ವಿವಿಧ ರೀತಿಯ ಮಸಾಲೆಯೊಂದಿಗೆ ಸಿಗುವ ಸ್ವೀಟ್ ಕಾರ್ನ್ ಪ್ರೇಮಿಗಳೇ ನಮ್ಮಲ್ಲಿ ಹಲವರಿದ್ದಾರೆ. ಸ್ಟ್ರೀಟ್ ಫುಡ್ ಆಗಿ ಸಿಗುವ ಸ್ವೀಟ್ ಕಾರ್ನ್‌ನಲ್ಲೂ ಒಬ್ಬೊಬ್ಬರಿಗೆ ಒಂದೊಂದು ಫ್ಲೇವರ್ ಇಷ್ಟ. ನಾವಿಂದು ದೇಸಿ ಮಸಾಲಾ ಸ್ವೀಟ್ ಕಾರ್ನ್ (Desi Masala Sweet Corn) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಸ್ವೀಟ್ ಕಾರ್ನ್ ಸವಿಯಲು ಪ್ರತಿ ಬಾರಿ ಹೊರಗಡೆ ಹೋಗಬೇಕೆಂದೇನಿಲ್ಲ. ನೀವು ಇದನ್ನು ಮನೆಯಲ್ಲಿಯೇ ಮಾಡಿ ನೋಡಿ.
Advertisement
ಬೇಕಾಗುವ ಪದಾರ್ಥಗಳು:
ಬೇಯಿಸಲು:
ಸ್ವೀಟ್ ಕಾರ್ನ್ – 1 ಕಪ್
ನೀರು – ಕುದಿಸಲು
ಉಪ್ಪು – ಕಾಲು ಟೀಸ್ಪೂನ್
ಇತರ ಪದಾರ್ಥಗಳು:
ಬೆಣ್ಣೆ – 1 ಟೀಸ್ಪೂನ್
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಚಾಟ್ ಮಸಾಲಾ – ಅರ್ಧ ಟೀಸ್ಪೂನ್
ಕರಿಮೆಣಸಿನ ಪುಡಿ – ಕಾಲು ಟೀಸ್ಪೂನ್
ಉಪ್ಪು – ಕಾಲು ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಟೊಮೆಟೊ – 2 ಟೀಸ್ಪೂನ್
ನಿಂಬೆ ರಸ – 1 ಟೀಸ್ಪೂನ್
ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್ ಇದನ್ನೂ ಓದಿ: ಮಸಾಲೆಯುಕ್ತ ಕುಶ್ಕಾ ರೈಸ್ ಮಾಡುವ ಸರಳ ವಿಧಾನ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ, ದೊಡ್ಡ ಪಾತ್ರೆಯಲ್ಲಿ ಸಾಕಷ್ಟು ನೀರು ಹಾಕಿ, ಉಪ್ಪು ಸೇರಿಸಿ ಕುದಿಯಲು ಬಿಡಿ.
* ಕುದಿ ಬಂದ ನಂತರ ಸ್ವೀಟ್ ಕಾರ್ನ್ ಹಾಕಿ, 1 ನಿಮಿಷ ಕುದಿಸಿ. ಕಾರ್ನ್ ಬೆಂದಿಲ್ಲವೆಂದರೆ ಇನ್ನಷ್ಟು ಕುದಿಸಿ.
* ಈಗ ಕಾರ್ನ್ ಅನ್ನು ನೀರಿನಿಂದ ಬಸಿದು ಪಕ್ಕಕ್ಕಿಡಿ.
* ಈಗ ಒಂದು ಪ್ಯಾನ್‌ನಲ್ಲಿ ಬೆಣ್ಣೆ ಹಾಕಿ, ಬೇಯಿಸಿದ ಕಾರ್ನ್ ಸೇರಿಸಿ, 1 ನಿಮಿಷ ಫ್ರೈ ಮಾಡಿ.
* ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಕರಿಮೆಣಸಿನ ಪುಡಿ, ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಪ್ಯಾನ್ ಅನ್ನು ಒಲೆಯಿಂದ ಕೆಳಗಿಳಿಸಿ, ಅದಕ್ಕೆ ಈರುಳ್ಳಿ, ಟೊಮೆಟೊ ಹಾಕಿ. (ಈರುಳ್ಳಿ ಹಾಗೂ ಟೊಮೆಟೊ ಬೇಯಿಸುವುದು ಬೇಡ)
* ನಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಮಿಶ್ರಣ ಮಾಡಿ.
* ಇದೀಗ ದೇಸಿ ಮಸಾಲಾ ಸ್ವೀಟ್ ಕಾರ್ನ್ ತಯಾರಾಗಿದ್ದು, ಬಿಸಿ ಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಊಟದೊಂದಿಗೆ ಸಖತ್ ಟೇಸ್ಟ್ ನೀಡುವ ಬೆಳ್ಳುಳ್ಳಿ ಚಟ್ನಿ ಮಾಡಿ