– ಕಾಂಗ್ರೆಸ್‌ನವರು ನೀಡುತ್ತಿರೋದು ಗ್ಯಾರಂಟಿ ಕಾರ್ಡ್ ಅಲ್ಲ, ಅದು ಗಳಗಂಟಿ
ಯಾದಗಿರಿ: ಸ್ವಾತಂತ್ರ‍್ಯ ಬಂದ ಮೇಲೆ ದೇಶ ಒಡೆದಿರಿ. ಆಮೇಲೆ ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದೀರಿ. ವೀರಶೈವ ಲಿಂಗಾಯತರನ್ನು ಒಡೆಯಲು ಹೋಗಿ ಮಣ್ಣು ಮುಕ್ಕಿದ್ದೀರಿ. ಈಗ ಅದೇ ತಪ್ಪನ್ನು ಮಾಡುತ್ತಿದ್ದೀರಿ. ತಾಕತ್ ಇದ್ದರೆ, ಧಮ್ ಇದ್ದರೆ ಮೀಸಲಾತಿಯನ್ನು (Reservation) ಮುಟ್ಟಿ ನೋಡಿ. ಈ ಕೇಸರಿ ಅಲೆಯನ್ನು ನಿಲ್ಲಿಸಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕಾಂಗ್ರೆಸ್ (Congress) ನಾಯಕರಿಗೆ ಸವಾಲು ಹಾಕಿದರು.
Advertisement
ಯಾದಗಿರಿ (Yadgiri) ಜಿಲ್ಲೆಯ ಶಹಪುರದಲ್ಲಿ ಬಿಜೆಪಿ (BJP) ಅಭ್ಯರ್ಥಿ ಅಮೀನರೆಡ್ಡಿ ಪಾಟೀಲ ಯಾಳಗಿ ಪರ ರೋಡ್ ಶೋ ನಡೆಸಿ ಮಾತನಾಡಿದ ಸಿಎಂ ಬೊಮ್ಮಾಯಿ, ಇಡೀ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೂ ಬರಲಿ, ಲೋಕಲ್‌ನವರೂ ಬರಲಿ. ಕೇಸರಿ ಅಲೆಯನ್ನು ತಡೆಗಟ್ಟಲಿ ನೋಡೋಣ. ಇಷ್ಟು ವರ್ಷ ದೇಶವನ್ನು ಮೋಸ, ಸುಳ್ಳಿನಿಂದ ಕಾಂಗ್ರೆಸ್‌ನವರು ಆಳ್ವಿಕೆ ಮಾಡಿದ್ದಾರೆ. ಇನ್ನುಮುಂದೆ ನಿಮ್ಮ ಆಟ, ಸುಳ್ಳು ನಡೆಯುವುದಿಲ್ಲ ಎಂದು ಗುಡುಗಿದರು.
Advertisement
Advertisement
ಜಾತಿ ಸಮೀಕ್ಷೆಗಾಗಿ 130 ಕೋಟಿ ರೂ. ಖರ್ಚು ಮಾಡಿದ್ದೀರಿ. ನಿಮಗೆ ತಾಕತ್ ಇಲ್ಲ. ಹೀಗಾಗಿ ಅದನ್ನು ಜಾರಿ ಮಾಡಲಿಲ್ಲ. ಆದರೆ ನಾವು ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದೇವೆ. ಸಮಾಜ ಒಡೆಯುವ ಇಚ್ಛೆ ನಮಗಿಲ್ಲ, ಅದು ಕಾಂಗ್ರೆಸ್‌ನವರ ಕೆಲಸ. ಶೇ.75 ರಷ್ಟು ಮೀಸಲಾತಿ ಕೊಡುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ ಎಸ್‌ಸಿ, ಎಸ್‌ಟಿ ಮೀಸಲಾತಿ ಜಾರಿ ಮಾಡಲಿಲ್ಲ. 30 ವರ್ಷದ ಬೇಡಿಕೆಯನ್ನು ಈಡೇರಿಸಲಿಲ್ಲ. ಎಸ್‌ಸಿ, ಎಸ್‌ಟಿಯನ್ನು ಅವರ ಸರ್ಕಾರ ಇದ್ದಾಗ 5 ವರ್ಷ ಬಾವಿಯಲ್ಲಿ ಹಾಕಿದರು. ಆದರೆ ನಾವು ಎಸ್‌ಸಿ, ಎಸ್‌ಟಿ ಬೇಡಿಕೆ ಈಡೇರಿಸಿದ್ದೇವೆ. ಜೇನುಗೂಡಿಗೆ ಕೈ ಹಾಕಬೇಡಿ ಎಂದಿದ್ದರು. ನಾನು ಜೇನು ಹುಳ ಕಚ್ಚಿಸಿಕೊಂಡು ಜನರಿಗೆ ಒಳ್ಳೆದು ಮಾಡಿದ್ದೇನೆ ಎಂದು ಹೇಳಿದರು.
Advertisement
ಕಾಂಗ್ರೆಸ್ ವೋಟ್ ಬ್ಯಾಂಕ್ ಛಿದ್ರವಾಗಿದೆ. ಎಲ್ಲಾ ಸಮುದಾಯದವರು ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್‌ನವರು ಹತಾಶೆಯಾಗಿದ್ದಾರೆ. ಲಿಂಗಾಯತರು ಭ್ರಷ್ಟರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನೀವು ಇದನ್ನೂ ಒಪ್ಪಿಕೊಳ್ಳುತ್ತೀರಾ ಎಂದು ಜನರನ್ನು ಪ್ರಶ್ನಿಸಿದ ಸಿಎಂ, ಕಾಂಗ್ರೆಸ್‌ನವರು ನೀಡುತ್ತಿರುವುದು ಗ್ಯಾರಂಟಿ ಕಾರ್ಡ್ ಅಲ್ಲ. ಅದು ಗಳಗಂಟಿ. ಮೇ 10ರ ನಂತರ ಅದು ಇರುವುದಿಲ್ಲ ಎಂದು ಲೇವಡಿ ಮಾಡಿದರು. ಇದನ್ನೂ ಓದಿ: ಖರ್ಗೆ ಹೇಳಿಕೆಯಿಂದ ಬಿಜೆಪಿಗೆ 2-3% ಮತ ಹೆಚ್ಚಳವಾಗಲಿದೆ: ಸುಧಾಕರ್
ಅಧಿಕಾರಕ್ಕಾಗಿ ಸಮಾಜವನ್ನು ಒಡೆಯುವ ಕೆಲಸವನ್ನು ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ. ನಿಜವಾದ ಒಕ್ಕಲಿಗರು ಭಿಕ್ಷುಕರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳುತ್ತಾರೆ. ಆದರೆ ನಾನು ಹೇಳುತ್ತೇನೆ, ಅವರು ಸಂವಿಧಾನ ಬದ್ಧ ಹಕ್ಕನ್ನು ಕೇಳುತ್ತಿದ್ದಾರೆ ಎಂದರು.
ಸಿಎಂ ರೋಡ್ ಶೋನಲ್ಲಿ ನಟಿ ಶೃತಿ, ರಾಯಚೂರು ಸಂಸದ ರಾಜಾ ಅಮರೇಶ್ ನಾಯಕ್, ಶಾಸಕ ರಾಜೂಗೌಡ, ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಶರಣಭೂಪಾಲರೆಡ್ಡಿ, ಡಾ. ಚಂದ್ರಶೇಖರ ಸುಬೇದಾರ್ ಇದ್ದರು. ರೋಡ್ ಶೋನಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗಿಯಾಗಿದ್ದರು. ಇದನ್ನೂ ಓದಿ: ಪುತ್ತಿಲ ಕಾಂಗ್ರೆಸ್, ಭಯೋತ್ಪಾದನೆ, ಲವ್ ಜಿಹಾದ್ ವಿರುದ್ಧ ಮಾತನಾಡಿಲ್ಲ: ಕಲ್ಲಡ್ಕ ಪ್ರಭಾಕರ ಭಟ್