ಪುನೀತ್ ರಾಜ್‍ಕುಮಾರ್ (Puneeth RajKumar) ನಟನೆಯ ಗಂಧದ ಗುಡಿ (Gandhada Gudi) ಡಾಕ್ಯುಮೆಂಟರಿ ಮಾದರಿಯ ಸಿನಿಮಾದ ಟ್ರೈಲರ್ ಇಂದು ಬಿಡುಗಡೆ ಆಗುತ್ತಿದೆ. ಅಭಿಮಾನಿಗಳಿಗಾಗಿ ಟ್ರೈಲರ್ ನೋಡಲು ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ವಿಶೇಷ ವ್ಯವಸ್ಥೆಯನ್ನು ಮಾಡಲಾಗಿದ್ದು, ಈ ಚಿತ್ರಮಂದಿರಕ್ಕೆ ಪುನೀತ್ ಕುಟುಂಬ ಕೂಡ ಭಾಗಿಯಾಗಲಿದೆ.
ಶುಭೋದಯ ????
ಅಪ್ಪು ಮಗನೆ… ನೀನೆ ನನ್ನನ್ನು ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ಕರೆದೊಯ್ಯುತ್ತಿರುವೆ ಎಂಬ ಭಾವನೆ! ????❤????
ಇಂದು ಗಂಧದಗುಡಿ ಟ್ರೈಲರ್ ಬಿಡುಗಡೆ ಸಮಾರಂಭ
ನರ್ತಕಿ ಚಿತ್ರಮಂದಿರ | ಬೆಳಗ್ಗೆ 9:45ಕ್ಕೆ
Happy morning. Happy Sunday.
Take care. Jai Anjeneya. Jai Gurudev. ???????????? pic.twitter.com/1h3weq01qO
— Raghavendra Rajkumar (@RRK_Official_) October 8, 2022
ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್, ಸಹೋದರರಾದ ರಾಘವೇಂದ್ರ ರಾಜ್‍ಕುಮಾರ್ (Raghevendra RajKumar), ಶಿವರಾಜ್ ಕುಮಾರ್ (Shivaraj Kumar), ಪುನೀತ್ ಸಹೋದರಿಯರು ಹಾಗೂ ಸಹೋದರರ ಮಕ್ಕಳು ಕೂಡ ಭಾಗಿಯಾಗಲಿದ್ದಾರೆ. ಥಿಯೇಟರ್ ಗೆ ಹೋಗುವ ಮುನ್ನ ಬೆಳಗ್ಗೆ ರಾಘವೇಂದ್ರ ರಾಜ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಪುನೀತ್ ಜೊತೆಗಿರುವ ಫೋಟೋ (Photo) ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಕನಸು ನನಸು- ಗಂಧದ ಗುಡಿ ಸಾಕ್ಷ್ಯಚಿತ್ರದ ಟೈಟಲ್ ಟೀಸರ್ ಔಟ್
ಸೋಷಿಯಲ್ ಮೀಡಿಯಾದಲ್ಲಿ ಭಾವುಕತೆಯಿಂದ ಕೆಲವು ಸಾಲುಗಳನ್ನು ಬರೆದಿರುವ ರಾಘಣ್ಣ, ಅಪ್ಪು ಮಗನೇ ಟ್ರೈಲರ್ ಬಿಡುಗಡೆ ಸಮಾರಂಭಕ್ಕೆ ನೀನೇ ನನ್ನ ಕೈ ಹಿಡಿದು ಕರೆದುಕೊಂಡು ಹೋಗುವಂತೆ ಭಾಸವಾಗುತ್ತಿದೆ ಎಂದು ಬರೆದಿದ್ದಾರೆ. ತಮ್ಮ ಕೈ ಹಿಡಿದುಕೊಂಡು ನರ್ತಕಿ ಚಿತ್ರಮಂದಿರದ ಒಳಗೆ ಅಪ್ಪು ಕರೆದುಕೊಂಡು ಹೋಗುತ್ತಿರುವ ಚಿತ್ರವನ್ನೂ ಅವರು ಪೋಸ್ಟ್ ಮಾಡಿದ್ದಾರೆ.
ಅಪ್ಪು… ನಿನ್ನನ್ನು ಬೆಳ್ಳಿತೆರೆಯ ಮೇಲೆ ನೋಡುವ ಕಾತುರದಲ್ಲಿ…@Ashwini_PRK ಅವರಿಂದ ಪ್ರೀತಿಯ ಅಭಿಮಾನಿಗಳ ಜೊತೆ #ಗಂಧದಗುಡಿ ಟ್ರೈಲರ್ ಲಾಂಚ್ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ…
ನಾಳೆ 9ನೇ ಅಕ್ಟೋಬರ್ 2022 ಬೆಳಗ್ಗೆ 9:45ಕ್ಕೆ#GandhadaGudi pic.twitter.com/rCzvwcgnlh
— Raghavendra Rajkumar (@RRK_Official_) October 8, 2022
ಗಂಧದ ಗುಡಿ ಪುನೀತ್ ರಾಜ್‍ಕುಮಾರ್ ನಟನೆಯ ಕನಸಿನ ಪ್ರಾಜೆಕ್ಟ್. ಇದು ಅವರ ಕೊನೆಯ ಸಿನಿಮಾ ಕೂಡ. ಲಾಕ್ ಡೌನ್ ವೇಳೆಯಲ್ಲಿ ಕಾಡಿನೊಳಗಿದ್ದು, ಕರುನಾಡ ವನ ಸಂಪತ್ತನ್ನು ಸೆರೆ ಹಿಡಿದಿದ್ದಾರೆ. ಪ್ರಾಣಿ, ಕಾಡು, ಪರಿಸರ, ಜಲಚರ ಹೀಗೆ ಅನೇಕ ಸಂಗತಿಗಳನ್ನು ಇದರಲ್ಲಿ ತಂದಿದ್ದಾರೆ. ಡಾಕ್ಯುಮೆಂಟರಿ ಮಾದರಿಯಲ್ಲಿರುವ ಈ ಚಿತ್ರದಲ್ಲಿ ಪುನೀತ್ ಪ್ರತಿ ದೃಶ್ಯದಲ್ಲೂ ಆವರಿಸಿಕೊಂಡಿದ್ದಾರೆ. ಇದರ ಟ್ರೈಲರ್ ಇಂದು ಬೆಳಗ್ಗೆ 9.45ಕ್ಕೆ ನರ್ತಕಿ ಚಿತ್ರ ಮಂದಿರದಲ್ಲಿ ಬಿಡುಗಡೆ ಆಗುತ್ತಿದೆ.