ಥಗ್‌ ಲೈಫ್ ಚಿತ್ರಕ್ಕೆ ʻಶುಗರ್‌ ಬೇಬಿʼ ಪಡೆದ ಸಂಭಾವನೆ ಎಷ್ಟು ಗೊತ್ತಾ?

Public TV
1 Min Read
Trisha

ಗ್‌ ಲೈಫ್ (Thug Life) ಚಿತ್ರ ಜೂನ್ 5 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಈ ಚಿತ್ರದ ಬಿಡುಗಡೆ ಹೊತ್ತಲ್ಲೇ ನಾಯಕಿಯಾಗಿ ನಟಿಸಿರುವ ತ್ರಿಷಾ (Trisha) ಎಷ್ಟು ಸಂಭಾವನೆ ಪಡೆದಿದ್ದಾರೆ ಎನ್ನುವ ವಿಚಾರ ಹರಿದಾಡುತ್ತಿದೆ. ದಕ್ಷಿಣ ಭಾರತದಲ್ಲಿ ಹೆಚ್ಚು ಸಂಭಾವನೆ ಪಡೆಯುವವರ ಪಟ್ಟಿಯಲ್ಲಿರುವ ಅವರು, ಈ ಚಿತ್ರಕ್ಕಾಗಿ 12 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಓಡಾಡುತ್ತಿದೆ.

ಚಿತ್ರದ ಎರಡು ಹಾಡುಗಳು ಈಗಾಗಲೇ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರದ ಬಿಡುಗಡೆ ಸಮೀಪಿಸುತ್ತಿದ್ದು, ಚಿತ್ರತಂಡವು ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದೆ.

Thug Life Trisha Kamal Haasan

ಚಿತ್ರದಲ್ಲಿ ʻಶುಗರ್ ಬೇಬಿʼಹಾಡಿಗೆ ತ್ರಿಷಾ ಅದ್ಭುತವಾಗಿ ಸೊಂಟ ಬಳುಕಿಸಿದ್ದಾರೆ. ಆದರೆ ಈ ಹಾಡು ಬಿಡುಗಡೆಯಾದಾಗ ವಿವಾದ ಆಗುತ್ತಾ ಎಂಬ ಚರ್ಚೆ ಹುಟ್ಟುಹಾಕಿತ್ತು. ಯಾಕಂದ್ರೆ ʻಶುಗರ್‌ ಬೇಬಿʼ ಪದ ಸಾಮಾನ್ಯವಾಗಿ ಹಣಕ್ಕಾಗಿ ವಯಸ್ಸಾದ ಪುರುಷನೊಂದಿಗೆ ಕಿರಿಯ ಯುವತಿ ಹೊಂದಿರುವ ಸಂಬಂಧವನ್ನು ಸೂಚಿಸುತ್ತದೆ. ಇದರಿಂದ ಚಿತ್ರದಲ್ಲಿ ತ್ರಿಷಾ (Trisha) ಅವರನ್ನು ವಿವಾದಾತ್ಮಕ ಪಾತ್ರದಲ್ಲಿ ಚಿತ್ರಿಸಿರಬಹುದು ಎಂಬ ಊಹಾಪೋಹಕ್ಕೆ ಎಡೆಮಾಡಿಕೊಟ್ಟಿದೆ. ಈಗಾಗಲೇ ಹಾಡಿನ ಪ್ರೋಮೋ ಅನೇಕರ ಕುತೂಹಲ ಕೆರಳಿಸಿದೆ.

ಮೇ 17 ರಂದು ಚಿತ್ರದ ಟ್ರೈಲರ್‌ ರಿಲೀಸ್‌ ಆಗಿತ್ತು. ಇದರಲ್ಲಿ ಕಮಲ್‌ ಹಾಸನ್‌ (Kamal Haasan) ತ್ರಿಷಾ ಜೊತೆ ರೊಮ್ಯಾನ್ಸ್.. ಅಭಿರಾಮಿಗೆ ಲಿಪ್‌ಲಾಕ್ ಮಾಡುವ ಸೀನ್‌ ಅಭಿಮಾನಿಗಳ ಕಾತರವನ್ನು ಹೆಚ್ಚಿಸಿತ್ತು. ಇನ್ನೂ ಸಿನಿ ರಸಿಕರ ಈ ಕಾತರ ತಣಿಯಲು ಜೂ.5ರ ವರೆಗೆ ಕಾಯಲೇ ಬೇಕಿದೆ.

ಥಗ್‌ ಲೈಫ್‌ನಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಟ ಕಮಲ್ ಹಾಸನ್ ನಾಯಕನಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಅವರ ಜೊತೆ ಸಿಂಬು, ತ್ರಿಷಾ, ಮತ್ತು ಅಭಿರಾಮಿ ಸೇರಿದಂತೆ ಪ್ರಮುಖ ನಟ ನಟಿಯರು ಚಿತ್ರದಲ್ಲಿ ನಟಿಸಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ತಗ್ ಲೈಫ್ ಚಿತ್ರಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಇನ್ನೂ ಚಿತ್ರದ ಪ್ರಮೋಷನ್‌ ವೇಳೆ ಬೆಂಗಳೂರಿನಲ್ಲಿ ಕಮಲ್‌ ಹಾಸನ್‌ ನೀಡಿದ್ದ ಕನ್ನಡ ವಿರೋಧಿ ಹೇಳಿಕೆಯಿಂದ, ಕರ್ನಾಟಕದಲ್ಲಿ ಚಿತ್ರ ಬಿಡುಗಡೆಗೆ ಕಂಟಕ ತಂದೊಡ್ಡುವ ಆತಂಕ ಎದುರಾಗಿದೆ.

Share This Article