ಬೆಂಗಳೂರು: ಸಿಲಿಕಾನ್ ಸಿಟಿ ಜನರೆ ಎಚ್ಚರ, ನಗರದ ಬಹುತೇಕ ಪ್ರದೇಶಗಳಲ್ಲಿ 22 ಮತ್ತು 23 ರಂದು ಎರಡು ದಿನಗಳ ಕಾಲ ಕಾವೇರಿ ನೀರು ಸಿಗಲ್ಲ.
ಬೆಂಗಳೂರು ಜಲಮಂಡಳಿ ಕಾವೇರಿ ನೀರು ಸರಬರಾಜು ಯೋಜನೆ 1 ಮತ್ತು 2ನೇ ಹಂತದ ಪಂಪಿಂಗ್ ಸ್ಟೇಷನ್‍ನಲ್ಲಿ ಹಾಗೂ ಡಿ.ಕೆ. ಹಳ್ಳಿ, ಹಾರೋಹಳ್ಳಿ ಮತ್ತು ತಾತಗುಣಿಯಲ್ಲಿ 3ನೇ ಹಂತದ ದುರಸ್ಥಿತಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದೇ 22 ಅಂದರೆ ಮಂಗಳವಾರ ಹಾಗೂ 23 ಬುಧವಾರದಂದು ನೀರು ಸರಬರಾಜು ಪೂರೈಕೆ ಸ್ಥಗಿತಗೊಳ್ಳಲಿದೆ.
ಮಂಗಳವಾರ ರಾತ್ರಿ 11 ಗಂಟೆಯಿಂದ ಬುಧವಾರ ಸಂಜೆ 4 ಗಂಟೆಯವರೆಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಯಶವಂತಪುರ, ಮಲ್ಲೇಶ್ವರಂ, ಚಾಮರಾಜಪೇಟೆ, ಕೋರಮಂಗಲ, ಕತ್ರಿಗುಪ್ಪೆ, ಬಸವನಗುಡಿ, ಶಿವಾಜಿನಗರ, ಜೆಜೆನಗರ, ಸದಾಶಿವನಗರ, ಹೆಬ್ಬಾಳ, ಮಡಿವಾಳ, ಯಲಚೇನಹಳ್ಳಿ ಮತ್ತು ಬನಶಂಕರಿ ಸೇರಿದಂತೆ ಬಹುತೇಕ ಪ್ರದೇಶಗಳಲ್ಲಿ ನೀರು ಪೂರೈಕೆ ಇರಲ್ಲ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv