– 1600 ಸರಣಿ ನಂಬರ್ ಕಡ್ಡಾಯಗೊಳಿಸಿದ ಟ್ರಾಯ್
– ಸೈಬರ್ ಕ್ರೈಂ ತಡೆಗಟ್ಟಲು ಕ್ರಮ
ನವದೆಹಲಿ: ಸೈಬರ್ ಕ್ರೈಂ (Cyber Crime) ವಂಚನೆ ಪ್ರಕರಣ ಜಾಸ್ತಿ ಆಗುತ್ತಿದ್ದಂತೆ ಅವುಗಳನ್ನು ತಡೆಗಟ್ಟಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಹಣಕಾಸು ಸಂಸ್ಥೆಗಳಿಗೆ ಒಂದೇ ಸರಣಿಯ ನಂಬರ್‌ಗಳಿಂದ ಕರೆಯನ್ನು ಕಳುಹಿಸಬೇಕೆಂದು ಕಡ್ಡಾಯ ಮಾಡಿ ಆದೇಶ ಪ್ರಕಟಿಸಿದೆ.
ಬ್ಯಾಂಕುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಪಿಂಚಣಿ ನಿಧಿ ಕಂಪನಿಗಳು 1600 ಸರಣಿ ಸಂಖ್ಯೆಯಿಂದಲೇ ಕರೆ ಕಳುಹಿಸಬೇಕೆಂದು ಟ್ರಾಯ್ ಸೂಚಿಸಿದೆ.
ಕಂಪನಿಗಳೇ ಕಳುಹಿಸಿದ ಕರೆ ಯಾವುದು? ಮತ್ತು ಮೋಸ ಮಾಡುವ ಸ್ಪ್ಯಾಮ್ ಕರೆ (Spam Call) ಯಾವುದು ಎಂದು ಪತ್ತೆಹಚ್ಚಲು ಟ್ರಾಯ್ ಈ ಮಹತ್ವದ ನಿರ್ಧಾರ ಕೈಗೊಂಡಿದ್ದು ಮಾರ್ಚ್ 2026 ರೊಳಗೆ ಹಂತ ಹಂತವಾಗಿ ಜಾರಿಯಾಗಲಿದೆ. ಇದನ್ನೂ ಓದಿ: ಕೂಡಲೇ ರೈತರಿಗೆ ಬೆಳೆ ನಷ್ಟ ಪರಿಹಾರ ನೀಡಲು ಕ್ರಮ ವಹಿಸಿ – ಸಿಎಂಗೆ ಪತ್ರ ಬರೆದ ಬೊಮ್ಮಾಯಿ
ದೂರಸಂಪರ್ಕ ಇಲಾಖೆ (DoT) ʼ1600ʼ ಸಂಖ್ಯಾ ಬ್ಲಾಕ್ ಅನ್ನು ನಿರ್ದಿಷ್ಟವಾಗಿ ನಿಯಂತ್ರಿತ ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆ ಮಾಡಿದ ನಂತರ ಈ ನಿರ್ದೇಶನ ಬಂದಿದೆ. ಪ್ರಸ್ತುತ ಈಗ ಸುಮಾರು 485 ಹಣಕಾಸು ಸಂಸ್ಥೆಗಳು ಈಗಾಗಲೇ 1600 ಸರಣಿಯನ್ನು ಬಳಸುತ್ತಿದ್ದು 2,800 ಕ್ಕೂ ಹೆಚ್ಚು ಸಂಖ್ಯೆಗಳನ್ನು ಒಳಗೊಂಡಿವೆ.
1600 ಸರಣಿಯೇ ಯಾಕೆ?
ಇಲ್ಲಿಯವರೆಗಿನ ವ್ಯವಸ್ಥೆಯಲ್ಲಿ ಬ್ಯಾಂಕ್‌ನಿಂದ ಬರುತ್ತಿರುವ ಕರೆ ಯಾವುದು ಬೇರೆಯವರು ಕಳುಹಿಸಿದ ಕರೆ ಯಾವುದು ಎಂದು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ವ್ಯವಸ್ಥೆಯಲ್ಲಿರುವ ಈ ಲೋಪದ ಲಾಭ ಪಡೆಯುತ್ತಿರುವ ಕಳ್ಳರು ಈಗ ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ನಾವು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ಗ್ರಾಹಕರ ವೈಯಕ್ತಿಕ ವಿವರ ಪಡೆದು ಹಣವನ್ನು ದೋಚುತ್ತಿದ್ದಾರೆ.
ಸೈಬರ್ ಕಳ್ಳರು ಈ ತಂತ್ರವನ್ನೇ ಬಳಸಿ ಹೆಚ್ಚು ಹೆಚ್ಚು ಕೃತ್ಯ ಎಸಗುತ್ತಿದ್ದಾರೆ ಎನ್ನುವ ವಿಚಾರ ಟ್ರಾಯ್ ಗಮನಕ್ಕೆ ಬರುತ್ತಿದ್ದಂತೆ ಈಗ 1600-ಸರಣಿಯ ನಂಬರ್‌ನಿಂದಲೇ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಕರೆ ಕಳುಹಿಸಬೇಕೆಂದು ಸೂಚಿಸಿದೆ. ಇದರಿಂದ ನಾಗರಿಕರಿಗೆ ವಿಶ್ವಾಸಾರ್ಹ ಹಣಕಾಸು ಕರೆಗಳನ್ನು ಗುರುತಿಸಲು ಸಹಾಯವಾಗಲಿದೆ ಎಂದು TRAI ಹೇಳಿದೆ. ಇದನ್ನೂ ಓದಿ: ಸುವರ್ಣಸೌಧ ನವೀಕರಣಕ್ಕೆ ಕೇಳಿದ್ದು 11 ಕೋಟಿ, ಬಿಡುಗಡೆಯಾಗಿದ್ದು 1 ಕೋಟಿ
Your safety is our priority!
If you receive a call from a number starting with +91-1600, rest assured- it’s a genuine and legitimate call.
These numbers are used for transactional and service-related calls to customers, helping you distinguish legitimate calls from spam and… pic.twitter.com/55Arvwzl0m
— State Bank of India (@TheOfficialSBI) July 6, 2025
ಯಾವ ರೀತಿ ಇರಲಿದೆ ನಂಬರ್?
+91-1600 ಸಂಖ್ಯೆಯಿಂದ ಕರೆ ಬರಲಿದೆ. +91 ಭಾರತದ ಕೋಡ್ ಆಗಿರುವ ಕಾರಣ ಈ ಸಂಖ್ಯೆ ಆರಂಭದಲ್ಲಿ ಇರುತ್ತದೆ. ಉದಾಹರಣೆಗೆ ಎಸ್‌ಬಿಐ ಕರೆಗಳು +91-1600-01-8000, +91-1600-01-8002 ಈ ಸರಣಿಯಿಂದ ಆರಂಭವಾಗುತ್ತದೆ.
ಯಾರಿಗೆ ಯಾವಾಗ ಡೆಡ್‌ಲೈನ್?
ಸೆಬಿ ನಿಯಂತ್ರಿತ ಮ್ಯೂಚುವಲ್ ಫಂಡ್‌ಗಳು ಮತ್ತು AMCಗಳು ಫೆಬ್ರವರಿ 15, 2026 ರೊಳಗೆ, ಅರ್ಹ ಸ್ಟಾಕ್‌ಬ್ರೋಕರ್‌ಗಳು (QSBಗಳು) 15 ಮಾರ್ಚ್ 2026 ರೊಳಗೆ ಜಾರಿ ಮಾಡಬೇಕಾಗುತ್ತದೆ.
ಆರ್‌ಬಿಐ-ನಿಯಂತ್ರಿತ ವಾಣಿಜ್ಯ ಬ್ಯಾಂಕುಗಳು (ಸಾರ್ವಜನಿಕ, ಖಾಸಗಿ, ವಿದೇಶಿ) ಜನವರಿ 1, 2026 ರೊಳಗೆ, ದೊಡ್ಡ ಎನ್‌ಬಿಎಫ್‌ಸಿಗಳು (ಆಸ್ತಿ ಗಾತ್ರ > ರೂ. 5,000 ಕೋಟಿ ರೂ.), ಪಾವತಿ ಬ್ಯಾಂಕುಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಫೆಬ್ರವರಿ 1, 2026 ರೊಳಗೆ ಜಾರಿ ಮಾಡಬೇಕು.
ವಿಮಾ ವಲಯದಲ್ಲಿ, ಅಂತಿಮ ದಿನಾಂಕಗಳನ್ನು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ಜೊತೆ ಚರ್ಚೆ ನಡೆಸಿ ಬಳಿಕ ಘೋಷಿಸಲಾಗುವುದು ಎಂದು TRAI ಹೇಳಿದೆ.

