ಇಂದು ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟ

Public TV
1 Min Read
RESULT

ನವದೆಹಲಿ: ದೇಶದ ರಾಜಕೀಯದ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿರುವ ಮೇಘಾಲಯ, ನಾಗಾಲ್ಯಾಂಡ್, ತ್ರಿಪುರಾ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಲಿದೆ.

ಈ ಮೂರು ಈಶಾನ್ಯ ಭಾರತದ ಈ ಮೂರು ರಾಜ್ಯಗಳಲ್ಲಿ ಯಾರ ಸರ್ಕಾರ ರಚನೆಯಾಗುತ್ತೆ ಅನ್ನೋ ಪ್ರಶ್ನೆಗೆ ಇಂದು ಉತ್ತರ ಸಿಗಲಿದೆ. ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ನಡೆಯಲಿದ್ದು, 11 ಗಂಟೆ ವೇಳೆ ಸ್ಪಷ್ಟ ಚಿತ್ರಣ ದೊರಕಲಿದೆ.

ಮತ ಎಣಿಕೆ ಕೇಂದ್ರಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಮತಎಣಿಕೆಯ ಚಿತ್ರೀಕರಣಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ತ್ರಿಪುರಾದಲ್ಲಿ ಆಡಳಿತಾರೂಢ ಸಿಪಿಎಂ ಮತ್ತು ಬಿಜೆಪಿ ನಡುವೆ ಭಾರಿ ಫೈಟ್ ನಡೆಯಲಿದೆ. ಅಲ್ಲದೆ 25 ವರ್ಷಗಳ ಎಡಪಕ್ಷಗಳ ಆಡಳಿತ ಅಂತ್ಯವಾಗಿ ಕಮಲ ಅರಳುತ್ತೆ ಅಂತಾ ಎರಡು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

636556595024510403

ಕಾಂಗ್ರೆಸ್ ಆಡಳಿತವಿದ್ದ ಮೆಘಾಲಯ ಮತ್ತು ಎನ್‍ಪಿಎಫ್ ಅಧಿಕಾರದಲ್ಲಿದ್ದ ನಾಗಾಲ್ಯಾಂಡ್‍ನಲ್ಲಿ ಬಿಜೆಪಿ ಪ್ರಬಲ ಪಕ್ಷವಾಗಿ ಹೊರಹೊಮ್ಮಲಿದೆ ಅಂತ ಹೇಳಲಾಗ್ತಿದೆ. ಮೂರೂ ರಾಜ್ಯಗಳು 60 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದ್ದು, ಸ್ಪಷ್ಟ ಬಹುಮತಕ್ಕೆ 31 ಸ್ಥಾನಗಳ ಅಗತ್ಯವಿದೆ.

ಈ ಬಾರಿ ವಿವಿಧ ಕಾರಣಗಳಿಂದಾಗಿ ಈ ಬಾರಿ ಮೂರೂ ರಾಜ್ಯಗಳಲ್ಲಿ 59 ಸ್ಥಾನಗಳಿಗೆ ಮತದಾನ ನಡೆದಿದೆ. ಫೆಬ್ರವರಿ 18ರಂದು ತ್ರಿಪುರಾ, ಫೆಬ್ರವರಿ 27ರಂದು ನಾಗಾಲ್ಯಾಂಡ್ ಮತ್ತು ಮೆಘಾಲಯ ರಾಜ್ಯಗಳಿಗೆ ಚುನಾವಣೆ ನಡೆದಿದೆ.

Share This Article
Leave a Comment

Leave a Reply

Your email address will not be published. Required fields are marked *