ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಫೇಮಸ್ ಆಗಿರುವ ಕಡಾಯಿ, ಮಸಾಲಾ, ಮಖಾನಿ ಹೀಗೆ ಹಲವು ರೀತಿಯ ಗ್ರೇವಿಗಳು ಚಪಾತಿ, ಪರೋಟಾದೊಂದಿಗೆ ಸೂಪರ್ ಎನಿಸುತ್ತದೆ. ಇಂದು ನಾವು ಅದೇ ಸಾಲಿಗೆ ಬರುವ ಮೇಥಿ ಮಟರ್ ಮಲೈ (Methi Matar Malai) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಈ ಸುಲಭ ವಿಧಾನವನ್ನು ನೀವು ಕೂಡಾ ಒಮ್ಮೆ ಮನೆಯಲ್ಲಿ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಮಸಾಲೆ ತಯಾರಿಸಲು:
ಎಣ್ಣೆ – 2 ಟೀಸ್ಪೂನ್
ಹೆಚ್ಚಿದ ಈರುಳ್ಳಿ – 1
ಸೀಳಿದ ಮೆಣಸಿನಕಾಯಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಗೋಡಂಬಿ – ಕಾಲು ಕಪ್ (30 ನಿಮಿಷ ನೆನೆಸಿಡಿ)
ಹುರಿಯಲು:
ಎಣ್ಣೆ – 3 ಟೀಸ್ಪೂನ್
ಜೀರಿಗೆ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಂತ್ಯ – 2 ಕಪ್
ನೀರು – 1 ಕಪ್
ಕ್ರೀಮ್ – ಅರ್ಧ ಕಪ್
ಬಟಾಣಿ – 1 ಕಪ್
ಸಕ್ಕರೆ – ಅರ್ಧ ಟೀಸ್ಪೂನ್
ಉಪ್ಪು – ಮುಕ್ಕಾಲು ಟೀಸ್ಪೂನ್
ಗರಂ ಮಸಾಲ – ಕಾಲು ಟೀಸ್ಪೂನ್ ಇದನ್ನೂ ಓದಿ: ಒಮ್ಮೆ ಮಾಡಿ ನೋಡಲೇಬೇಕು ಬೆಂಡೆಕಾಯಿ ಸಾಸಿವೆ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ 2 ಟೀಸ್ಪೂನ್ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ ಹಾಕಿ ಫ್ರೈ ಮಾಡಿ.
* ಈರುಳ್ಳಿ ತಿಳಿ ಗೋಲ್ಡನ್ ಬ್ರೌನ್ ಬಣ್ಣ ಬಂದ ಬಳಿಕ ಮೆಣಸಿನಕಾಯಿ ಹಾಗೂ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಚೆನ್ನಾಗಿ ಹುರಿಯಿರಿ.
* ಈಗ ಸ್ಟೌ ಆಫ್ ಮಾಡಿ, ಮಿಶ್ರಣ ತಣ್ಣಗಾಗಲು ಬಿಡಿ.
* ಈಗ ಅವುಗಳನ್ನು ಮಿಕ್ಸರ್ ಜಾರ್‌ಗೆ ವರ್ಗಾಯಿಸಿ, ನೆನೆಸಿಟ್ಟ ಗೋಡಂಬಿ ಸೇರಿಸಿ, ನುಣ್ಣಗೆ ರುಬ್ಬಿಕೊಳ್ಳಿ.(ನೀರು ಬಳಸುವುದು ಬೇಡ)
* ಈಗ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ, ಬಿಸಿ ಆದ ಬಳಿಕ ಜೀರಿಗೆ ಹಾಕಿ ಫ್ರೈ ಮಾಡಿ.
Advertisement
* ಬಳಿಕ ರುಬ್ಬಿದ ಮಸಾಲೆಯನ್ನು ಹಾಕಿ, ಚೆನ್ನಾಗಿ ಹುರಿಯಿರಿ.
* ಮಸಾಲೆ ಎಣ್ಣೆಯನ್ನು ಬಿಡಲು ಪ್ರಾರಂಭಿಸಿದ ಬಳಿಕ ಮೆಂತ್ಯ ಸೊಪ್ಪು ಸೇರಿಸಿ, 2 ನಿಮಿಷ ಬೇಯಿಸಿ.
* ಈಗ 1 ಕಪ್ ನೀರು ಹಾಗೂ ಕ್ರೀಮ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಬಳಿಕ ಬಟಾಣಿ, ಸಕ್ಕರೆ ಹಾಗೂ ಉಪ್ಪು ಸೇರಿಸಿ, ಮಿಶ್ರಣ ಮಾಡಿ, 8-10 ನಿಮಿಷ ಬಟಾಣಿ ಬೇಯುವವರೆಗೆ ಮುಚ್ಚಳ ಮುಚ್ಚಿ ಚೆನ್ನಾಗಿ ಕುದಿಸಿ.
* ಈಗ ಗರಂ ಮಸಾಲೆ ಸೇರಿಸಿ ಮಿಶ್ರಣ ಮಾಡಿ.
* ಇದೀಗ ಮೇಥಿ ಮಟರ್ ಮಲೈ ತಯಾರಾಗಿದ್ದು, ಚಪಾತಿ, ರೋಟಿಯೊಂದಿಗೆ ಸವಿಯಿರಿ. ಇದನ್ನೂ ಓದಿ: ಊಟದೊಂದಿಗೆ ಸಖತ್ ಟೇಸ್ಟ್ ನೀಡುವ ಬೆಳ್ಳುಳ್ಳಿ ಚಟ್ನಿ ಮಾಡಿ