ಬೆಳಗಾವಿ: ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಗಂಡನಿಂದ ನಿತ್ಯವೂ ಕಿರುಕುಳ ಅನುಭವಿಸುತ್ತಿದ್ದ ಹೆಂಡತಿ, ಮಗನೊಂದಿಗೆ ಕರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಗರದ ಯರಗಟ್ಟಿ ತಾಲೂಕಿನ ಬೊಳಕಡಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸೇವಂತಿ ಪ್ಯಾಟಿ (32), ಮಹಾಂತೇಶ್ ಪ್ಯಾಟಿ (12) ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವವರು. ಬುದ್ಧಿಮಾಂದ್ಯ ಮಕ್ಕಳು ಹುಟ್ಟಿದ್ದಕ್ಕೆ ಬೆಳ್ಳಪ್ಪ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಕನ್ನಡದ ಎದೆ ಮೇಲೆ ಕಾಲಿಡುವ ದುಷ್ಟ ಸಂಚು ಕೇಂದ್ರ ಸರ್ಕಾರ ಮಾಡುತ್ತಿದೆ: ಎಚ್‍ಡಿಕೆ ವಾಗ್ದಾಳಿ
Advertisement
Advertisement
ನಿನ್ನೆ ಸಂಜೆ ಅವನು ಹೆಂಡತಿ ಮತ್ತು ಮಗನ ಮೇಲೆ ಹಲ್ಲೆ ಮಾಡಿದ್ದನು. ತನ್ನ ಕಿರಿಯ ಮಗನನ್ನು ತಂಗಿಯ ಮನೆಯಲ್ಲಿಯೇ ಬಿಟ್ಟಿದ್ದನು. ಆದರೆ ಸೇವಂತಿ ಇನ್ನೊಂದು ಮಗುವನ್ನ ತನ್ನ ಬಳಿಯೇ ಇಟ್ಟುಕೊಂಡು ಗಂಡನ ಕಿರುಕುಳ ಸಹಿಸಿಕೊಂಡಿದ್ದರು. ಆಗಾಗ ಹೆಂಡತಿಗೆ ಮನೆ ಬಿಟ್ಟು ಹೋಗಿ, ನಿನ್ನ ಬಿಟ್ಟು ಬೇರೊಂದು ಮದುವೆ ಆಗುವುದಾಗಿ ಬೆದರಿಕೆ ಹಾಕುತ್ತಿದ್ದನು ಎಂಬ ಆರೋಪಿಸಲಾಗುತ್ತಿದೆ. ಇದನ್ನೂ ಓದಿ: ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದು ಆತ್ಮಹತ್ಯೆ
Advertisement
Advertisement
ಇದರಿಂದ ಮನನೊಂದ ಸೇವಂತಿ ಇಂದು ಬೆಳಗ್ಗೆ ಗ್ರಾಮದ ಹೊರ ವಲಯದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರ ಭೇಟಿ ನೀಡಿದ್ದು, ಸಿಬ್ಬಂದಿ ಕೆರೆಯಿಂದ ಇಬ್ಬರ ಶವಗಳನ್ನ ಹೊರ ತೆಗೆಯಲಾಗಿದೆ.
ಘಟನೆ ಕುರಿತು ಕುಟುಂಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.