ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರೆದಿದ್ದು, ಕರಾವಳಿ (Karavali) ಭಾಗದಲ್ಲಿ ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಜಿಲ್ಲೆಯ ಕಾರವಾರ, ಅಂಕೋಲ, ಕುಮಟಾ, ಭಟ್ಕಳದಲ್ಲಿ ಅಬ್ಬರದ ಮಳೆ ಸುರಿದಿದ್ದು, ಹಲವು ಕಷ್ಟನಷ್ಟಗಳು ಸಂಭವಿಸಿದೆ.
Advertisement
ಧಾರಾಕಾರ ಮಳೆ ಸುರಿದ ಪರಿಣಾಮ ಹೊನ್ನಾವರ (Honnavara) ತಾಲೂಕಿನ ಕಾಸರಕೋಡ ಗ್ರಾಮದ ಕಳಸಿನಮೊಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದ್ದು, ಕೊಠಡಿಯಲ್ಲಿ ಕೂರಲಾಗದೇ ವಿದ್ಯಾರ್ಥಿಗಳು ಪರದಾಡುವಂತಾಯಿತು. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್ – ದಕ್ಷಿಣ ಕನ್ನಡ, ಕೊಡಗಿನಲ್ಲಿ PFI ಕಾರ್ಯಕರ್ತರ ಮನೆ ಮೇಲೆ NIA ದಾಳಿ
Advertisement
Advertisement
ಹೊನ್ನಾವರದ ಮುಗ್ವಾ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಣ್ಣಿಮನೆಯ ರಸ್ತೆಯಲ್ಲಿ ಆಟೋ ರಿಕ್ಷಾದ ಮೇಲೆ ಮರ ಬಿದ್ದು ಅದೃಷ್ಟವಶಾತ್ ಆಟೋ ಚಾಲಕ ಹಳಗೇರಿಯ ಶ್ರೀನಾಥ್ ಗೌಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಲ್ಲೆಯ ಕರಾವಳಿ ಭಾಗದಲ್ಲಿ ಇನ್ನೂ ಐದು ದಿನ ಹೆಚ್ಚಿನ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ (Meteorological Department) ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇದನ್ನೂ ಓದಿ: ಪಕ್ಷದ ಘನತೆಗೆ ಧಕ್ಕೆ ತರದಿರಿ- ನಳಿನ್ ಕುಮಾರ್ ಕಟೀಲ್ ಸೂಚನೆ
Advertisement
ಶಿರಸಿ, ಸಿದ್ದಾಪುರ, ಮುಂಡಗೋಡು, ಹಳಿಯಾಳ, ಯಲ್ಲಾಪುರ ಭಾಗದಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಕರಾವಳಿ ಭಾಗದ ಕುಮಟಾ, ಭಟ್ಕಳ, ಕಾರವಾರ, ಹೊನ್ನಾವರ ಭಾಗದಲ್ಲಿ ಮಳೆಯ (Rain) ಆರ್ಭಟ ಹೆಚ್ಚಾಗಿದ್ದು, ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಿರಂತರ ಭೂ ಕುಸಿತಕ್ಕೆ ಕಾರಣವಾಗಿದೆ. ಇಂದು ಕುಮಟಾದ ತಂಡ್ರಗುಳಿ ಭಾಗದ ಹೆದ್ದಾರಿ ಅಂಚಿನಲ್ಲಿ ಗುಡ್ಡ ಕುಸಿದ ಪರಿಣಾಮ ಕಲ್ಲುಬಂಡೆ ಮನೆಗೆ ಅಪ್ಪಳಿಸಿ ಗೋಡೆ ಬಿರುಕು ಬಿಟ್ಟಿದೆ. ಕಾರವಾರ ಭಾಗದ ನೌಕಾ ನೆಲೆಯ ಹೆದ್ದಾರಿ ಭಾಗದಲ್ಲಿ ಸಹ ಗುಡ್ಡ ಕುಸಿದು ದ್ವಿಮುಖ ಸಂಚಾರವನ್ನು ಬಂದ್ ಮಾಡಲಾಗಿದೆ. ದಶಕದಿಂದ ಚತುಷ್ಪತ ಹೆದ್ದಾರಿ ಕಾಮಗಾರಿ ಕುಂಟುತ್ತಾ ಸಾಗಿದ್ದು, ಈ ಭಾಗದ ಜನವಸತಿ ಪ್ರದೇಶಕ್ಕೆ ಹೆಚ್ಚಿನ ಮಳೆಯಾದರೆ ನೀರು ತುಂಬುವ ಆತಂಕ ಮನೆಮಾಡಿದೆ. ಇದನ್ನೂ ಓದಿ: Expressway- ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿಎಲ್ ರದ್ದು: ಅಲೋಕ್ ಕುಮಾರ್