಮಗನಿಂದ ಅಪಘಾತ – ಜಡ್ಜ್ ವಿರುದ್ಧ ದೂರು ದಾಖಲಿಸಲು ಕೇರಳ ಹೈಕೋರ್ಟ್ ಅನುಮತಿ
