– 2004-2014ರ ಅವಧಿ ಬರೀ ಹಗರಣಗಳಿಂದಲೇ ತುಂಬಿತ್ತು
– ವಿಪಕ್ಷಗಳನ್ನು ಇಡಿ ಒಂದಾಗಿಸುತ್ತಿದೆ
– ವಿಪಕ್ಷಗಳನ್ನು ಇಡಿ ಒಂದಾಗಿಸುತ್ತಿದೆ
ನವದೆಹಲಿ: ಯುಪಿಎ ಆಳ್ವಿಕೆಯ 10 ವರ್ಷದಲ್ಲಿ ಹಣದುಬ್ಬರ ಡಬಲ್ ಡಿಜಿಟ್‍ನಲ್ಲಿತ್ತು. ದೇಶದ ಸ್ವಾತಂತ್ರ್ಯೋತ್ತರ ಇತಿಹಾಸದಲ್ಲಿಯೇ 2004-2014ರ ಅವಧಿ ಬರೀ ಹಗರಣಗಳಿಂದಲೇ (Corruption) ತುಂಬಿತ್ತು. ಆ 10 ವರ್ಷಗಳಲ್ಲಿ ದೇಶದ ವಿವಿಧೆಡೆ ಭಯೋತ್ಪಾದಕ ದಾಳಿಗಳು ನಡೆದಿದ್ದವು. ಆದರೆ ನಮ್ಮ ಅವಧಿ ಭಾರತದ (India) ದಶಕವಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಈಗ ಬೆಳವಣಿಗೆಯಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಮೇಲೆ ರಾಹುಲ್ ಗಾಂಧಿ (Rahul Gandhi) ಭಾಷಣ ಮಾಡುವಾಗ ಮೋದಿ-ಅದಾನಿ (Midi -Adani) ಸಂಬಂಧವನ್ನು ಪ್ರಶ್ನಿಸಿ ಹಲವು ಪ್ರಶ್ನೆ ಕೇಳಿದ್ದರು. ಇದಕ್ಕೆ ನಿರೀಕ್ಷೆಯಂತೆಯೇ ಪ್ರಧಾನಿ ಮೋದಿ ಸಂಸತ್ ಸಾಕ್ಷಿಯಾಗಿ, ವ್ಯಂಗ್ಯಭರಿತವಾಗಿ ತಿರುಗೇಟು ನೀಡಿದ್ದಾರೆ.
Advertisement
ಕೆಲವರಿಗೆ ನನ್ನ ಟೀಕಿಸುವುದರಿಂದ ಏನೋ ಖುಷಿಯಾಗುತ್ತದೆ. ಅವರಿಗೆ ದೇಶದ ಏಳಿಗೆ ಬೇಕಿಲ್ಲ. ಆದರೆ ನಾವು ಬಡವರಿಗಾಗಿ ಕೆಲಸ ಮಾಡುತ್ತಿದ್ದೇವೆ. ನಿಮ್ಮ ಟೀಕೆ ಟಿಪ್ಪಣಿಗಳನ್ನು ಜನ ಕೇಳಿಸಿಕೊಳ್ಳಲ್ಲ ಎಂದು ರಾಹುಲ್ ಗಾಂಧಿಗೆ ಮೋದಿ ತಿರುಗೇಟು ನೀಡಿದರು.
Advertisement
Advertisement
ಯುಪಿಎ (UPA) ಅವಧಿಯ 2ಜಿ, ಕಲ್ಲಿದ್ದಲು ಕಾಮನ್‌ವೇಲ್ತ್ ಗೇಮ್ಸ್ ಹಗರಣಗಳನ್ನು ಪ್ರಸ್ತಾಪಿಸಿದ ಮೋದಿ, ಯುಪಿಎ ಆಳ್ವಿಕೆಯ 10 ವರ್ಷ ಭ್ರಷ್ಟಾಚಾರ ಶಕೆಯಾಗಿತ್ತು. ಕಾಂಗ್ರೆಸ್ (Congress) ಪರಿವಾರವಾದಿ ಪಕ್ಷ. ನಾವು ಬಂದ ಮೇಲೆ ಭ್ರಷ್ಟಾಚಾರ ಕಡಿಮೆ ಆಯ್ತು. ಕಾಂಗ್ರೆಸ್ ಪಕ್ಷದ ಕುಸಿತ ಹಾರ್ವರ್ಡ್ ವಿವಿ ಸೇರಿದಂತೆ ಜಗತ್ತಿನ ಪ್ರಸಿದ್ಧ ವಿವಿಗಳಿಗೆ ಪಾಠವಾಗಲಿದೆ ಎಂದು ರಾಹುಲ್ ಗಾಂಧಿಯ ಕಾಲೆಳೆದರು.
Advertisement
ರಾಹುಲ್‍ಗಾಂಧಿ ಜಮ್ಮುಕಾಶ್ಮೀರದಲ್ಲಿ ನಡೆಸಿದ ಭಾರತ್ ಜೋಡೋ ಯಾತ್ರೆಯನ್ನು ಪ್ರಸ್ತಾಪಿಸಿದ ಮೋದಿ, ಕಣಿವೆಯ ಉಗ್ರರಿಗೆ ಒಂಬತ್ತು ವರ್ಷದ ಹಿಂದೆ ಸವಾಲಾಕಿದ್ದನ್ನು ನೆನಪಿಸಿದರು. ಹರ್ ಘರ್ ತಿರಂಗಾ ಯೋಜನೆ ಭಾಗವಾಗಿ ಕಾಶ್ಮೀರದ ಮನೆ ಮನೆಗಳ ಮೇಲೆ ತಿರಂಗಾ ಹಾರುವಂತೆ ಮಾಡಿದೆವು ಎಂದರು. 40 ಕೋಟಿ ಭಾರತೀಯರು ನನ್ನ ರಕ್ಷ ಕವಚ ಎಂದು ಮೋದಿ ಹೇಳುತ್ತಿದ್ದಂತೆ, ಬಿಜೆಪಿ ಸಂಸದರು ಮೇಜು ಕುಟ್ಟಿ ಸ್ವಾಗತಿಸಿದರು.
ಮೋದಿ ಮಾತುಗಳು:
ದೇಶದ ಉಜ್ವಲ ಭವಿಷ್ಯಕ್ಕಾಗಿಯೇ ಮೋದಿ ಮೇಲೆ ಜನ ವಿಶ್ವಾಸ ಇಟ್ಟಿದ್ದಾರೆ. ಅವರ ನಂಬಿಕೆಯೇ ನಮ್ಮ ರಕ್ಷಾ ಕವಚ. ವಿಪಕ್ಷಗಳ ಸುಳ್ಳು ಆರೋಪಗಳನ್ನು ಜನ ನಂಬುವುದಿಲ್ಲ. ಸರ್ಕಾರದ ಯೋಜನೆಗಳಿಂದ ಅನುಕೂಲ ಪಡೆಯುತ್ತಿರುವ ಜನಕ್ಕೆ ಸತ್ಯ ಏನೆಂದು ಗೊತ್ತು. 2030ರ ದಶಕ ಭಾರತದ ದಶಕವಾಗಲಿದೆ. ನನ್ನ ಜೀವನ ಈ ದೇಶಕ್ಕೆ ಮುಡಿಪು.
ಕಳೆದ 9 ವರ್ಷಗಳಿಂದ ವಿಪಕ್ಷಗಳು ಹಿಂದೆ ಮುಂದೆ ನೋಡದೇ ಬರೀ ಆರೋಪಗಳನ್ನೇ ಮಾಡುತ್ತಿವೆ. ಆರ್‌ಬಿಐ, ಚುನಾವಣಾ ಆಯೋಗ, ಭಾರತೀಯ ಸೇನೆ ಮೇಲೆ ಇಷ್ಟ ಬಂದಂತೆ ಆರೋಪ ಮಾಡಲಾಗುತ್ತಿದೆ. ಧನಾತ್ಮಕ ವಿಮರ್ಷೆಗಳನ್ನು ಸ್ವಾಗತಿಸುತ್ತೇವೆ. ಈಗ ವಿಪಕ್ಷ ನಾಯಕರು ಒಗ್ಗೂಡುತ್ತಿರುವುದು ದೇಶಕ್ಕಾಗಿ ಅಲ್ಲ. ಜಾರಿ ನಿರ್ದೇಶನಾಲಯದ ಕಾರಣದಿಂದಲೇ ಒಂದಾಗುತ್ತಿದ್ದಾರೆ. ವಿಪಕ್ಷಗಳನ್ನು ಇಡಿ ಒಗ್ಗೂಡಿಸುತ್ತಿದೆ.
ಈಗ ಕಾಶ್ಮೀರಕ್ಕೆ ಎಲ್ಲರೂ ಹೋಗಿ ಬರುತ್ತಿದ್ದಾರೆ. ಈ ಹಿಂದೆ ಲಾಲ್‍ಚೌಕ್‍ನಲ್ಲಿ ತಿರಂಗಾ ಹಾರಿಸುವುದು ಕನಸಾಗಿತ್ತು. ಧಮ್ ಇದ್ದರೆ ತಿರಂಗಾ ಹಾರಿಸಿ ಎಂದು ಉಗ್ರರು ಸವಾಲ್ ಹಾಕುತ್ತಿದ್ದರು. ನಮ್ಮ ಸರ್ಕಾರ ಆ ಪರಿಸ್ಥಿತಿಯನ್ನು ಬದಲಾಯಿಸಿದೆ. ಲಾಲ್‍ಚೌಕ್‍ನಲ್ಲಿ ನಿರ್ಭಿಡೆಯಿಂದ ಧ್ವಜ ಹಾರಿಸುತ್ತಿದ್ದೇವೆ. ಈ ಹಿಂದೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಉಗ್ರರು ದಾಳಿ ನಡೆಸುತ್ತಿದ್ದರು.
मोदी पे भरोसा अख़बार की सुर्ख़ियों से पैदा नहीं हुआ है: PM @NarendraModi जी #ModiInParliament pic.twitter.com/1WR4pupufj
— Piyush Goyal (@PiyushGoyal) February 8, 2023
ಇಡೀ ವಿಶ್ವವೇ ಈಗ ಭಾರತದತ್ತ ಆಶಾ ಭಾವನೆಯಿಂದ ನೋಡುತ್ತಿವೆ. ಕೊರೊನಾ ಸಂದರ್ಭದಲ್ಲಿ ಮೇಡ್ ಇನ್ ಇಂಡಿಯಾ ಲಸಿಕೆ ತಯಾರಿಸಿ ಜನರಿಗೆ ಉಚಿತವಾಗಿ ನೀಡಲಾಯಿತು. 150ಕ್ಕೂ ಅಧಿಕ ದೇಶಗಳಿಗೆ ವ್ಯಾಕ್ಸಿನ್ ಹಾಗೂ ಔಷಧಿ ಕಳುಹಿಸಿದ್ದೇವೆ. ಇದರಿಂದ ಭಾರತದ ಗೌರವ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿದೆ. ಈ ಹಿಂದೆ ಸಣ್ಣ ಸಣ್ಣ ತಂತ್ರಜ್ಞಾನಕ್ಕೆ ದೇಶ ಪರದಾಡುತ್ತಿತ್ತು. ಇಂದು ಭಾರತದಲ್ಲಿ ತಂತ್ರಜ್ಞಾನವಿದ್ದು ಒಂದು ಕಡೆ ವ್ಯಾಕ್ಸಿನ್ ಹಾಕಿಸಿದರೆ ಮತ್ತೊಂದು ಕಡೆ ಮೊಬೈಲ್ ನಲ್ಲಿ ಅದರ ಪ್ರಮಾಣ ಪತ್ರ ಲಭಿಸುತ್ತಿತ್ತು.
ಭಾರತದಲ್ಲಿ 90,000 ಸ್ಟಾರ್ಟ್ ಅಪ್ ಗಳಿದ್ದು, ಕಡಿಮೆ ಸಮಯದಲ್ಲಿ 108 ಯೂನಿಕಾರ್ನ್‌ಗಳು ಬೆಳೆದಿವೆ. ಹಲವು ಸವಾಲುಗಳ ನಡುವೆ ದೊಡ್ಡ ಪ್ರಮಾಣದಲ್ಲಿ ಬೆಳೆದಿವೆ. ಮೊಬೈಲ್ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಎನರ್ಜಿ ಬಳಕೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಮರು ಬಳಕೆ ಶಕ್ತಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಭಾರತ ಬೆಳೆದಿದೆ. ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸಂಖ್ಯೆ ನಾಲ್ಕು ಕೋಟಿ ಹೆಚ್ಚಿದ್ದು, ಕ್ರೀಡೆಯಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಮೊಬೈಲ್ ಡೇಟಾ ದರ ಕಡಿಮೆಯಾಗಿದೆ. ಸ್ಥಿರ ಸರ್ಕಾರದಿಂದ ಮಾತ್ರ ರಾಷ್ಟ್ರ ಹಿತಕ್ಕಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k