ಮಡಿಕೇರಿ: ಕುಶಾಲನಗರದಲ್ಲಿ (Kushalanagar) ಅಪ್ರಾಪ್ತನೊಬ್ಬ ಟ್ರ್ಯಾಕ್ಟರ್ ಚಲಾಯಿಸಿ ಬೈಕ್‍ಗೆ ಡಿಕ್ಕಿಯಾದ ಪರಿಣಾಮ ಸವಾರ ಸಾವನ್ನಪ್ಪಿದ್ದು, ಬಾಲಕನ ತಂದೆ ಹಾಗೂ ತಾಯಿಯ ವಿರುದ್ಧ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಕುಶಾಲನಗರ ಗ್ರಾಮಾಂತರ ಪೊಲೀಸ್ (Police) ಠಾಣಾ ವ್ಯಾಪ್ತಿಯ ಸುಂದರನಗರದಲ್ಲಿ ಮೇ 31 ರಂದು ಬಾಲಕ ಟ್ರ್ಯಾಕ್ಟರ್ ಚಲಾಯಿಸಿ ಬೈಕ್ ಸವಾರ ಶಿವಶಂಕರ್ (22) ಎಂಬವರ ಸಾವಿಗೆ ಕಾರಣನಾಗಿದ್ದ. ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 279, 304(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ಈ ಸಂಬಂಧ ವಿನಾಯಕ ಬಡವಾಣೆ ನಿವಾಸಿ ತುಳಸಿ.ಟಿ ಹಾಗೂ ಪರಮೇಶ್ ಅವರ ಅಪ್ರಾಪ್ತ ವಯಸ್ಸಿನ ಪುತ್ರ ಟ್ರ್ಯಾಕ್ಟರ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ದ್ವಿಚಕ್ರ ವಾಹನಕ್ಕೆ ಅಪಘಾತ ಎಸಗಿರುವುದು ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಮತ್ತೆ ನರೇಂದ್ರ ಮೋದಿ, 400 ಗಡಿ ದಾಟುವುದೇ ನಮ್ಮ ಅಜೆಂಡಾ: ಆರ್.ಅಶೋಕ್
ಆರೋಪಿ ಅಪ್ರಾಪ್ತನಾಗಿರುವುದರಿಂದ ಟ್ರ್ಯಾಕ್ಟರ್ ಮಾಲೀಕರಾದ ತುಳಸಿ.ಟಿ ಹಾಗೂ ಪತಿ ಪರಮೇಶ್‍ನನ್ನು ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಅಪ್ರಾಪ್ತ ಈ ಹಿಂದೆ 2023 ರಲ್ಲಿ ಸುಂದರನಗರ ಹಾರಂಗಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಅಪಘಾತವೆಸಗಿ ಪಾದಾಚಾರಿಯೊಬ್ಬರ ಸಾವಿಗೆ ಕಾರಣನಾಗಿದ್ದ. ಈ ಸಂಬಂಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಲ್ಲದೇ ನ್ಯಾಯಾಲಯದ ಶಿಕ್ಷೆಯನ್ನು ಪ್ರಕಟಿಸಿತ್ತು. ಇದನ್ನೂ ಓದಿ: ಚುನಾವಣೋತ್ತರ ಸಮೀಕ್ಷೆಗಳಲ್ಲಿ ನಂಬಿಕೆ ಇಲ್ಲ, ಕಾಂಗ್ರೆಸ್ ಡಬಲ್ ಡಿಜಿಟ್ ದಾಟುತ್ತೆ: ಡಿಕೆಶಿ