ತುಮಕೂರು: ಶಿರಾ ಬಳಿ ನಡೆದ ಅಪಘಾತದಲ್ಲಿ 9 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಕೂಲಿ ಕಾರ್ಮಿಕರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹೌದು. ಅಪಘಾತದಲ್ಲಿ ಮೃತಪಟ್ಟ 9 ಮಂದಿಯಲ್ಲಿ 6 ಜನರು ನೇತ್ರದಾನ ಮಾಡಲು ಮುಂದಾಗಿದ್ದಾರೆ. ನೋವಿನ ಮಧ್ಯೆಯೂ ಕುಟುಂಬಸ್ಥರು ಮನೆ ಮಕ್ಕಳ ನೇತ್ರದಾನ ಮಾಡಿದ್ದಾರೆ. ಮೃತಪಟ್ಟ ಚಾಲಕ ಕೃಷ್ಣ, ಸಿದ್ದಯ್ಯಸ್ವಾಮಿ, ನಿಂಗಣ್ಣ, ಮೀನಾಕ್ಷಿ, ಸುಜಾತಾ, ಪ್ರಭುಸ್ವಾಮಿ ಎಂಬವರ ನೇತ್ರದಾನ ಮಾಡಲು ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಶಿರಾ ತಾಲೂಕಾಸ್ಪತ್ರೆ ಮುಂದೆ ಮೃತರ ಸಂಬಂಧಿಕರ ಗೋಳಾಟ ಹೇಳತೀರದಂತಾಗಿದೆ.
Advertisement
Advertisement
ಈ ಸಂಬಂಧ ಶಿರಾ ತಹಶಿಲ್ದಾರ್ ಮಮತಾ ಸುದ್ದಿಗಾರರೊಂದಿಗೆ ಮಾತನಾಡಿ, ಮೃತರ ಕುಟುಂಬಸ್ಥರು ಸಾರ್ಥಕ ಕೆಲಸ ಮಾಡಿದ್ದಾರೆ. ಐ ಡೊನೇಟ್ ಮಾಡಿ ಮಾನವೀಯತೆ ಮೆರೆದಿದ್ದಾರೆ. 6 ಜನರ ಕುಟುಂಬಸ್ಥರು ಸ್ವ-ಇಚ್ಛೆಯಿಂದ ಕಣ್ಣು ದಾನ ಮಾಡಲು ಒಪ್ಪಿಕೊಂಡಿದ್ದಾರೆ. ಇನ್ನೊಬ್ಬರ ಬಾಳಲ್ಲಿ ಬೆಳಕಾಗಲು ಬಯಸಿದ್ದಾರೆ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಅಲ್ಲದೆ ದುಃಖ ಸಹಿಸುವ ಶಕ್ತಿ ಬರಲಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತುಮಕೂರಿನ ಭೀಕರ ರಸ್ತೆ ಅಪಘಾತಕ್ಕೆ ಪ್ರಧಾನಿ ಸಂತಾಪ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ
Advertisement
Advertisement
ಇತ್ತ ನೇತ್ರದಾನದ ಬಳಿಕ ಮೃತ ಚಾಲಕ ಕೃಷ್ಣನ ತಂದೆ ತಿಪ್ಪಾರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನನ್ನ ಮಗನನ್ನು ಬೇರೆಯವರ ಕಣ್ಣಿನ ಮೂಲಕ ನೋಡಬೇಕು. ಹಾಗಾಗಿ ಕಣ್ಣು ದಾನ ಮಾಡಿದ್ದೇವೆ. ಕಣ್ಣು ದಾನದ ಮೂಲಕ ಮಗ ಜೀವಂತ ಆಗಿರಬೇಕು ಎಂದು ಬಯಸಿದ್ದೇವೆ. ಹಾಗಾಗಿ ಸ್ವ-ಇಚ್ಛೆಯಿಂದ ನೇತ್ರದಾನ ಮಾಡಿಸಿದ್ದೇವೆ ಎಂದು ಹೇಳಿದರು.
ಸದ್ಯ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರ ಮಾಡಲಾಗಿದೆ. ಒಟ್ಟು 4 ಅಂಬುಲೆನ್ಸ್‍ನಲ್ಲಿ ಮೃತದೇಹವನ್ನು ರವಾನಿಸಲಾಗಿದೆ. ಇದನ್ನೂ ಓದಿ: ತುಮಕೂರಿನ ಶಿರಾದಲ್ಲಿ ಭೀಕರ ಅಪಘಾತ – ಕ್ರೂಸರ್ ಚಕ್ರಕ್ಕೆ 9 ಮಂದಿ ಬಲಿ?