ವಾಷಿಂಗ್ಟನ್: ನಾವು ಉಕ್ರೇನ್ ಜೊತೆ ಮಾತುಕತೆಗೆ ಸಿದ್ಧರಾಗಿದ್ದೇವೆ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ತಿಳಿಸಿದ್ದಾರೆ.
ಉಕ್ರೇನ್ ಸೇನೆಯು ದಾಳಿಯನ್ನು ನಿಲ್ಲಿಸಿದ ನಂತರ, ನಾವು ಅವರ ಜೊತೆ ಮಾತುಕತೆಗೆ ಸಿದ್ಧರಿದ್ದೇವೆ. ಈ ವೇಳೆ ಪುಟಿನ್ ಅವರು ಸಶಸ್ತ್ರೀಕರಣದ ಕುರಿತು ಮಾತುಕತೆ ನಡೆಸಲು ಸಿದ್ಧರಾಗಿದ್ದಾರೆ ಎಂದ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಹೇಳಿದ್ದಾರೆ. ಇದನ್ನೂ ಓದಿ: ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!
Advertisement
Advertisement
ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಹಿನ್ನೆಲೆ, ಖಾರ್ಕಿವ್ ಸಿಟಿಯಲ್ಲಿ ಮತ್ತೆ ಬಾಂಬ್ ಬ್ಲಾಸ್ಟ್ ಆರಂಭವಾಗಿದೆ. ಈ ಹಿನ್ನೆಲೆ ಸೈರನ್ ಹಾಕಿ ಜನರನ್ನ ಅಂಡರ್ ಗ್ರೌಂಡ್ ಹೋಗುವಂತೆ ಮಾಹಿತಿ ನೀಡಲಾಗಿದೆ. ಹೀಗಾಗಿ ಜನರು ಸೈರನ್ ಸೌಂಡ್ ಕೇಳಿ ಮತ್ತೆ ಅಂಡರ್ ಗ್ರೌಂಡ್ ಗೆ ವಾಪಸ್ ಆಗಿದ್ದಾರೆ.
Advertisement
Advertisement
ಉಕ್ರೇನ್ ನ ಕೈವ್ ಭಾಗದಲ್ಲಿ ರಷ್ಯಾ ದಾಳಿ ಮುಂದುವರಿದಿದ್ದು, ಕಳೆದ 40 ನಿಮಿಷಗಳಲ್ಲಿ ಕೈವ್‍ನಲ್ಲಿ ಅತಿ ಹೆಚ್ಚಿನ ದಾಳಿ ನಡೆಯುದೆ. 40 ನಿಮಿಷ ಅಂತರದಲ್ಲಿ ಮೂರು ಡಜನ್ಗೂ ಅಧಿಕ ಕ್ಷಿಪಣಿಗಳನ್ನು ಹಾರಿಸಲಾಗಿದೆ. ಈ ಬಗ್ಗೆ ಯುಎಸ್ ಸೆನೆಟರ್ ರೂಬಿಯೊರಿಂದ ಮಾಹಿತಿ ಸಿಕ್ಕಿದೆ.
ಇಂದು ರೊಮೇನಿಯಾದ ಬುಕಾರೆಸ್ಟ್ ಗೆ ಎರಡು ವಿಮಾನಗಳು, ನಾಳೆ ಹಂಗೇರಿಯ ಬುಡಾಪೆಸ್ಟ್ ಗೆ ಒಂದು ವಿಮಾನ ಕಳುಹಿಸಲು ನಿರ್ಧಾರ ಮಾಡಲಾಗಿದೆ. ಭಾರತ ಸರ್ಕಾರ ಕೂಡ ವಿಶೇಷ ವಿಮಾನಗಳನ್ನು ಕಳುಹಿಸಲಿದೆ ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!