ಭೋಪಾಲ್: ಮೇಕೆಯೊಂದಿಗೆ (Goat) ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಆರೋಪದ ಮೇಲೆ ಓರ್ವ ಆರೋಪಿಯನ್ನು ಬಂಧಿಸಿದ ಪ್ರಕರಣ ಮಧ್ಯಪ್ರದೇಶದಲ್ಲಿ (Madhya Pradesh) ನಡೆದಿದೆ.
ಸೆಹೋರ್ನ ಭೇರುಂಡ ಪೊಲೀಸ್ ಠಾಣಾ ವ್ಯಾಪ್ತಿಯ ನೀಲಕಂಠ ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಮೇಕೆಯ ಮಾಲೀಕ ನೀಡಿದ ದೂರಿನ ಅನ್ವಯ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ತಲೆ ಮರೆಸಿಕೊಂಡಿರುವ ಮತ್ತೋರ್ವ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯ ಆರೋಪ – ಕುಸ್ತಿಪಟುಗಳಿಂದ ವೀಡಿಯೋ ಸಾಕ್ಷಿ ಕೇಳಿದ ಪೊಲೀಸರು
ಮೇಕೆಗಳನ್ನು ಮೇಯಿಸುತ್ತಿದ್ದಾಗ ಅದರಲ್ಲಿ ಒಂದು ಮೇಕೆ ನಾಪತ್ತೆಯಾಗಿತ್ತು. ಸ್ವಲ್ಪ ದೂರದಲ್ಲಿ ಮೇಕೆಯ ಕೂಗು ಕೇಳಿಸಿದ್ದು, ಆರೋಪಿಗಳು ಅದರೊಂದಿಗೆ ಅಸ್ವಾಭಾವಿಕ ಕೃತ್ಯ ಎಸಗುತ್ತಿರುವುದನ್ನು ನೋಡಿದ್ದಾಗಿ ದೂರು ನೀಡಿರುವ ಮೇಕೆಯ ಮಾಲೀಕ ತಿಳಿಸಿದ್ದಾರೆ. ಇದನ್ನೂ ಓದಿ: ಬಿಪರ್ಜೋಯ್ ಚಂಡಮಾರುತ ಎಫೆಕ್ಟ್ – ಹಾಸನದಲ್ಲಿ ಧಾರಾಕಾರ ಮಳೆ