ನವದೆಹಲಿ: ಇಂಟರ್ನೆಟ್ ಬ್ರಾಡ್‍ಬ್ಯಾಂಡ್ ವೇಗವನ್ನು ಉತ್ತೇಜಿಸಲು ಜನರಿಗೆ ಸರ್ಕಾರ 200 ರೂ. ಕ್ಯಾಶ್‍ಬ್ಯಾಕ್ ಆಫರ್ ನೀಡಬೇಕೆಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ( ಟ್ರಾಯ್) ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಈ ವೇಳೆ ಕನಿಷ್ಠ ಬ್ರಾಡ್‍ಬ್ಯಾಂಡ್ ವೇಗವನ್ನು 512 ಕೆಬಿಪಿಎಸ್(ಕಿಲೋಬೈಟ್ಸ್ ಪರ್ ಸೆಕೆಂಡ್) ನಿಂದ 2 ಎಂಬಿಪಿಎಸ್(ಮೆಗಾಬೈಟ್ಸ್ ಸೆಕೆಂಡ್) ವೇಗಕ್ಕೆ ಏರಿಸಬೇಕು ಎಂದು ಹೇಳಿದೆ.
Advertisement
Advertisement
ಕೋವಿಡ್ 19 ಹಿನ್ನೆಲೆಯಲ್ಲಿ ಉದ್ಯೋಗಿಗಳು ಮನೆಯಿಂದ ಉದ್ಯೋಗ ಮಾಡುತ್ತಿದ್ದರೆ, ವಿದ್ಯಾರ್ಥಿಗಳು ಆನ್‍ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹೀಗಾಗಿ ಕನಿಷ್ಠ ಬ್ರಾಡ್‍ಬ್ಯಾಂಡ್ ವೇಗವನ್ನು 2 ಎಂಬಿಪಿಎಸ್ ಗೆ ಹೆಚ್ಚಿಸಬೇಕು ಎಂದು ತಿಳಿಸಿದೆ. ಇದನ್ನೂ ಓದಿ : ಕೆಲವರ ಹಿತಾಸಕ್ತಿಗೆ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ವಿಳಂಬ – ಕೇಂದ್ರಕ್ಕೆ ಜಿಯೋ ಪತ್ರ
Advertisement
2 ಎಂಬಿಪಿಎಸ್ ಬ್ರಾಡ್‍ಬ್ಯಾಂಡ್ ದರ ಹೆಚ್ಚಾದರೆ ಗ್ರಾಹಕರಿಗೆ ಹೊರೆಯಾಗಬಹುದು. ಈ ನಿಟ್ಟಿನಲ್ಲಿ ಹೊರೆಯನ್ನು ತಪ್ಪಿಸಲು ಶೇ.50 ರಷ್ಟು ಹಣ ಅಂದರೆ ಪ್ರತಿ ತಿಂಗಳು ಗರಿಷ್ಠ 200 ರೂ. ಹಣವನ್ನು ಸರ್ಕಾರ ಕ್ಯಾಶ್‍ಬ್ಯಾಕ್ ಆಗಿ ನೀಡಬೇಕು. ಈ ಕ್ಯಾಶ್‍ಬ್ಯಾಕ್ ಡಿಬಿಟಿ(ನೇರ ನಗದು ವರ್ಗಾವಣೆ) ರೂಪದಲ್ಲಿ ಗ್ರಾಹಕರ ಖಾತೆಗೆ ಜಮೆಯಾಗಬೇಕು ಎಂದು ಸಲಹೆ ನೀಡಿದೆ.
Advertisement
ಟ್ರಾಯ್ ಬಿಡುಗಡೆ ಮಾಡಿದ ಮಾಧ್ಯಮ ಹೇಳಿಕೆಯ ಪ್ರಕಾರ ಭಾರತದಲ್ಲಿ ಬ್ರಾಡ್‍ಬ್ಯಾಂಡ್ ಸೇವೆಯನ್ನು ಬೇಸಿಕ್, ಫಾಸ್ಟ್ ಮತ್ತು ಸೂಪರ್ ಫಾಸ್ಟ್ ಮೂರು ವರ್ಗಗಳಾಗಿ ವಿಂಗಡಿಸಲಾಗಿದೆ. ‘ಬೇಸಿಕ್’ ನಲ್ಲಿ ಕನೆಕ್ಷನ್ 2 ಎಂಬಿಪಿಎಸ್‍ನಿಂದ 50 ಎಂಬಿಪಿಎಸ್ ಒಳಗಡೆ ಇರಬೇಕು. ‘ಫಾಸ್ಟ್’ ನಲ್ಲಿ 50 ಎಂಬಿಪಿಎಸ್‍ನಿಂದ 300 ಎಂಬಿಪಿಎಸ್ ಇರಬೇಕು. ‘ಸೂಪರ್ ಫಾಸ್ಟ್’ ನಲ್ಲಿ ಕನೆಕ್ಷನ್ ವೇಗ 300 ಎಂಬಿಪಿಎಸ್ ಗಿಂತಲೂ ಹೆಚ್ಚು ಇರಬೇಕು. ಇದನ್ನೂ ಓದಿ : ಜಿಯೋ ಸರ್‍ಪ್ರೈಸ್ ಆಫರನ್ನು ಟ್ರಾಯ್ ಕ್ಯಾನ್ಸಲ್ ಮಾಡಿದ್ದು ಯಾಕೆ?
ಪ್ರಸ್ತುತ ಈಗ ಗರಿಷ್ಠ ಬ್ರಾಡ್‍ಬ್ಯಾಂಡ್ ವೇಗ 512 ಕೆಬಿಪಿಎಸ್ ಗೆ ಅಪ್‍ಗ್ರೇಡ್ ಮಾಡಲಾಗಿದೆ. ಈ ಮೊದಲು 256 ಕೆಬಿಪಿಎಸ್ ಮತ್ತು 56 ಕೆಬಿಪಿಎಸ್ ಇತ್ತು.
ತನ್ನ ಶಿಫಾರಸಿನಲ್ಲಿ ಟ್ರಾಯ್ 5ಜಿ ಸೇವೆಗಳಿಗೆ ಸೂಕ್ತವೆಂದು ಪರಿಗಣಿಸಲ್ಪಡುವ ಸ್ಪೆಕ್ಟ್ರಂ ಹರಾಜನ್ನು ತ್ವರಿತಗೊಳಿಸುವಂತೆ ಕೇಳಿದೆ. ಕೋವಿಡ್ ನಂತರದ ಅವಧಿಯಲ್ಲಿ ಹೆಚ್ಚಿದ ಡೇಟಾ ಬಳಕೆಯನ್ನು ಗಮನಿಸಿದರೆ, ಮೊಬೈಲ್ ಬ್ರಾಡ್‍ಬ್ಯಾಂಡ್ ವೇಗವನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದೆ.