ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಆಪ್ತ ರಾಜಕೀಯ ಸಹಾಯಕ ಮತ್ತು ಶ್ವೇತಭವನದ ಪ್ರಮುಖ ಅಧಿಕಾರಿಯಾದ ಸೆರ್ಗಿಯೊ ಗೋರ್ (Sergio Gor) ಅವರನ್ನು ಅಮೆರಿಕಾದ ಭಾರತೀಯ ರಾಯಭಾರಿಯಾಗಿ (Ambassador) ಶುಕ್ರವಾರ ನೇಮಕ ಮಾಡಲಾಗಿದೆ.
ಭಾರತದೊಂದಿಗೆ ಅಮೆರಿಕ ಸಂಬಂಧ ಸೂಕ್ಷ್ಮ ಹಂತದಲ್ಲಿರುವಾಗ ಟ್ರಂಪ್ ತಮ್ಮ ಅತ್ಯಂತ ನಂಬಿಕಸ್ಥ ಅಧಿಕಾರಿಯನ್ನು ಈ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಗೋರ್ ಅವರನ್ನು ಭಾರತ ರಾಯಭಾರಿ ಮಾತ್ರವಲ್ಲದೇ ದಕ್ಷಿಣ ಮತ್ತು ಮಧ್ಯ ಏಷ್ಯಾಕ್ಕೆ ವಿಶೇಷ ರಾಯಭಾರಿಯಾಗಿಯೂ ಟ್ರಂಪ್ ನೇಮಿಸಿದ್ದಾರೆ. ಇದನ್ನೂ ಓದಿ: ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ
ಈ ಕುರಿತು ತಮ್ಮ ಟ್ರೂತ್ ಸೋಶಿಯಲ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ವಿಶ್ವದ ಅತ್ಯಂತ ಜನನಿಬಿಡ ಪ್ರದೇಶದಲ್ಲಿ ನನ್ನ ಕಾರ್ಯಸೂಚಿಯನ್ನು ಜಾರಿಗೊಳಿಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಾನು ಸಂಪೂರ್ಣವಾಗಿ ವಿಶ್ವಾಸ ಇಡಬಹುದಾದ ವ್ಯಕ್ತಿ ಇರುವುದು ಮುಖ್ಯ. ಆದ್ದರಿಂದ ಸೆರ್ಗಿಯೊ ಗೋರ್ ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸುತ್ತಿದ್ದು, ಗೋರ್ ಅವರನ್ನು ಭಾರತ ಗಣರಾಜ್ಯಕ್ಕೆ ನಮ್ಮ ಮುಂದಿನ ಅಮೆರಿಕದ ರಾಯಭಾರಿಯಾಗಿ ಬಡ್ತಿ ನೀಡುತ್ತಿದ್ದೇನೆ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ಅವರು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳಿಗೆ ವಿಶೇಷ ರಾಯಭಾರಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದ ಚಮೋಲಿಯಲ್ಲಿ ಮೇಘಸ್ಫೋಟ – ಮನೆಗಳು ಸರ್ವನಾಶ, ಹಲವರು ನಾಪತ್ತೆ ಶಂಕೆ
ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಅವರನ್ನು ನೇಮಕ ಮಾಡಲಾಗಿದೆ. ನನ್ನ ಕಾರ್ಯಸೂಚಿಯನ್ನು ಪೂರೈಸಲು ಮತ್ತು ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲು ನಮಗೆ ಸಹಾಯ ಮಾಡಲು ನಾನು ಸಂಪೂರ್ಣವಾಗಿ ನಂಬಬಹುದಾದ ವ್ಯಕ್ತಿಯನ್ನು ಹೊಂದಿರುವುದು ಮುಖ್ಯ. ಸೆರ್ಗಿಯೊ ಅದ್ಭುತ ರಾಯಭಾರಿಯಾಗುತ್ತಾರೆ. ಅಭಿನಂದನೆಗಳು ಸೆರ್ಗಿಯೊ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ಆರೋಪ – ಗೃಹಿಣಿ ಆತ್ಮಹತ್ಯೆ
ಇನ್ನು ಈ ಕುರಿತು ಸೆರ್ಗಿಯೊ ಗೋರ್ ಪ್ರತಿಕ್ರಿಯಿಸಿ, ಭಾರತಕ್ಕೆ ಮುಂದಿನ ಅಮೆರಿಕಾ ರಾಯಭಾರಿ ಮತ್ತು ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ವಿಶೇಷ ರಾಯಭಾರಿಯಾಗಿ ನಾಮನಿರ್ದೇಶನ ಮಾಡುವಲ್ಲಿ ಟ್ರಂಪ್ ನಂಬಿಕೆ ಮತ್ತು ವಿಶ್ವಾಸಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೇ ಅಮೆರಿಕವನ್ನು ಪ್ರತಿನಿಧಿಸುವುದು ನನ್ನ ಜೀವನದ ಗೌರವವಾಗಿರುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ, ಮಾಜಿ ಸಂಸದ ಸುರವರಂ ಸುಧಾಕರ ರೆಡ್ಡಿ ನಿಧನ
ಮೇ 2023 ರಿಂದ ಜನವರಿ 2025ರವರೆಗೆ ರಾಯಭಾರಿಯಾಗಿ ಸೇವೆ ಸಲ್ಲಿಸಿದ ಎರಿಕ್ ಗಾರ್ಸೆಟ್ಟಿಯವರ ಸ್ಥಾನವನ್ನು ಗೋರ್ ತುಂಬಲಿದ್ದಾರೆ. ಅಮೆರಿಕಾ ಹಾಗೂ ಭಾರತದ ನಡುವಿನ ಸುಂಕದ ಉದ್ವಿಗ್ನತೆಯ ನಡುವೆ ಟ್ರಂಪ್ ಸೆರ್ಗಿಯೊ ಗೋರ್ ಅವರನ್ನು ಭಾರತದ ರಾಯಭಾರಿಯಾಗಿ ನೇಮಿಸಿದ್ದಾರೆ. ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಜೈಲಾ? ಬೇಲಾ? – ಇಂದು ಉಡುಪಿ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ