ನವದೆಹಲಿ: ಉತ್ತರ ಪ್ರದೇಶದ ಗಾಜಿಯಾಬಾದ್‍ನಲ್ಲಿ ನಡೆದ ಗ್ಯಾಂಗ್ ರೇಪ್‍ಗೆ (Ghaziabad Gangrape Case) ಟ್ವಿಸ್ಟ್ ಸಿಕ್ಕಿದೆ. ರೇಪ್ ಆರೋಪ ಹೊರಿಸಿ ಮಹಿಳೆ (Women) ಕಥೆ ಕಟ್ಟಿರುವ ಕುರಿತು ಪೊಲೀಸರ (Police) ತನಿಖೆ ವೇಳೆ ಬಯಲಾಗಿದೆ.
Advertisement
ಗಾಜಿಯಾಬಾದ್‍ನ ಪುರುಷರ ಗುಂಪೊಂದು ದೆಹಲಿ (Delhi) ಮೂಲದ 38 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ. ಮಹಿಳೆ ಮೇಲೆ ಅಮಾನುಷವಾಗಿ ಹಲ್ಲೆಯನ್ನೂ ನಡೆಸಿ, ಬಳಿಕ ಆರೋಪಿಗಳು ಮಹಿಳೆಯನ್ನು ರಸ್ತೆ ಬದಿಯಲ್ಲಿ ಎಸೆದು ಹೋಗಿದ್ದರು. ಅ.18 ರಂದು ಮುಂಜಾನೆ 3:30ರ ವೇಳೆಗೆ ನಂದಗ್ರಾಮ್ ಪೊಲೀಸ್ ಠಾಣೆಯ ಆಶ್ರಮದ ರಸ್ತೆ ಬಳಿ ಸಂತ್ರಸ್ತ ಮಹಿಳೆ ಪತ್ತೆಯಾಗಿದ್ದರು. ಮಹಿಳೆ ನೆಲೆದ ಮೇಲೆ ಬಿದ್ದಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಲ್ಲದೇ ಕ್ರೂರವಾಗಿ ಚಿತ್ರಹಿಂಸೆ ನೀಡಲಾಗಿರುವ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಸಂತ್ರಸ್ತ ಮಹಿಳೆ ಸುಳ್ಳು ಆರೋಪ ಮಾಡಿರುವ ಸತ್ಯ ಬಯಲಾಗಿದೆ. ಇದನ್ನೂ ಓದಿ: ನಿರ್ಭಯಾ ನೆನಪಿಸಿದ ಇನ್ನೊಂದು ಆಘಾತಕಾರಿ ರೇಪ್ ಕೇಸ್ – ಖಾಸಗಿ ಭಾಗಕ್ಕೆ ರಾಡ್ ತುರುಕಿ ಗ್ಯಾಂಗ್‌ರೇಪ್
Advertisement
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮೀರತ್‍ನ ಐಜಿ ಪ್ರವೀಣ್ ಕುಮಾರ್, ಮಹಿಳೆ ಆಸ್ತಿ ವಿವಾದದಲ್ಲಿ ಆರೋಪಿಯನ್ನು ಸಿಲುಕಿಸಲು ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಸುಳ್ಳು ಆರೋಪ ಹೊರಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಆರೋಪಿ ಮತ್ತು ಮಹಿಳೆ ನಡುವೆ ಆಸ್ತಿ ವಿವಾದವೊಂದಿದೆ. ಹಾಗಾಗಿ ಆಜಾದ್ ಎಂಬಾತನೊಂದಿಗೆ ಸೇರಿಕೊಂಡು ಪ್ಲಾನ್ ಮಾಡಿ ಈ ರೀತಿ ಕಥೆ ಕಟ್ಟಿದ್ದಾರೆ ಹಾಗಾಗಿ ಆಜಾದ್ ಮತ್ತು ಆತನ ಸಹಚರರಾದ ಗೌರವ್ ಮತ್ತು ಅಫ್ಜಲ್ ನನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದರು. ಇದನ್ನೂ ಓದಿ: KPTCL ಅಸಿಸ್ಟೆಂಟ್ ಪರೀಕ್ಷಾ ಅಕ್ರಮ – ಮತ್ತೆ ಆರು ಮಂದಿ ಅರೆಸ್ಟ್
Advertisement
The Ghaziabad gangrape story of a Delhi woman being abducted, gang-raped and a rod being inserted in her private part was found to be false. As per police, the story was concocted by the woman and her friends to frame rivals in a property dispute. pic.twitter.com/HXn5uBDxoM
— Piyush Rai (@Benarasiyaa) October 20, 2022
ಈಗಾಗಲೇ ಘಟನೆ ಕುರಿತು ಮತ್ತಷ್ಟು ಮಾಹಿತಿ ಕಲೆಹಾಕಿದ್ದೇವೆ. ಮೂವರು ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿದ್ದೇವೆ. ಇದೀಗ ಸುಳ್ಳು ಆರೋಪ ಹೊರಿಸಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.