ರಸ್ ಆಮ್ಲೆಟ್ ಗೋವಾದ ಫೇಮಸ್ ಸ್ಟ್ರೀಟ್ ಫುಡ್. ಮಸಾಲೆಯುಕ್ತ ಟೊಮೆಟೋ ಗ್ರೇವಿಯೊಂದಿಗೆ ಇದನ್ನು ಬಡಿಸಲಾಗುತ್ತದೆ. ದಿನದ ಯಾವುದೇ ಸಮಯದಲ್ಲೂ ಇದನ್ನು ಸವಿಯಬಹುದಾಗಿದ್ದು, ಪ್ರೊಟೀನ್‌ಯುಕ್ತವಾಗಿದೆ. ಹಾಗಿದ್ರೆ ಟೇಸ್ಟಿ ರಸ್ ಆಮ್ಲೆಟ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಗ್ರೇವಿ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಒಂದೂವರೆ ಟೀಸ್ಪೂನ್
ಅರಿಶಿನ – ಅರ್ಧ ಟೀಸ್ಪೂನ್
ಟೊಮೆಟೋ ಪ್ಯೂರಿ – ಒಂದೂವರೆ ಕಪ್
ನೀರು – 1 ಕಪ್
ಕೆಂಪು ಮೆಣಸಿನಪುಡಿ – ಒಂದೂವರೆ ಟೀಸ್ಪೂನ್
ಗರಂ ಮಸಾಲಾ ಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನ ಹಾಲು – 1 ಕಪ್
ಆಮ್ಲೆಟ್ ತಯಾರಿಸಲು:
ಮೊಟ್ಟೆ – 8
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 2
ಕೆಂಪು ಮೆಣಸಿನಪುಡಿ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಅವಲಕ್ಕಿಯಿಂದ ಮಾಡಿ ನಮ್ಕೀನ್ ಕೇಕ್
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಈರುಳ್ಳಿ ಅಂಚುಗಳಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೂ ಹುರಿದುಕೊಳ್ಳಿ.
* ಬಳಿಕ ಟೊಮೆಟೋ ಪ್ಯೂರಿ, ಅರಿಶಿನ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಉಪ್ಪು ಸೇರಿಸಿ, ಮಿಶ್ರಣ ಮಾಡಿ, ಬಾಣಲೆಗೆ ಮುಚ್ಚಳ ಹಾಕಿ ಸುಮಾರು 5-6 ನಿಮಿಷ ಬೇಯಿಸಿ. ಮಿಶ್ರಣವು ತುಂಬಾ ದಪ್ಪವಾಗಿದ್ದರೆ ಅರ್ಧ ಕಪ್ ನೀರು ಸೇರಿಸಿ.
* ನಂತರ ತೆಂಗಿನ ಹಾಲು ಬೆರೆಸಿ 3-4 ನಿಮಿಷಗಳ ಕಾಲ ಕುದಿಸಿಕೊಳ್ಳಿ. ನೀವು ಆಮ್ಲೆಟ್ ಮಾಡುವಾಗ ಈ ಗ್ರೇವಿಯನ್ನು ಬೆಚ್ಚಗೆ ಇರಿಸಿ.
* ಈಗ ಆಮ್ಲೆಟ್ ಮಾಡಲು ಒಂದು ಬೌಲ್‌ಗೆ 2 ಮೊಟ್ಟೆಗಳನ್ನು ಒಡೆದು ಹಾಕಿ, ಅದಕ್ಕೆ ಕೆಂಪು ಮೆಣಸಿನ ಪುಡಿ ಹಾಗೂ ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ.
* ಈಗ ಒಂದು ನಾನ್‌ಸ್ಟಿಕ್ ಪ್ಯಾನ್ ತೆಗೆದುಕೊಂಡು ಅದಕ್ಕೆ ಒಂದೂವರೆ ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ.
* ಅದಕ್ಕೆ ಕತ್ತರಿಸಿದ ಈರುಳ್ಳಿಯ ಕಾಲು ಭಾಗ ಸೇರಿಸಿ, ಸ್ವಲ್ಪ ಹಸಿರು ಮೆಣಸಿನಕಾಯಿ ಸೇರಿಸಿ ಮೆತ್ತಗಾಗುವವರೆಗೆ ಹುರಿದುಕೊಳ್ಳಿ.
* ಅದರ ಮೇಲೆ ಮೊಟ್ಟೆಯ ಮಿಶ್ರಣವನ್ನು ಸುರಿದು ಸೆಟ್ ಆಗುವವರೆಗೆ ಬೇಯಿಸಿಕೊಳ್ಳಿ.
* ನಂತರ ಆಮ್ಲೆಟ್ ಅನ್ನು ನಿಧಾನವಾಗಿ ತಿರುವಿ ಹಾಕಿ ಇನ್ನೊಂದು ನಿಮಿಷ ಬೇಯಿಸಿಕೊಳ್ಳಿ.
* ಉಳಿದ ಮೊಟ್ಟೆಗಳನ್ನೂ ಇದೇ ರೀತಿ ಮಾಡುವುದನ್ನು ಮುಂದುವರಿಸಿ.
* ಈಗ ಸರ್ವಿಂಗ್ ಪ್ಲೇಟ್ ಮೇಲೆ ಆಮ್ಲೆಟ್ ಇಟ್ಟು, ಅದರೆ ಮೇಲೆ ಸ್ವಲ್ಪ ರಸ್ ಅನ್ನು ಸುರಿಯಿರಿ.
* ಕತ್ತರಿಸಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ನಿಂಬೆ ತುಂಡುಗಳಿಂದ ಅಲಂಕರಿಸಿದರೆ ರಸ್ ಆಮ್ಲೆಟ್ ಸವಿಯಲು ಸಿದ್ಧವಾಗುತ್ತದೆ.
* ಇದನ್ನು ಬಿಸಿಬಿಸಿಯಾಗಿ ಸವಿಯಬೇಕು. ಪಾವ್‌ನೊಂದಿಗೆ ಇದರ ಸ್ವಾದ ಅತ್ಯುತ್ತಮವಾಗಿರುತ್ತದೆ. ಇದನ್ನೂ ಓದಿ: ಮಕ್ಕಳಿಗಾಗಿ ಪನೀರ್ ಮಸಾಲ ರೋಲ್
Advertisement
Web Stories