ಬೆಂಗಳೂರು: ರಾತ್ರಿ 11 ಗಂಟೆ ನಂತರ ಓಡಾಡಿದ್ದರು ಎಂಬ ಕಾರಣಕ್ಕೆ ದಂಪತಿಯಿಂದ ದಂಡದ ರೂಪದಲ್ಲಿ ಹಣ ವಸೂಲಿ ಮಾಡಿದ್ದ ಪೊಲೀಸರು ಅಮಾನತುಗೊಂಡ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಅದೇ ಮಾದರಿಯಲ್ಲಿ ಮತ್ತೊಂದು ಘಟನೆ ನಡೆದಿದೆ. ಬೆಂಗಳೂರಿನಲ್ಲಿ (Bengaluru) ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.
ಆಡುಗೋಡಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಅರವಿಂದ್ ಮತ್ತು ಮಾಳಪ್ಪ ಬಿ.ವಾಲಿಕಾರ್ ಅಮಾನತಾದ ಪೊಲೀಸ್ ಪೇದೆಗಳು. ಇದನ್ನೂ ಓದಿ: ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್
Advertisement
Advertisement
ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಪೇದೆಗಳು, ಹಣ ನೀಡುವಂತೆ ಹೇಳಿದ್ದಾರೆ. ಇಲ್ಲದಿದ್ದರೆ ಎಫ್‌ಐಆರ್ ದಾಖಲು ಮಾಡ್ತೀವಿ ಎಂದು ಬೆದರಿಸಿದ್ದಾರೆ.
Advertisement
ಪೊಲೀಸರ ಅವಾಜ್‌ಗೆ ಹೆದರಿದ ರತ್ನಾಕರ್ ಮತ್ತು ಚೀರಾಸ್, ಕಾನ್‌ಸ್ಟೇಬಲ್‌ಗಳಿಗೆ ಪರಿಚಿತರ ಟೀ ಅಂಗಡಿಯವರಿಂದ 4 ಸಾವಿರ ರೂ. ಹಣವನ್ನು ಫೋನ್‌ಪೇ ಮಾಡಿಸಿದ್ದಾರೆ. ಈ ಬಗ್ಗೆ ರತ್ನಾಕರ್ ಎಂಬಾತ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು. ಇದನ್ನೂ ಓದಿ: ಬೆಳಗಾವಿ ಕೇಂದ್ರಾಡಳಿತ ಪ್ರದೇಶ ಮಾಡಿ: ಮರಾಠಿ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯ
Advertisement
ಪ್ರಾಥಮಿಕ ತನಿಖೆಯಲ್ಲಿ ಹಣ ಪಡೆದಿರುವುದು ಗೊತ್ತಾದ ಹಿನ್ನೆಲೆಯಲ್ಲಿ ಪೊಲೀಸರನ್ನು ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ.ಬಾಬಾ ಅವರು ಅಮಾನತು ಮಾಡಿದ್ದಾರೆ. ಮಡಿವಾಳ ಎಸಿಪಿಗೆ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.