ಈ ಹಿಂದೆ ನಾವು ಹರಿಯಾಲಿ ಚಿಕನ್, ಹರಿಯಾಲಿ ಮಟನ್ ರೆಸಿಪಿಗಳನ್ನು ನೋಡಿದ್ದೇವೆ. ಇಂದು ನಾವು ರುಚಿಕರವಾದ ಹರಿಯಾಲಿ ಎಗ್ ಕರಿ ರೆಸಿಪಿಯನ್ನು ನೋಡೋಣ. ಚಪಾತಿ, ಅನ್ನದೊಂದಿಗೆ ಇದರ ಕಾಂಬಿನೇಷನ್ ಪರ್ಫೆಕ್ಟ್ ಆಗಿದ್ದು, ಒಮ್ಮೆ ಇದರ ರುಚಿ ನೋಡಿದರೆ ಮತ್ತೆ ಮತ್ತೆ ಟ್ರೈ ಮಾಡುತ್ತೀರಿ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಿದ ಮೊಟ್ಟೆ – 4
ಅರಿಶಿನ ಪುಡಿ – ಅರ್ಧ ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೊತ್ತಂಬರಿ ಸೊಪ್ಪು – 1 ಕಪ್
ಶುಂಠಿ – 1 ಇಂಚು
Advertisement
ಬೆಳ್ಳುಳ್ಳಿ – 2
ಹಸಿರು ಮೆಣಸಿನಕಾಯಿ – 2
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಟೊಮೆಟೊ – 1
ಜೀರಿಗೆ – ಅರ್ಧ ಟೀಸ್ಪೂನ್
ಗರಂ ಮಸಾಲೆ – 1 ಟೀಸ್ಪೂನ್
ಎಣ್ಣೆ – ಅಗತ್ಯವಿರುವಂತೆ
ನೀರು – ಅಗತ್ಯವಿರುವಂತೆ ಇದನ್ನೂ ಓದಿ: ಮೊಟ್ಟೆಯಿಲ್ಲದೆ ಮಾಡಿ ರುಚಿ ರುಚಿಯಾದ ವೆಜ್ ಬ್ರೆಡ್ ಆಮ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಕೊತ್ತಂಬರಿ ಸೊಪ್ಪನ್ನು ತೊಳೆದು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ ಶುಂಠಿ, ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ ನಯವಾದ ಪೇಸ್ಟ್ ಆಗುವಂತೆ ರುಬ್ಬಿಕೊಳ್ಳಿ.
* ಈಗ ಒಂದು ಬಾಣಲೆಗೆ 2 ಟೀಸ್ಪೂನ್ ಎಣ್ಣೆ ಹಾಕಿ, ಬಿಸಿಯಾದ ನಂತರ, ಬೇಯಿಸಿದ ಮೊಟ್ಟೆಗಳನ್ನು ಹಾಕಿ ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ.
* ಈಗ ಅದೇ ಎಣ್ಣೆಯಲ್ಲಿ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಿ.
* ನಂತರ ಉಪ್ಪು, ಅರಿಶಿನ ಪುಡಿ ಸೇರಿಸಿ ಚೆನ್ನಾಗಿ ಬೆರೆಸಿ.
* ಬಳಿಕ ಟೊಮೆಟೊ ಸೇರಿಸಿ, ಮೃದುವಾಗುವವರೆಗೆ ಬೇಯಿಸಿ. ಇದನ್ನೂ ಓದಿ: ಒಮ್ಮೆ ಸವಿದರೆ ಮತ್ತೆ ಬೇಕೆನಿಸುತ್ತದೆ ಚಿಕನ್ ಚಾಪ್ಸ್
* ಈಗ ಮೊದಲೇ ತಯಾರಿಸಿಟ್ಟಿದ್ದ ಕೊತ್ತಂಬರಿ ಸೊಪ್ಪಿನ ಪೇಸ್ಟ್ ಅನ್ನು ಸೇರಿಸಿ, 4-5 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
* ಅಗತ್ಯವಿರುವಷ್ಟು ನೀರು ಸೇರಿಸಿ, ಮತ್ತು ಚೆನ್ನಾಗಿ ಬೆರೆಸಿ.
* ಈಗ ಗರಂ ಮಸಾಲಾ ಪುಡಿ ಹಾಕಿ ಮಿಕ್ಸ್ ಮಾಡಿ.
* ಫ್ರೈ ಮಾಡಿಟ್ಟಿದ್ದ ಮೊಟ್ಟೆಗಳನ್ನು ಸೇರಿಸಿ, ಬಾಣಲೆಯ ಮುಚ್ಚಳ ಹಾಕಿ ಕಡಿಮೆ ಉರಿಯಲ್ಲಿ 2 ನಿಮಿಷ ಬೇಯಿಸಿ.
* ಇದೀಗ ರುಚಿಯಾದ ಹರಿಯಾಲಿ ಎಗ್ ಕರಿ ತಯಾರಾಗಿದ್ದು, ಬಿಸಿ ಬಿಸಿಯಾಗಿ ಬಡಿಸಿ.