ಸಿಂಗಾಪುರ: ಟ್ವಿಟ್ಟರ್ನ್ನು (Twitter) ಎಲೋನ್ ಮಸ್ಕ್ (Elon Musk) ತನ್ನ ಒಡೆತನಕ್ಕೆ ತೆಗೆದುಕೊಂಡ ನಂತರ ಸಂಸ್ಥೆಯ ಉದ್ಯೋಗಿಗಳು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಿದ್ದಾರೆ. ಬೇರೆ ಬೇರೆ ದೇಶಗಳಲ್ಲಿ ಇರುವ ಸಂಸ್ಥೆಯ ಶಾಖೆಗಳಲ್ಲಿ ನಿರ್ವಹಣೆ ತೊಂದರೆ ಉಂಟಾಗಿದೆ. ದುರ್ವಾಸನೆ ಬೀರುವ ಶೌಚಾಲಯ, ಟಾಯ್ಲೆಟ್ ಪೇಪರ್ಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಸರಮಾಲೆಯಿಂದ ಉದ್ಯೋಗಿಗಳು ನರಳುತ್ತಿದ್ದಾರೆ. ಇದರ ಬೆನ್ನಲ್ಲೇ ಸಿಂಗಾಪುರದಲ್ಲಿ ಕಚೇರಿ ಬಾಡಿಗೆಯನ್ನು ಮಸ್ಕ್ ಪಾವತಿಸದ ಕಾರಣ ಟ್ವಿಟ್ಟರ್ ಉದ್ಯೋಗಿಗಳು ಕಚೇರಿಯಿಂದ ಹೊರನಡೆದಿದ್ದಾರೆ.
ಟ್ವಿಟರ್ನ ಸ್ಯಾನ್ ಫ್ರಾನ್ಸಿಸ್ಕೋ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಮಾಲೀಕರು ಕಟ್ಟಡದಿಂದ ಹೊರನಡೆಯುವಂತೆ ಒತ್ತಾಯಿಸಿದ್ದಾರೆ. “ಟ್ವಿಟ್ಟರ್ ಉದ್ಯೋಗಿಗಳು ಬಾಡಿಗೆ ಪಾವತಿಸದ ಕಾರಣ ಸಿಂಗಾಪುರದ ಕಚೇರಿಯಿಂದ ಉದ್ಯೋಗಿಗಳು ಹೊರನಡೆದಿದ್ದಾರೆ” ಎಂದು ಟಾಪ್ ಟೆಕ್ ವಿಶ್ಲೇಷಕ ಕೇಸಿ ನ್ಯೂಟನ್ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹಿಂದೂ ದೇವಾಲಯ ವಿರೂಪ – ಗೋಡೆ ಮೇಲೆ ಭಾರತ ವಿರೋಧಿ ಬರಹ
Advertisement
Advertisement
ಟ್ವಿಟ್ಟರ್ ಪ್ಲಾಟ್ಫಾರ್ಮರ್ನ ವ್ಯವಸ್ಥಾಪಕ ಸಂಪಾದಕ ಜೊಯ್ ಶಿಫ್ಲರ್, ಟ್ವಿಟರ್ ಉದ್ಯೋಗಿಗಳ ಸೌಲಭ್ಯಗಳನ್ನು ಕಡಿತಗೊಳಿಸುತ್ತದೆ. ಕುಟುಂಬ ಯೋಜನೆ ಮತ್ತು ಊಟ ಭತ್ಯೆಗಳು ಎಲ್ಲವನ್ನೂ ಕಡಿತಗೊಳಿಸಲಾಗುವುದು ಎಂದು ತಿಳಿಸಿದ್ದರು. ಉದ್ಯೋಗಿಗಳಿಗೆ ಉಚಿತವಾಗಿ ನೀಡಲಾಗಿದ್ದ ಊಟಕ್ಕೆ ಟ್ವಿಟ್ಟರ್ ಈಗ ಶುಲ್ಕ ವಿಧಿಸಲು ಯೋಜಿಸುತ್ತಿದೆ.
Advertisement
Advertisement
ಮಸ್ಕ್, ಟ್ವಿಟ್ಟರ್ ಕಚೇರಿಯ ಶಾಖೆಗಳಲ್ಲಿನ ಕ್ಲೀನರ್ಗಳನ್ನು ಕೆಲಸದಿಂದ ತೆಗೆದುಹಾಕಿದ ನಂತರ ಟಾಯ್ಲೆಟ್ ಪೇಪರ್ ಅನ್ನು ಬದಲಾಯಿಸಿ ಹೊಸದನ್ನು ಇಡಲು ಯಾರೂ ಇಲ್ಲದಂತಾಯಿತು. ಇದರಿಂದ ಉದ್ಯೋಗಿಗಳು ಸ್ವತಃ ತಾವೇ ಟಾಯ್ಲೆಟ್ ಪೇಪರ್ ಕೊಂಡೊಯ್ಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನೂ ಓದಿ: ಉಜ್ಬೇಕಿಸ್ತಾನದಲ್ಲಿ ಭಾರತದ ಕೆಮ್ಮಿನ ಸಿರಪ್ ಬಳಸಬೇಡಿ: WHO
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k