ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸುಳ್ಯದ ನಾವೂರ್ ನಿವಾಸಿ ಅಬಿದ್ (22), ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಲ್(28) ಬಂಧಿತ ಆರೋಪಿಗಳಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಸಹಜ ಸ್ಥಿತಿಯತ್ತ ದಕ್ಷಿಣ ಕನ್ನಡ; ನಿಷೇಧಾಜ್ಞೆ ಮುಂದುವರಿಕೆ- ಅಂಗಡಿ, ಬಾರ್ ತೆರೆಯಲು ಅವಕಾಶ
ಒಂದು ವಾರದ ಹಿಂದೆಯಷ್ಟೇ ಪ್ರವೀಣ್ ಹತ್ಯೆ ಕೇಸ್ನಲ್ಲಿ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು. ಆರೋಪಿಗಳಿಂದ ತಲ್ವಾರ್ ಮತ್ತು ಬೈಕ್ ಅನ್ನು ವಶಪಡಿಸಿಕೊಂಡಿದ್ದಲ್ಲದೇ ಇನ್ನೂ ನಾಲ್ವರು ಆರೋಪಿಗಳಿಗಾಗಿ ಬಲೆ ಬೀಸಲಾಗಿತ್ತು. ಇದನ್ನೂ ಓದಿ: CWG 2022: ನಿಖತ್ ಜರೀನ್ಗೆ ಒಲಿದ ಚಿನ್ನ – ಬಾಕ್ಸಿಂಗ್ನಲ್ಲಿ ಭಾರತಕ್ಕಿಂದು ಹ್ಯಾಟ್ರಿಕ್ ಗೋಲ್ಡ್
ಈಗಾಗಲೇ ಬಂಧಿತನಾಗಿರುವ ಶಫೀಕ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ನೌಷನ್ ಬಗ್ಗೆ ಶಫೀಕ್ ಬಾಯಿಬಿಟ್ಟಿದ್ದ. ಬಳಿಕ ಸಿಸಿಟಿವಿ ದೃಶ್ಯ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸಹಾಯ ಮಾಡಿದ ಇನ್ನೂ ನಾಲ್ವರು ಆರೋಪಿಗಳು ಸಿಗಬೇಕಿದೆ ಎಂದು ಹೇಳಿದ್ದರು. ಇಂದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.