ಯೋಗದಿಂದ ಪರಿವರ್ತನೆ – ಅಂದು ಖೈದಿಯಾಗಿದ್ದಾತ ಈಗ ಯೋಗ ಗುರು

Public TV
1 Min Read
Davanagere yoga teacher

ದಾವಣಗೆರೆ: ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದ ವ್ಯಕ್ತಿಯೊಬ್ಬರು ಕಾರಾಗೃಹದಲ್ಲೇ ಯೋಗ (Yoga) ಕಲಿತು, ಈಗ ಇತರರಿಗೆ ಯೋಗ ಕಲಿಸುವಷ್ಟರ ಮಟ್ಟಕ್ಕೆ ಬೆಳೆದು ನಿಂತಿರುವ ಸ್ಪೂರ್ತಿದಾಯಕ ಘಟನೆ ದಾವಣಗೆರೆಯಲ್ಲಿ (Davanagere) ನಡೆದಿದೆ.

ವಿಚಾರಣಾಧೀನ ಖೈದಿಯಾಗಿದ್ದ (Prisoner) ವೇಳೆ ಕಾರಾಗೃಹದಲ್ಲಿ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಎಂ ಚಂದ್ರಶೇಖರ್ ಯೋಗದಿಂದ ಪರಿವರ್ತಿತರಾಗಿದ್ದಾರೆ. ಜೈಲಿನಲ್ಲಿ 6 ವರ್ಷಗಳ ಕಾಲ ಯೋಗ ಸಾಧನೆ ಮೂಲಕ ಈಗ ಯೋಗ ಶಿಕ್ಷಕರಾಗಿ (Yoga Teacher) ಬದಲಾಗಿದ್ದಾರೆ.

Davanagere yoga teacher 1

ದಾವಣಗೆರೆಯ ಬಂಬೂಬಜಾರ್ ನಿವಾಸಿ ಚಂದ್ರಶೇಖರ್ 2017ರಲ್ಲಿ ಕಳ್ಳತನ ಪ್ರಕರಣದಲ್ಲಿ ಜೈಲು ಸೇರಿದ್ದರು. ದಾವಣಗೆರೆ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾಗ ದಾವಣಗೆರೆ ಜಿಲ್ಲಾ ಒಕ್ಕೂಟದಿಂದ ಆಯೋಜಿಸಿದ್ದ ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಅವರು ಯೋಗಕ್ಕೆ ಆಕರ್ಷಿತರಾಗಿದ್ದರು. ಆ ಬಳಿಕ ಬಳ್ಳಾರಿ ಜೈಲಿನಲ್ಲೂ ಯೋಗವನ್ನು ಕಲಿತಿದ್ದಾರೆ. 6 ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದಾರೆ. ಇದನ್ನೂ ಓದಿ: ಫ್ರೀ ಬಸ್ ಎಫೆಕ್ಟ್: ಮಹಿಳೆಯರ ಮೇಲೆಯೇ ಬಸ್ ಹತ್ತಿಸಲು ಮುಂದಾದ ಚಾಲಕ

2018ರಲ್ಲಿ ಬಳ್ಳಾರಿ ಜೈಲಿನಲ್ಲಿದ್ದಾಗ ಬೆಳಗ್ಗೆ 7:30 ರಿಂದ 10:30 ರವರೆಗೆ ಯೋಗ ಹಾಗೂ ಧ್ಯಾನ ಮಾಡುತ್ತಿದ್ದೆ. ಬಳ್ಳಾರಿಯ ಪಿರಮಿಡ್ ಸ್ಪಿರಿಚುವಲ್ ಸೈನ್ಸ್ ಅಕಾಡೆಮಿಯ ಪುಸ್ತಕಗಳನ್ನು ನೋಡಿ ಯೋಗವನ್ನು ಕಲಿತು ಯೋಗ ತನ್ನ ವ್ಯಕ್ತಿತ್ವವನ್ನು ರೂಪಿಸಲು ಕಾರಣವಾಯಿತು. ನಾನು ಕಲಿತಿದ್ದನ್ನು ಜಗತ್ತಿಗೆ ಕಲಿಸಬೇಕು ಎಂದು ಚಂದ್ರಶೇಖರ್ ಈಗ ಆಶಯ ವ್ಯಕ್ತಪಡಿಸಿದ್ದಾರೆ.

ಯೋಗ ಒಬ್ಬ ಕೈದಿಯನ್ನು ಪರಿವರ್ತನೆ ಮಾಡುವ ಶಕ್ತಿ ಹೊಂದಿದೆ ಎನ್ನುವುದನ್ನು ತೋರಿಸಿಕೊಟ್ಟಿದೆ. ಯೋಗ ಧ್ಯಾನದಲ್ಲಿ ಪ್ರಾವಿಣ್ಯತೆ ಹೊಂದಿರುವ ಚಂದ್ರಶೇಖರ್ ನೂರಾರು ಜನರಿಗೆ ಯೋಗ ಹಾಗೂ ಧ್ಯಾನವನ್ನು ಕಲಿಸುವ ವ್ಯಕ್ತಿಯಾಗಿ ಹೊರ ಹೊಮ್ಮಿದ್ದಾರೆ. ನಗರದಲ್ಲಿ ಎನ್‌ಜಿಒಗಳು ನಡೆಸುವ ಯೋಗ ಶಿಬಿರಗಳಲ್ಲಿ ಚಂದ್ರಶೇಖರ್ ಜನರಿಗೆ ಯೋಗ ಕಲಿಸುತ್ತಾರೆ. ಇದನ್ನೂ ಓದಿ: ಉಳ್ಳಾಲ ನಿವಾಸಿಗೆ ಬರೋಬ್ಬರಿ 7,71,000 ರೂ. ವಿದ್ಯುತ್ ಬಿಲ್ – ನಿಜವಾಗಿ ನಡೆದಿದ್ದು ಏನು?

Share This Article