ಬಿಡುವಿಲ್ಲದ ಕೆಲಸ ಅಥವಾ ವೀಕೆಂಡ್ ಸಮಯದಲ್ಲಿ ಫಟಾಫಟ್ ಅಂತ ಏನಾದ್ರೂ ವೆಸ್ಟರ್ನ್ ಸ್ಟೈಲ್‌ನ ಸಿಂಪಲ್ ಡಿಶ್ ತಯಾರಿಸಲು ನೀವು ಇಷ್ಟಪಡುತ್ತೀರಾದರೆ ಗಾರ್ಲಿಕ್ ಚಿಕನ್ ಪಾಸ್ತಾ ಟ್ರೈ ಮಾಡ್ಬೋದು. ಸಂಜೆ ಅಥವಾ ಊಟದ ವೇಳೆಗೂ ಈ ಯಮ್ಮೀ ರೆಸಿಪಿ ಚಪ್ಪರಿಸಬಹುದು. ಕೇವಲ ಅರ್ಧ ಗಂಟೆಯಲ್ಲಿ ಒನ್ ಪಾಟ್ ಗಾರ್ಲಿಕ್ ಚಿಕನ್ ಪಾಸ್ತಾ ನಿಮ್ಮ ಹೊಟ್ಟೆಯ ಹಸಿವನ್ನು ತಣಿಸಿಬಿಡುತ್ತದೆ. ಹಾಗಿದ್ರೆ ತಡಮಾಡದೇ ಈ ರೆಸಿಪಿಯನ್ನು ಟ್ರೈ ಮಾಡಿ.
Advertisement
ಬೇಕಾಗುವ ಪದಾರ್ಥಗಳು:
ಆಲಿವ್ ಎಣ್ಣೆ – 1 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಕೊಚ್ಚಿದ ಬೆಳ್ಳುಳ್ಳಿ – 4
ನೀರು – 3 ಟೀಸ್ಪೂನ್
ಚಿಕನ್ ಸ್ಟಾಕ್ – ಎರಡೂವರೆ ಕಪ್
ಪಾಸ್ತಾ – 200 ಗ್ರಾಂ
ಹಾಲು – 100 ಎಂಎಲ್
ಬೇಯಿಸಿ ಒರಟಾಗಿ ಪುಡಿ ಮಾಡಿದ ಚಿಕನ್ ಬ್ರೆಸ್ಟ್ – 2
ನಿಂಬೆ ರಸ – 1 ಟೀಸ್ಪೂನ್
ತುರಿದ ಚೀಸ್ – ಕಾಲು ಕಪ್
ಉಪ್ಪು – ರುಚಿಗೆ ತಕ್ಕಷ್ಟು
ಕರಿಮೆಣಸಿನ ಪುಡಿ – ರುಚಿಗೆ ಅನುಸಾರ ಇದನ್ನೂ ಓದಿ: ಟ್ರೈ ಮಾಡಿ ನೋಡಿ ಟೇಸ್ಟಿ ರಸ್ ಆಮ್ಲೆಟ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಪ್ಯಾನ್‌ಗೆ ಆಲಿವ್ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
* ಅದಕ್ಕೆ ಈರುಳ್ಳಿ ಸೇರಿಸಿ ಸ್ವಲ್ಪ ಮೃದುವಾಗುವವರೆಗೆ ಫ್ರೈ ಮಾಡಿ.
* ಬೆಳ್ಳುಳ್ಳಿ ಬೆರೆಸಿ ಅರ್ಧ ನಿಮಿಷ ಹುರಿಯಿರಿ.
* ನಂತರ 3 ಟೀಸ್ಪೂನ್ ನೀರು ಸೇರಿಸಿ ನಿಧಾನವಾಗಿ ಬೇಯಲು ಬಿಡಿ.
* ಬಳಿಕ ಚಿಕನ್ ಸ್ಟಾಕ್, ಪಾಸ್ತಾ ಹಾಗೂ ಹಾಲು ಸೇರಿಸಿ ಮುಚ್ಚಳ ಮುಚ್ಚಿ ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿಕೊಳ್ಳಿ.
* ನಂತರ ಮುಚ್ಚಳ ತೆಗೆದು ಚಿಕನ್ ಚೂರುಗಳನ್ನು ಬೆರೆಸಿ, ಮುಚ್ಚಳ ಮುಚ್ಚಿ ಮತ್ತೆ 7-10 ನಿಮಿಷ ಬೇಯಿಸಿಕೊಳ್ಳಿ. ನಡುವೆ ಒಂದೆರಡು ಬಾರಿ ಕೈಯಾಡಿಸಿಕೊಳ್ಳಿ.
* ಪಾಸ್ತಾ ಬೆಂದಿದೆ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕ ಉರಿಯನ್ನು ಆಫ್ ಮಾಡಿ.
* ಬಳಿಕ ನಿಂಬೆ ರಸ ಹಾಕಿ ಬೆರೆಸಿ.
* ಚೀಸ್, ಚಿಟಿಕೆ ಉಪ್ಪು, ಕರಿ ಮೆಣಸಿನ ಪುಡಿ ಸಿಂಪಡಿಸಿ, ಬಿಸಿಬಿಸಿಯಾಗಿ ಗಾರ್ಲಿಕ್ ಚಿಕನ್ ಪಾಸ್ತಾ ಸವಿಯಿರಿ. ಇದನ್ನೂ ಓದಿ: ಸಖತ್ ಟೇಸ್ಟಿ ಕೀಮಾ ಮಟರ್ ಟ್ರೈ ಮಾಡಿ
Advertisement
Web Stories