ಕೋಲಾರ: ಟಿವಿ ವ್ಯಾಲ್ಯೂಮ್ ವಿಚಾರದಲ್ಲಿ ಅಕ್ಕಪಕ್ಕದ ಮನೆಯವರ ನಡುವೆ ಗಲಾಟೆಯಾಗಿ ಕೋರ್ಟ್ ಮೆಟ್ಟಿಲೇರಿರುವ ಘಟನೆ ನಗರದಲ್ಲಿ ನಡೆದಿದೆ.
ಟಿವಿ ವ್ಯಾಲ್ಯೂಮ್ ಜಾಸ್ತಿ ಇಟ್ಟಿದ್ದ ವ್ಯಕ್ತಿಯೊಬ್ಬರನ್ನು ಪ್ರಶ್ನೆ ಮಾಡಿದ್ದ ಮಹಿಳೆ ಹಾಗೂ ತಂದೆ-ತಾಯಿ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ನೀಡಲಾಗಿದೆ. ಇನ್ನೂ ಈ ಗಲಾಟೆಯು ಮನೆಯ ಬಳಿ ಮಾತ್ರವಲ್ಲದೆ ಆಸ್ಪತ್ರೆಯಲ್ಲಿ ಹಾಗೂ ಪೊಲೀಸರ ಎದುರೇ ವ್ಯಕ್ತಿಯಿಂದ ಹಲ್ಲೆಗೆ ಯತ್ನ ನಡೆದಿದೆ.
Advertisement
Advertisement
ಕೋಲಾರ ನಗರದ ಪಿಸಿ ಬಡಾವಣೆಯಲ್ಲಿ ಕಳೆದ 2 ದಿನಗಳ ಹಿಂದೆ ಈ ಗಲಾಟೆ ನಡೆದಿದ್ದು, ಪರಸ್ಪರ ದೂರು ಪ್ರತಿ ದೂರು ದಾಖಲಾಗಿದೆ. ಇನ್ನೂ ಇದೆ 22 ರಂದು ಪಿ.ಸಿ ಬಡವಾಣೆಯ ರೋಹಿತ್ ಮನೆಯಲ್ಲಿ ಟಿವಿ ವ್ಯಾಲ್ಯೂಮ್ ಹೆಚ್ಚಾಗಿದ್ದನ್ನು ಪಕ್ಕದ ಮನೆಯ ಮಂಜುಳಾ ಎಂಬವರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಗಲಾಟೆ ಮಾಡಿರುವ ರೋಹಿತ್ ಮಂಜುಳಾ ಹಾಗೂ ತಂದೆ ಬಾಬು, ತಾಯಿ ರಾಧಮ್ಮ ಮೇಲೆ ಹಲ್ಲೆ ಮಾಡಿದ್ದಾನೆ. ಜೊತೆಗೆ ಜಾತಿ ನಿಂದನೆ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಇದನ್ನೂ ಓದಿ: ಕ್ರಿಕೆಟ್ ದಂತಕಥೆಗಳೊಂದಿಗೆ ಬಾಲಿವುಡ್ ತಾರೆಗಳ ಕ್ರಿಕೆಟ್ ಪಂದ್ಯ
Advertisement
Advertisement
ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್‍ಗೂ ಹಾನಿ ಮಾಡಿರುವ ರೋಹಿತ್ ವೀಡಿಯೋ ಸದ್ಯ ವೈರಲ್ ಆಗಿದೆ. ರೋಹಿತ್ ಮನೆಯಲ್ಲಿ ಯಾರೂ ಇಲ್ಲದ ವೇಳೆ ಹಲ್ಲೆ ಮಾಡಿದ್ದಾನೆ. ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ವೇಳೆ ಹಲ್ಲೆಗೆ ಯತ್ನ ನಡೆಸಿರುವ ವೀಡಿಯೋ ಕೂಡ ಸದ್ಯ ವೈರಲ್ ಆಗಿದೆ. ಇದನ್ನೂ ಓದಿ: ನಾವು ಮಾತುಕತೆಗೆ ಸಿದ್ಧರಿದ್ದೇವೆ ಎಂದ ರಷ್ಯಾ!
ಕೋಲಾರ ನಗರ ಠಾಣೆ ಪೊಲೀಸರು ರೋಗಿತ್ ಹಾಗೂ ಪತ್ನಿ ದಿವ್ಯಾ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಮಂಜುಳಾ ಹಾಗೂ ತಂದೆ-ತಾಯಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.