ದೋಸೆ ಎಲ್ಲರಿಗೂ ಇಷ್ಟ. ದೋಸೆಯಲ್ಲಿಯೇ ಹಲವಾರು ವಿಧಗಳನ್ನು ಮಾಡಲಾಗುತ್ತದೆ. ಪುದೀನಾ ದೋಸೆ, ಸೆಟ್ ದೋಸೆ, ಈರುಳ್ಳಿ ದೋಸೆ, ಖಾಲಿ ದೋಸೆ, ಗ್ರೀನ್ ಪೀಸ್ ದೋಸೆ ಹೀಗೆ ಇದರ ಪಟ್ಟಿ ಬೆಳೆಯುತ್ತದೆ. ಇವುಗಳಲ್ಲಿಯೇ ವಿಶೇಷವಾದದ್ದು ಟೊಮೆಟೋ ದೋಸೆಯಾಗಿದೆ.
Advertisement
ಬೇಕಾಗುವ ಸಾಮಗ್ರಿಗಳು:
* ಟೊಮೆಟೋ-2
* ಕೆಂಪು ಮೆಣಸು-4
* ಶುಂಠಿ- ಸ್ವಲ್ಪ
* ರವೆ- ಅರ್ಧ ಕಪ್
* ಗೋಧಿ ಹಿಟ್ಟು- ಸರ್ಧ ಕಪ್
* ಈರುಳ್ಳಿ- 1
* ದನಿಯಾ- ಸ್ವಲ್ಪ
* ಜೀರಿಗೆ- 1ಚಮಚ
* ರುಚಿಗೆ ತಕ್ಕಷ್ಟು ಉಪ್ಪು
* ಅಡುಗೆ ಎಣ್ಣೆ- ಅರ್ಧ ಕಪ್
Advertisement
Advertisement
ಮಾಡುವ ವಿಧಾನ:
* ಮೊದಲು ಮಿಕ್ಸರ್ ನಲ್ಲಿ ಟೊಮೆಟೋ, ಕೆಂಪು ಮೆಣಸಿನಕಾಯಿ ಶುಂಠಿಯನ್ನು ನೀರನ್ನು ಸೇರಿಸದೇ ರುಬ್ಬಿಕೊಳ್ಳಿ.
Advertisement
* ಈಗ 4 ಕಪ್ ರವಾ, 4 ಕಪ್ ಅಕ್ಕಿ ಹಿಟ್ಟು ಮತ್ತು ¼ ಕಪ್ ಗೋಧಿ ಹಿಟ್ಟು ಸೇರಿಸಿ ಮಿಶ್ರಣ ಮಾಡಿ.
* ನಂತರ 2 ಮಿಶ್ರಣಗಳನ್ನು ಒಂದು ಪಾತ್ರೆಗೆ ಹಾಕಿ ಈರುಳ್ಳಿ, ದನಿಯಾ ಪುಡಿ, ಜೀರಿಗೆ, ಉಪ್ಪು ಹಾಗೂ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ಇದನ್ನೂ ಓದಿ: ಚಳಿಗೆ ಬಿಸಿ ಬಿಸಿಯಾದ ಇಡ್ಲಿ ಮಂಚೂರಿ ಸಖತ್ ಟೇಸ್ಟ್
* ಈಗ ದೋಸೆ ಕಾವಲಿಯನ್ನು ಬಿಸಿಮಾಡಲು ಇಟ್ಟು ಅಡುಗೆ ಎಣ್ಣೆಯನ್ನು ಹಚ್ಚಿ, ದೋಸೆ ಹಾಕಿದರೆ ರುಚಿಯಾದ ಟೊಮೆಟೋ ದೋಸೆ ಸವಿಯಲು ಸಿದ್ಧವಾಗುತ್ತದೆ. ಇದನ್ನೂ ಓದಿ: ಕುಚ್ಚಲಕ್ಕಿ ದೋಸೆ ಸಖತ್ ಟೇಸ್ಟ್ – ನೀವೂ ಒಮ್ಮೆ ಟ್ರೈ ಮಾಡಿ