ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಸರ್ಕಾರದ ಶಿಕ್ಷಣ ಇಲಾಖೆಯನ್ನು (Department of Education) ಬಂದ್ ಮಾಡಿದ್ದಾರೆ.
ಅಮೆರಿಕ ಚುನಾವಣೆಯ (USA Election) ಸಮಯದಲ್ಲಿ ಟ್ರಂಪ್ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯಂತೆ ಈಗ ಅವರು ಶಿಕ್ಷಣ ಇಲಾಖೆಯನ್ನು ಮುಚ್ಚುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದರು. ಟ್ರಂಪ್ ಅವರು ಪುಟಾಣಿ ಮಕ್ಕಳನ್ನು ಕುಳ್ಳಿರಿಸಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಶಿಕ್ಷಣ ಇಲಾಖೆ ಬಂದ್ ಮಾಡಿ ಶಾಲಾ ನೀತಿಯನ್ನು ಸಂಪೂರ್ಣವಾಗಿ ರಾಜ್ಯಗಳಿಗೆ ನೀಡುತ್ತೇನೆ ಎಂದು ಟ್ರಂಪ್ ಈ ಹಿಂದೆ ಹೇಳಿದ್ದರು. ಈ ಭರವಸೆಯಂತೆ ಶಿಕ್ಷಣ ಇಲಾಖೆಯ ಟ್ರಂಪ್ ಮುಚ್ಚಿದ್ದರಿಂದ ಇನ್ನು ಮುಂದೆ ಶಿಕ್ಷಣದಲ್ಲಿ ಅಮೆರಿಕ ಸರ್ಕಾರದ ಹಸ್ತಕ್ಷೇಪ ಇರುವುದಿಲ್ಲ. ಸಂಪೂರ್ಣವಾಗಿ ರಾಜ್ಯಗಳಿಗೆ ಅಧಿಕಾರ ಇರಲಿದೆ.
🇺🇸President Trump Signs Executive Order to Eliminate the Department of Education
“Closing the Department of Education would provide children and their families the opportunity to escape a system that is failing them.” –President Trump pic.twitter.com/aiyZs9TDC9
— The White House (@WhiteHouse) March 20, 2025
ಶಿಕ್ಷಣ ರಾಜ್ಯಗಳಿಗೆ ಸೇರಬೇಕಿತ್ತು. ನಾವು ಮರಳಿ ಶಿಕ್ಷಣವನ್ನು ರಾಜ್ಯಗಳಿಗೆ ನೀಡಿದ್ದೇವೆ ಎಂದು ಪ್ರಕಟಿಸಿದರು. ಕಳೆದ ವಾರ ಇಲಾಖೆಯು ತನ್ನ ಅರ್ಧದಷ್ಟು ಸಿಬ್ಬಂದಿಯನ್ನು ವಜಾಗೊಳಿಸುವುದಾಗಿ ಟ್ರಂಪ್ ಘೋಷಣೆ ಮಾಡಿದ್ದರು.
ಶಿಕ್ಷಣ ಇಲಾಖೆಯು ಅಮೇರಿಕನ್ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ವಿಫಲವಾಗಿದೆ. 1979 ರಲ್ಲಿ ಇಲಾಖೆಯ ರಚನೆಗೆ ರಿಪಬ್ಲಿಕನ್ನರಿಂದ ಮಾತ್ರವಲ್ಲದೇ ಆಗಿನ ಅಧ್ಯಕ್ಷ ಜಿಮ್ಮಿ ಕಾರ್ಟರ್ ಅವರ ಸ್ವಂತ ಸಂಪುಟದ ಸದಸ್ಯರಿಂದ ಕೂಡ ಪ್ರತಿರೋಧ ವ್ಯಕ್ತವಾಗಿತ್ತು ಎಂದು ತಿಳಿಸಿದರು.
President Trump is improving education outcomes by empowering parents, states, and communities. 🇺🇸
“We’re going to be returning education very simply BACK TO THE STATES where it belongs.” – @POTUS pic.twitter.com/PpBx0uNpNe
— The White House (@WhiteHouse) March 20, 2025
ಇಲಾಖೆಯನ್ನು ಮುಚ್ಚಿದ್ದು ಯಾಕೆ?
ಟ್ರಂಪ್ ಆಗಾಗ ಶಿಕ್ಷಣ ಇಲಾಖೆಯ ವಿರುದ್ಧ ಕಿಡಿಕಾರುತ್ತಿದ್ದರು. ಎಡಪಂಥಿಯವಾದಿಗಳು ತಮಗೆ ಬೇಕಾದಂತೆ ಶಿಕ್ಷಣವನ್ನು ರೂಪಿಸಿದ್ದಾರೆ. ತಮ್ಮ ಸಿದ್ಧಾಂತಕ್ಕೆ ಪೂರಕವಾಗಿರುವ ಶಿಕ್ಷಣ ಸಂಸ್ಥೆಗಳಿಗೆ ಅನುದಾನವನ್ನು ನೀಡಲಾಗುತ್ತಿದೆ. ಶಿಕ್ಷಣಕ್ಕಿಂತ ಮುಖ್ಯವಾಗಿ ತಮ್ಮ ಸಿದ್ಧಾಂತವನ್ನು ಪ್ರಚಾರ ಪಡಿಸಲು ಈ ಸಂಸ್ಥೆಯನ್ನು ಬಳಕೆ ಮಾಡಲಾಗುತ್ತಿದೆ. ಟ್ರಾನ್ಸ್‌ಜೆಂಡರ್ ವಿದ್ಯಾರ್ಥಿಗಳನ್ನು ಬೆಂಬಲಿಸುವ ನೀತಿಗಳನ್ನು ಸೇರಿಸಲಾಗಿದೆ. ಸಾರ್ವಜನಿಕ ಶಿಕ್ಷಣ ವಿದ್ಯಾರ್ಥಿಗಳನ್ನು ಧರ್ಮಬೋಧನೆ ಮಾಡುವ ದೊಡ್ಡ ಮಾರ್ಕ್ಸ್‌ವಾದಿ ಪಿತೂರಿಯ ಭಾಗವಾಗಿದೆ. ವಿದೇಶಗಳಲ್ಲೂ ಎಡ ಚಿಂತನೆಯ ಅಧ್ಯಯನಕ್ಕೆ ಅಮೆರಿಕ ಜನರ ತೆರಿಗೆ ದುಡ್ಡನ್ನು ಅನುದಾನವಾಗಿ ನೀಡಲಾಗುತ್ತದೆ ಎಂದು ದೂರಿದ್ದರು.
ಶ್ವೇತಭವನದ (White House) ದಾಖಲೆಯ ಪ್ರಕಾರ 1979 ರಿಂದ ಶಿಕ್ಷಣ ಇಲಾಖೆ 3 ಲಕ್ಷ ಕೋಟಿ ಡಾಲರ್ ಹಣವನ್ನು ಖರ್ಚು ಮಾಡಿದೆ. ಪ್ರತಿ ವಿದ್ಯಾರ್ಥಿಯ ಮೇಲೆ 245% ಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ ಈ ಖರ್ಚುಗಳನ್ನು ತೋರಿಸಲು ಯಾವುದೇ ದಾಖಲೆಗಳಿಲ್ಲ.
13 ವರ್ಷ ವಯಸ್ಸಿನ ಮಕ್ಕಳ ಗಣಿತ ಮತ್ತು ಕಲಿಕಾ ಗುಣಮಟ್ಟ ದಶಕಗಳಲ್ಲಿ ಅತ್ಯಂತ ಕಡಿಮೆ ಮಟ್ಟದಲ್ಲಿವೆ ಎಂದು ಶ್ವೇತಭವನದ ದತ್ತಾಂಶವು ತೋರಿಸುತ್ತದೆ. ನಾಲ್ಕನೇ ತರಗತಿಯ ಹತ್ತರಲ್ಲಿ ಆರು ಮತ್ತು ಎಂಟನೇ ತರಗತಿಯ ಮುಕ್ಕಾಲು ಭಾಗದಷ್ಟು ವಿದ್ಯಾರ್ಥಿಗಳು ಗಣಿತದಲ್ಲಿ ಹಿಂದಿದ್ದಾರೆ. ನಾಲ್ಕನೇ ಮತ್ತು ಎಂಟನೇ ತರಗತಿಯ ಹತ್ತರಲ್ಲಿ ಏಳು ವಿದ್ಯಾರ್ಥಿಗಳು ಓದುವಲ್ಲಿ ಪ್ರವೀಣರಾಗಿಲ್ಲ. ನಾಲ್ಕನೇ ತರಗತಿಯ 40% ರಷ್ಟು ವಿದ್ಯಾರ್ಥಿಗಳು ಓದುವುದರಲ್ಲಿ ಹಿಂದಿದ್ದಾರೆ ಎಂದು ತಿಳಿಸಿದೆ.