ಬೆಳಗಾವಿ: ಚರ್ಚ್ ಫಾದರ್ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ತಲ್ವಾರ್ನಿಂದ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.
ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಜೋಸೆಫ್ ದಿ ವರ್ಕರ್ ಚರ್ಚ್ ಫಾದರ್ ಫ್ರಾನ್ಸಿಸ್ ಮೇಲೆ ಹಲ್ಲೆಗೆ ಯತ್ನ ನಡೆಸಲಾಗಿದ್ದು, ಘಟನೆಯಲ್ಲಿ ಫಾದರ್ ಫ್ರಾನ್ಸಿಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಪತಿಗೆ ಡೈವೋರ್ಸ್ ಕೊಡು, ಮುಸ್ಲಿಂ ಯುವಕನ ಜೊತೆ ಮದುವೆ ಮಾಡಿಸ್ತೀನಿ – ನೂರ್ ಜಹಾನ್ ಅರೆಸ್ಟ್
ಚರ್ಚ್ಗೆ ಸೇರಿದ ಮನೆಯಲ್ಲಿ ತಂಗಿದ್ದ ಫಾದರ್ ಮನೆಯಿಂದ ಹೊರಗೆ ಬರುವ ವೇಳೆ ಕಾಂಪೌಂಡ್ ಜಿಗಿದು ಮೊದಲ ಮಹಡಿಯ ಮನೆ ಎದುರು ಬಂದಿದ್ದ ದುಷ್ಕರ್ಮಿ ಫಾದರ್ ಬಾಗಿಲು ತೆರೆಯುತ್ತಿದ್ದಂತೆಯೇ ತಲ್ವಾರ್ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಇದನ್ನೂ ಓದಿ: ನಡುರಾತ್ರಿ ಕಾರು ಹಿಂಬಾಲಿಸಿ ಅಪರಿಚಿತನ ಕಿರಿಕ್ – ಪುಂಡನ ಪುಂಡಾಟಕ್ಕೆ ಇಡೀ ಕುಟುಂಬ ಹೈರಾಣು
ಬಳಿಕ ದುಷ್ಕರ್ಮಿಯಿಂದ ಪಾರಾದ ಫಾದರ್ ಕೆಳಗಿಳಿದು ಹೊರಗೆ ಬಂದಿದ್ದಾರೆ. ನಂತರ ಫಾದರ್ ರಕ್ಷಣೆಗೆ ಸ್ಥಳೀಯರು ಧಾವಿಸುತ್ತಿದ್ದಂತೆ ದುಷ್ಕರ್ಮಿ ಸ್ಥಳದಿಂದ ಪರಾರಿಯಾಗಿದ್ದಾನೆ. ಇನ್ನೂ ದುಷ್ಕರ್ಮಿಯ ಚಲನವಲನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಘಟನೆ ಕುರಿತಂತೆ ಫಾದರ್ ಫ್ರಾನ್ಸಿಸ್ ಅವರಿಂದ ಮಾಹಿತಿ ಪಡೆದಿದ್ದಾರೆ.