ವಾಷಿಂಗ್ಟನ್: 2026ರ ಫಿಫಾ ವಿಶ್ವಕಪ್‌ನಲ್ಲಿ (FIFA World Cup) ಡೊನಾಲ್ಡ್ ಟ್ರಂಪ್ (Donald Trump) ಅವರು ತನ್ನ ಪ್ರಭಾವ ಬಳಸಿ ಅಮೆರಿಕದ ತಾರೆ ಹಾಗೂ ಪ್ರಮುಖ ಸ್ಟ್ರೈಕರ್ ಫೋಲಾರಿನ್ ಬಲೋಗನ್ (Folarin Balogun) ಮೇಲಿನ ಒಂದು ಪಂದ್ಯದ ನಿಷೇಧವನ್ನು ರದ್ದುಗೊಳಿಸಿದ್ದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.
ಬೋಸ್ನಿಯಾ ಮತ್ತು ಹೆರ್ಜೆಗೋವಿನಾ ವಿರುದ್ಧದ ಪಂದ್ಯದಲ್ಲಿ ಫೋಲಾರಿನ್ ಬಲೋಗನ್ ಎದುರಾಳಿ ಆಟಗಾರನಿಗೆ ಫೌಲ್ ಮಾಡಿದ ಹಿನ್ನೆಲೆಯಲ್ಲಿ ರೆಫ್ರಿ ಅವರಿಗೆ ರೆಡ್ ಕಾರ್ಡ್ (Red Card) ತೋರಿಸಿದ್ದರು. ಫಿಫಾ ನಿಯಮಗಳ ಪ್ರಕಾರ, ರೆಡ್ ಕಾರ್ಡ್ ಪಡೆದ ಆಟಗಾರನಿಗೆ ಮುಂದಿನ ಒಂದು ಪಂದ್ಯಕ್ಕೆ ಸ್ವಯಂಚಾಲಿತವಾಗಿ ನಿಷೇಧ ಹೇರಲಾಗುತ್ತದೆ. ಇದರಂತೆ ಬಲೋಗನ್ ಬೆಲ್ಜಿಯಂ ವಿರುದ್ಧದ ಪ್ರಮುಖ ನಾಕೌಟ್ ಪಂದ್ಯದಿಂದ ಹೊರಗುಳಿಯಬೇಕಿತ್ತು.
ಅಮೆರಿಕ ತಂಡದ ಪ್ರಮುಖ ಸ್ಕೋರರ್ ಆಗಿರುವ ಬಲೋಗನ್ ಪಂದ್ಯದಿಂದ ಹೊರಬೀಳುವುದನ್ನು ತಡೆಯಲು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಂಗಕ್ಕಿಳಿದರು. ಟ್ರಂಪ್ ಅವರು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ (Gianni Infantino) ಅವರಿಗೆ ಮೂರು ಬಾರಿ ಫೋನ್ ಮಾಡಿ, ರೆಡ್ ಕಾರ್ಡ್ ನಿರ್ಧಾರವನ್ನು ಮರುಪರಿಶೀಲಿಸುವಂತೆ ಮತ್ತು ಈ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿದರು.
Za ten wredny faul Florian Balogun dostał czerwoną kartkę.
FIFA właśnie cofnęła automatyczne zawieszenie kary, co oznacza, że będzie mógł zagrać w kolejnym meczu.
Trump oficjalnie podziękował @FIFAcom.
Brud w sporcie, brud w polityce.
Dzisiejszy świat. pic.twitter.com/vzYCU1uwcs— Jacek Liberski 🇵🇱🇪🇺🇺🇲🏳️🌈 (@jacek_liberski) July 5, 2026
ಟ್ರಂಪ್ ಕರೆಯ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಫಿಫಾ ಶಿಸ್ತು ಸಮಿತಿ, ತನ್ನ ನಿಯಮಾವಳಿಗಳ ಆರ್ಟಿಕಲ್ 27 ಅನ್ನು ಬಳಸಿ ಬಲೋಗನ್ ಮೇಲಿನ ನಿಷೇಧವನ್ನು ಒಂದು ವರ್ಷದ ಅವಧಿಗೆ ಅಮಾನತಿನಲ್ಲಿಡಲು (Suspended Sentence) ನಿರ್ಧರಿಸಿತು. ಈ ನಿರ್ಧಾರದಿಂದ ಅವರು ಬೆಲ್ಜಿಯಂ ವಿರುದ್ಧ ಆಡಲು ಮುಕ್ತ ಅವಕಾಶ ನೀಡಲಾಯಿತು. ವಿಶ್ವಕಪ್ ಇತಿಹಾಸದಲ್ಲಿ 1962ರ ನಂತರ ರೆಡ್ ಕಾರ್ಡ್ ಪಡೆದ ಆಟಗಾರನೊಬ್ಬನ ನಿಷೇಧವನ್ನು ಹೀಗೆ ಹಿಂಪಡೆದಿರುವುದು ಇದೇ ಮೊದಲು.
ತೀವ್ರ ಆಕ್ರೋಶ
ಫಿಫಾದ ಈ ದಿಢೀರ್ ನಿರ್ಧಾರಕ್ಕೆ ಬೆಲ್ಜಿಯಂ ಫುಟ್‌ಬಾಲ್ ಸಂಸ್ಥೆ ತೀವ್ರ ಆಶ್ಚರ್ಯ ಮತ್ತು ಆಕ್ರೋಶ ವ್ಯಕ್ತಪಡಿಸಿದೆ. ಬೆಲ್ಜಿಯಂ ಕೋಚ್ ರೂಡಿ ಗಾರ್ಸಿಯಾ ಅವರು, “ಫಿಫಾ ಕಚೇರಿಯಲ್ಲಿ ಜುಲೈ 5 ಎಂಬುದು ಏಪ್ರಿಲ್ ಫೂಲ್ ದಿನವೇ?” ಎಂದು ಲೇವಡಿ ಮಾಡಿದ್ದಾರೆ. ಅಲ್ಲದೆ ಕ್ರೀಡೆಯ ಪ್ರಾಮಾಣಿಕತೆ ಮತ್ತು ‘ಫೇರ್ ಪ್ಲೇ’ ತತ್ವಗಳನ್ನು ಕಾಪಾಡಲು ತಾವು ಎಲ್ಲಾ ಕಾನೂನು ಹೋರಾಟದ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ಬೆಲ್ಜಿಯಂ ಹೇಳಿದೆ. ಇದನ್ನೂ ಓದಿ: 5 ಬಾರಿ ಚಾಂಪಿಯನ್ ಬ್ರೆಜಿಲ್‌ಗೆ ಆಘಾತಕಾರಿ ಸೋಲು – ಫುಟ್‌ಬಾಲ್ ವೃತ್ತಿ ಜೀವನಕ್ಕೆ ನೇಮರ್ ಗುಡ್‌ಬೈ
🚨 LMAO! The Trump Card always wins!
“Thank you to FIFA for doing what was right, and reversing a great injustice! President DONALD J. TRUMP”
Folarin Balogun is BACK 🇺🇸 pic.twitter.com/pmrsuba9SU
— Eric Daugherty (@EricLDaugh) July 5, 2026
ಇತ್ತ ಮಾಜಿ ಫಿಫಾ ಅಧ್ಯಕ್ಷ ಸೆಪ್ ಬ್ಲಾಟರ್ ಕೂಡ ಈ ನಿರ್ಧಾರವನ್ನು ಟೀಕಿಸಿದ್ದು, “ಫುಟ್‌ಬಾಲ್ ರಾಜಕೀಯದ ಆಟದ ಮೈದಾನವಾಗಬಾರದು. ರಾಜಕೀಯ ನಾಯಕರ ಫೋನ್ ಕರೆಗಳಿಂದ ರೆಡ್ ಕಾರ್ಡ್‌ಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಫಿಫಾ ನಿಷೇಧ ಹಿಂಪಡೆಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ ಡೊನಾಲ್ಡ್ ಟ್ರಂಪ್, “ಸರಿಯಾದ ನಿರ್ಧಾರ ಕೈಗೊಂಡಿದ್ದಕ್ಕೆ ಮತ್ತು ದೊಡ್ಡ ಅನ್ಯಾಯವನ್ನು ಸರಿಪಡಿಸಿದ್ದಕ್ಕೆ ಫಿಫಾಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
LOL!!! “Nah bro I have the Trump card, I win.”
Trump card always wins! pic.twitter.com/gGTlmDm0wH
— Gunther Eagleman™ (@GuntherEagleman) July 5, 2026
ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೋ(Gianni Infantino) ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಬಹಳ ಆಪ್ತ ಬಾಂಧವ್ಯವಿದೆ. ಈ ಹಿಂದೆ ಇನ್ಫಾಂಟಿನೋ ಅವರು ಟ್ರಂಪ್ ಅವರಿಗೆ ಫಿಫಾ ಶಾಂತಿ ಪ್ರಶಸ್ತಿಯನ್ನು ಕೂಡ ನೀಡಿದ್ದರು. ಈ ಆಪ್ತ ಗೆಳತನವೇ ಈಗ ಫಿಫಾದ ನಿಯಮಗಳನ್ನು ಗಾಳಿಗೆ ತೂರಲು ಕಾರಣವಾಗಿದೆ ಎಂದು ಕ್ರೀಡಾ ವಿಶ್ಲೇಷಕರು ಕಮೆಂಟ್ ಮಾಡುತ್ತಿದ್ದಾರೆ. ಟ್ರಂಪ್ ಮಧ್ಯಪ್ರವೇಶವನ್ನು ವಿರೋಧಿಸಿ ನೆಟ್ಟಿಗರು ಈಗ ಅಮೆರಿಕ ಅಧ್ಯಕ್ಷರನ್ನು ಟ್ರೋಲ್ ಮಾಡುತ್ತಿದ್ದಾರೆ.
