ನವದೆಹಲಿ: ಚುನಾವಣಾ ಆಯೋಗ (Election Commission) ಬಿಡುಗಡೆ ಮಾಡಿದ ಚುನಾವಣಾ ಬಾಂಡ್ (Electoral Bonds) ದಾನಿಗಳ ಪಟ್ಟಿಯಲ್ಲಿ ಫ್ಯೂಚರ್ ಗೇಮಿಂಗ್ ಆ್ಯಂಡ್ ಹೋಟೆಲ್ ಸರ್ವಿಸಸ್ (Future Gaming and Hotel Services) ಪ್ರೈವೇಟ್ ಲಿಮಿಟೆಡ್ ಕಂಪನಿ ಅತ್ಯಧಿಕ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.
ಲಾಟರಿ ಕಿಂಗ್ ಎಂದ ಖ್ಯಾತಿ ಪಡೆದಿರುವ ಸ್ಯಾಂಟಿಯಾಗೊ ಮಾರ್ಟಿನ್ (Santiago Martin) ಮಾಲೀಕತ್ವದ ಫ್ಯೂಚರ್ ಗೇಮಿಂಗ್ ಕಂಪನಿ ಏಪ್ರಿಲ್ 2019 ರಿಂದ ಜನವರಿ 2024 ರವರೆಗೆ ಬರೋಬ್ಬರಿ 1,368 ಕೋಟಿ ರೂ. ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿದೆ.
Advertisement
Advertisement
ಸ್ಯಾಂಟಿಯಾಗೊ ಮಾರ್ಟಿನ್ ಯಾರು?
ಸ್ಯಾಂಟಿಯಾಗೊ ಮಾರ್ಟಿನ್ ಅವರ ಚಾರಿಟಬಲ್ ಟ್ರಸ್ಟ್ ವೆಬ್‌ಸೈಟ್ ಪ್ರಕಾರ ಮಾರ್ಟಿನ್ ಮೊದಲು ಮ್ಯಾನ್ಮಾರ್‌ನ ಯಾಂಗೋನ್‌ನಲ್ಲಿ ಕಾರ್ಮಿಕರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. 1988 ರಲ್ಲಿ ಮ್ಯಾನ್ಮಾರ್‌ನಿಂದ ಭಾರತಕ್ಕೆ ಮರಳಿ ತಮಿಳುನಾಡಿನಲ್ಲಿ ಲಾಟರಿ ವ್ಯವಹಾರವನ್ನು ಸ್ಥಾಪಿಸಿದರು.
Advertisement
ತನ್ನ 13ನೇ ವಯಸ್ಸಿನಲ್ಲಿ ಲಾಟರಿ (Lottery) ವ್ಯವಹಾರವನ್ನು ಆರಂಭಿಸಿದ ಮಾರ್ಟಿನ್ ನಂತರ ಕರ್ನಾಟಕ, ಕೇರಳ, ಸಿಕ್ಕಿಂ, ಮೇಘಾಲಯ, ಅರುಣಾಚಲ ಪ್ರದೇಶ, ಪಂಜಾಬ್ ಮತ್ತು ಮಹಾರಾಷ್ಟ್ರದಲ್ಲಿ ವಿಸ್ತರಿಸಿದರು.
Advertisement
ಲಾಟರಿ ಅಲ್ಲದೇ ರಿಯಲ್ ಎಸ್ಟೇಟ್, ಜವಳಿ, ಆತಿಥ್ಯ ಮತ್ತು ನಿರ್ಮಾಣ ಕ್ಷೇತ್ರದಲ್ಲಿ ಮಾರ್ಟಿನ್ ಹೂಡಿಕೆ ಮಾಡಿದ್ದಾರೆ. ಮಾರ್ಟಿನ್ ವಿರುದ್ಧ ಈಗಾಗಲೇ ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆ ತನಿಖೆ ನಡೆಸುತ್ತಿದೆ. ಆದಾಯ ತೆರಿಗೆ ಇಲಾಖೆ 2019 ರಲ್ಲಿ ಭಾರತದಾದ್ಯಂತ ಮಾರ್ಟಿನ್‌ಗೆ ಸಂಬಂಧಿಸಿದ 70 ಕಡೆ ದಾಳಿ ನಡೆಸಿತ್ತು. ಇದನ್ನೂ ಓದಿ: ಗೋವಾದಲ್ಲಿ ‘ಟಾಕ್ಸಿಕ್’ ಶೂಟಿಂಗ್: ಯಶ್ ಜೊತೆ ಗೀತು ಫೋಟೋ ವೈರಲ್
2008ರಲ್ಲಿ ಕೇರಳದ ಸಿಪಿಐ(ಎಂ) ಮುಖವಾಣಿಯಾದ ದೇಶಾಭಿಮಾನಿಗೆ 2 ಕೋಟಿ ರೂ. ದೇಣಿಗೆ ನೀಡಿದ್ದರು. ಮಾರ್ಟಿನ್ ಕೊಡುಗೆಯಿಂದ ಪಕ್ಷಕ್ಕೆ ಮುಜುಗರವಾಗಬಹುದು ಎಂದು ಪರಿಗಣಿಸಿ ಸಿಪಿಐ(ಎಂ) ಮರಳಿ ಆ ಹಣವನ್ನು ಮರಳಸಿತ್ತು ಎಂದು ವರದಿಯಾಗಿದೆ. ಮಾರ್ಟಿನ್ ಪತ್ನಿ ಲೀಮಾ ರೋಸ್ ಅವರು 2006 ರಲ್ಲಿ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯಾಗಿ ಕನ್ಯಾಕುಮಾರಿ ಜಿಲ್ಲೆಯ ತಿರುವಟ್ಟಾರ್ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.
2022 ರಲ್ಲಿ ಫ್ಯೂಚರ್ ಗೇಮಿಂಗ್ ಮೇಲೆ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಿಸಿದ ಇಡಿ 409 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಈ ವರ್ಷದ ಮಾರ್ಚ್‌ನಲ್ಲಿ ತಮಿಳುನಾಡಿನ ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ಇಡಿ ಮಾರ್ಟಿನ್ ಅಳಿಯ ಆಧವ್ ಅರ್ಜುನ್ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ಮಾಡಿತ್ತು. ಇದನ್ನೂ ಓದಿ: ನಾನು ಮೋದಿ ಮುಖ ನೋಡಿ ಕೆಲಸ ಮಾಡಲ್ಲ: ಮಾಧುಸ್ವಾಮಿ
ಲಾಟರಿ ಟಿಕೆಟ್‌ಎಷ್ಟು ಮುದ್ರಣ ಮಾಡಲಾಗುತ್ತದೆ ಎಂಬುದನ್ನು ಸರ್ಕಾರಕ್ಕೆ ತಿಳಿಸಬೇಕು. ಆದರೆ ಮಾರ್ಟಿನ್ ಭಾರೀ ಸಂಖ್ಯೆಯಲ್ಲಿ ಲಾಟರಿ ಟಿಕೆಟ್ ಮುದ್ರಿಸಿ ಸರ್ಕಾರಕ್ಕೆ ಕಡಿಮೆ ಲೆಕ್ಕ ತೋರಿಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಭೂಕಬಳಿಕೆ ಆರೋಪ ಮತ್ತು ಗೂಂಡಾ ಕಾಯ್ದೆಯಡಿ ಮಾರ್ಟಿನ್ ಅವರನ್ನು ಹಿಂದೆ ಬಂಧಿಸಲಾಗಿತ್ತು.