ನವರಾತ್ರಿ ತುಂಬಾ ಮುಖ್ಯವಾದ ಹಿಂದೂಗಳ ಹಬ್ಬ. ಸಂಭ್ರಮದ ಈ 9 ದಿನಗಳಲ್ಲಿ ದುರ್ಗಾ ದೇವಿಯನ್ನು 9 ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ. ಈ 9 ದಿನಗಳಲ್ಲಿ ಹಲವು ಆಹಾರ ಪದಾರ್ಥಗಳನ್ನು ಸೇವಿಸಬಾರದು ಎನ್ನಲಾಗುತ್ತದೆ. ನವರಾತ್ರಿಯ ವ್ರತವನ್ನು ಪಾಲಿಸುವವರು ಈ ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಾವಿಂದು ನವರಾತ್ರಿ ದಿನಗಳಲ್ಲಿ ಸೇವಿಸಬಹುದಾದ ಕೆಲ ಸಾಮಾಗ್ರಿಗಳನ್ನಷ್ಟೇ ಬಳಸಿ ಸಿಹಿ ಮಾಡೋದು ಹೇಗೆಂದು ಹೇಳಿಕೊಡುತ್ತೇವೆ. ನವರಾತ್ರಿಯಂದು ಸೇವಿಸಲು ಸೂಕ್ತವಾದ ಮಖಾನಾ (ಕಮಲದ ಹೂವಿನ ಬೀಜ) ಬಳಸಿ ಖೀರ್ ಮಾಡೋದು ಹೇಗೆಂದು ನೋಡೋಣ.
Advertisement
ಬೇಕಾಗುವ ಪದಾರ್ಥಗಳು:
ಮಖಾನಾ – 1 ಕಪ್
ಹಾಲು – 4 ಕಪ್
ಸಕ್ಕರೆ – ಅರ್ಧ ಕಪ್
ಏಲಕ್ಕಿ ಪುಡಿ – ಅರ್ಧ ಟೀಸ್ಪೂನ್
ಒಣ ಬೀಜಗಳು – ಅಲಂಕರಿಸಲು
ತುಪ್ಪ – ಹುರಿಯಲು ಬೇಕಾಗುವಷ್ಟು ಇದನ್ನೂ ಓದಿ: ನವರಾತ್ರಿ ಸ್ಪೆಷಲ್ – ರಾಜಗಿರಾ ಹಲ್ವಾ ಮಾಡಿ ವ್ರತವನ್ನಾಚರಿಸಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಮಖಾನಾವನ್ನು ಗರಿಗರಿಯಾಗುವವರೆಗೆ ಹುರಿಯಿರಿ.
* ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಬಿಸಿ ಮಾಡಿ, ಕುದಿಸಿಕೊಳ್ಳಿ.
* ಹುರಿದ ಮಖಾನಾ, ಸಕ್ಕರೆ ಮತ್ತು ಏಲಕ್ಕಿ ಪುಡಿಯನ್ನು ಹಾಲಿಗೆ ಸೇರಿಸಿ.
* ಮಿಶ್ರಣವನ್ನು ದಪ್ಪವಾಗಿ, ಕ್ರೀಮ್‌ನಂತೆ ಸ್ಥಿರತೆಯನ್ನು ತಲುಪುವವರೆಗೆ ಕಡಿಮೆ ಶಾಖದಲ್ಲಿ ಬೇಯಿಸಿ.
* ಕತ್ತರಿಸಿದ ಒಣ ಬೀಜಗಳಿಂದ ಅಲಂಕರಿಸಿದರೆ ಮಖಾನಾ ಖೀರ್ ಸವಿಯಲು ಸಿದ್ಧವಾಗುತ್ತದೆ.
* ಇದನ್ನು ಬಿಸಿ ಅಥವಾ ತಣ್ಣಗಾಗಿಸಿಯೂ ಸವಿಯಬಹುದು. ಇದನ್ನೂ ಓದಿ: ನವರಾತ್ರಿ ವ್ರತ ಆಚರಣೆ ಹೇಗೆ? ಯಾವ ಆಹಾರ ಸೇವಿಸಬಹುದು?
Advertisement
Web Stories