– ದೂರದ ಪ್ರದೇಶದಲ್ಲಿ ಸಿಲುಕಿದ್ದಾರೆ 10 ಭಾರತೀಯರು
– ಸಾವಿನ ಸಂಖ್ಯೆ 11,200ಕ್ಕೆ ಏರಿಕೆ
ನವದೆಹಲಿ/ಅಂಕಾರಾ: ಭೀಕರ ಭೂಕಂಪದಿಂದಾಗಿ (Earthquake) ನಲುಗಿರುವ ಟರ್ಕಿ (Turkey) ಹಾಗೂ ಸಿರಿಯಾ (Syria) ದೇಶಗಳಲ್ಲಿ ಇಲ್ಲಿಯವರೆಗೆ ಸಾವಿನ ಸಂಖ್ಯೆ 11,200ಕ್ಕೇರಿದೆ. ಈ ನಡುವೆ ಒರ್ವ ಭಾರತೀಯ (Indian) ನಾಪತ್ತೆಯಾಗಿದ್ದು, ಇನ್ನೂ 10 ಜನರು ದೂರದ ಪ್ರದೇಶದಲ್ಲಿ ಸಿಲುಕಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಬುಧವಾರ ತಿಳಿಸಿದೆ.
Advertisement
Advertisement
ಈ ಬಗ್ಗೆ ಮಾಹಿತಿ ನೀಡಿರುವ ಎಂಇಎ ಕಾರ್ಯದರ್ಶಿ ಸಂಜಯ್ ವರ್ಮಾ, ಟರ್ಕಿಯ ಅದಾನದಲ್ಲಿ ಭಾರತದ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಭೂಕಂಪ ಪೀಡಿತ ಪ್ರದೇಶದ ದೂರದ ಭಾಗಗಳಲ್ಲಿ 10 ಭಾರತೀಯರು (Indians) ಸಿಲುಕಿಕೊಂಡಿದ್ದಾರೆ. ಅದೃಷ್ಟವಶಾತ್ ಅವರೆಲ್ಲರೂ ಸುರಕ್ಷಿತರಾಗಿದ್ದಾರೆ. ಆದರೆ ವ್ಯಾಪಾರದ ಹಿನ್ನೆಲೆ ಟರ್ಕಿಗೆ ಭೇಟಿ ನೀಡಿದ್ದ ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ. ನಾವು ಅವರ ಕುಟುಂಬದೊಂದಿಗೆ ಹಾಗೂ ಅವರು ಉದ್ಯೋಗಿಯಾಗಿರುವ ಬೆಂಗಳೂರಿನ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ಮಾಹಿತಿ ನೀಡಿದರು.
Advertisement
Advertisement
ಸುಮಾರು 3,000 ಭಾರತೀಯರು ಟರ್ಕಿಯಲ್ಲಿ ವಾಸವಿದ್ದು, ಅವರಲ್ಲಿ 75 ಜನರು ಸಹಾಯವನ್ನು ಕೋರಿ ಕರೆ ಮಾಡಿರುವುದಾಗಿ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಹೊಲದಲ್ಲಿ ಟ್ರ್ಯಾಕ್ಟರ್ ಓಡಿಸಿದ ಧೋನಿ
ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿರುವ ಭೂಕಂಪದಿಂದಾಗಿ ಅಲ್ಲಿನ ಜನಜೀವನ ತತ್ತರಿಸಿ ಹೋಗಿದೆ. ಕಟ್ಟಡಗಳು ಧರೆಗುರುಳಿದ್ದು, ಅವಶೇಷಗಳಡಿ ಸಿಲುಕಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಲ್ಲಿಯವರೆಗೆ 11,200 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೂ ಕೂಡಾ ಅವಶೇಷಗಳಡಿಯಿಂದ ಜನರ ಚೀರಾಟ ಕೇಳಿಸುತ್ತಿದ್ದು, ಅವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.
ಭಾರತ ಈಗಾಗಲೇ ಭೂಕಂಪ ಪೀಡಿತ ದೇಶಕ್ಕೆ ವೈದ್ಯಕೀಯ ಸರಬರಾಜು, ವಿಶೇಷ ಶೋಧ ತಂಡ ಸೇರಿದಂತೆ ಪರಿಹಾರ ಸಾಮಾಗ್ರಿಗಳನ್ನು ಕಳುಹಿಸಿದೆ. ದೇಶದಲ್ಲಿ ಸರಣಿ ಭೂಕಂಪವಾಗುತ್ತಿರುವ ಹಿನ್ನೆಲೆ ಸಹಾಯ ಮಾಡಲು ಎರಡು ಸಿ-12 ಗ್ಲೋಬ್‌ಮಾಸ್ಟರ್ ಮಿಲಿಟರಿ ವಿಮಾನಗಳಲ್ಲಿ ಈ ಎಲ್ಲಾ ಸಹಾಯವನ್ನು ಕಳುಹಿಸಲಾಗಿದೆ. ಇದನ್ನೂ ಓದಿ: ಯುಪಿಎ ಅವಧಿಯದ್ದು ಭ್ರಷ್ಟಾಚಾರದ ದಶಕ, ನಮ್ಮದು ಭಾರತದ ದಶಕ: ನರೇಂದ್ರ ಮೋದಿ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k