Cinema

ಸಮಂತಾರಿಂದ ದೂರವಾಗ್ತಿದ್ದಂತೆ ಹೊಸ ಮನೆ ಖರೀದಿಸಿದ ನಟ ನಾಗಚೈತನ್ಯ

Published

on

Share this

ಮುಂಬೈ: ಇತ್ತೀಚೆಗೆ ಟಾಲಿವುಡ್ ಕ್ಯೂಟ್ ಕಪಲ್ ಆಗಿದ್ದ ಸಮಂತಾ ಹಾಗೂ ನಾಗಚೈತನ್ಯ ತಮ್ಮ ವಿಚ್ಚೇದನದ ವಿಚಾರವನ್ನು ಬಹಿರಂಗವಾಗಿಯೇ ತಿಳಿಸಿದ್ದರು. ಪತ್ನಿಯಿಂದ ದೂರವಾಗುತ್ತಿದ್ದಂತೆಯೇ ನಾಗಚೈತನ್ಯ ಹೊಸ ಮನೆಯೊಂದನ್ನು ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು. ನಾಗಚೈತನ್ಯ ಅವರು ಹೈದರಾಬಾದ್ ನ ಜುಬಿಲಿ ಹಿಲ್ಸ್ ನಲ್ಲಿ ಲಕ್ಷುರಿ ಮನೆ ಖರೀದಿಸಿದ್ದಾರೆ. ಸದ್ಯ ಈ ಮನೆಯನ್ನು ನವೀಕರಿಸಲಾಗುತ್ತಿದೆ. ನವೀಕರಣ ಕಾರ್ಯ ಪೂರ್ಣಗೊಂಡ ಬಳಿಕ ನಾಗಚೈತನ್ಯ ಅವರು ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ. ಸದ್ಯ ನಾಗ ಅವರು ತಮ್ಮ ಹೆತ್ತವರೊಂದಿಗೆ ವಾಸವಾಗಿದ್ದು, ಸಮಂತಾ ಅವರು ತಮ್ಮ ಹಳೆಯ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಅಲ್ಲದೆ ಗಚಿಬೌಲಿ ಭವನವನ್ನು ತಾವೇ ಇಟ್ಟುಕೊಳ್ಳುತ್ತಾರೆ ಎನ್ನಲಾಗಿದೆ.

ಕೆಲವು ದಿನಗಳ ಹಿಂದೆ ಸಮಂತಾರಿಂದ ಬೇರ್ಪಟ್ಟ ನಂತರ ನಾಗ ಚೈತನ್ಯ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ನಟಿ ಪೂಜಾ ಹೆಗ್ಡೆ ಮತ್ತು ಅಖಿಲ್ ಅಕ್ಕಿನೇನಿ ಅವರ ಮುಂಬರುವ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದನ್ನೂ ಓದಿ: ಸಮಂತಾ ಜೊತೆ ಸ್ಟೈಲಿಸ್ಟ್ ಪ್ರೀತಂ ಸಂಬಂಧ ವದಂತಿ

ಇತ್ತ ಪತಿಯಿಂದ ದೂರವಾದ ಬಳಿಕ ತನ್ನ ವಿರುದ್ಧ ಹರಡುತ್ತಿದ್ದ ವದಂತಿಗಳ ಬಗ್ಗೆ ಸಮಂತಾ ಗರಂ ಆಗಿದ್ದರು. ಅಲ್ಲದೆ ಆಧಾರ ರಹಿತವಾಗಿ ತನ್ನ ವಿರುದ್ಧ ಕಟ್ಟುಕಥೆಗಳನ್ನು ಹರಡಿಸುತ್ತಿದ್ದವರ ವಿರುದ್ಧ ವಾಗ್ದಾಳಿ ಕೂಡ ನಡೆಸಿದ್ದರು. ಇದನ್ನೂ ಓದಿ:  ಬೀದಿ ನಾಯಿಗಳ ಬಗ್ಗೆ ಟ್ವೀಟ್ ಮಾಡಿದ್ರೆ, ಅದು ನಂಗೆ ಅಂದ್ರೆ ಜವಾಬ್ದಾರ ನಾನಲ್ಲ: ಸಿದ್ದಾರ್ಥ್

ಅಕ್ಟೋಬರ್ 2ರಂದು ಈ ಜೋಡಿ ವಿಚ್ಛೇದನದ ಬಗ್ಗೆ ಘೋಷಣೆ ಮಾಡಿತ್ತು. ಸಾಕಷ್ಟು ಆಲೋಚನೆ ಮಾಡಿದ ನಂತರ ನಾವಿಬ್ಬರು ಪತಿ-ಪತ್ನಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ದಶಕಗಳ ಕಾಲ ಸ್ನೇಹಿತರಾಗಿ ಇದ್ದಿದ್ದಕ್ಕೆ ನಾವಿಬ್ಬರೂ ಅದೃಷ್ಟ ಮಾಡಿದ್ದೆವು. ಆ ಸ್ನೇಹವೇ ನಮ್ಮ ಸಂಬಂಧದ ಶಕ್ತಿಯಾಗಿತ್ತು. ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧ ಇರಲಿದೆ ಎಂದು ನಂಬಿದ್ದೇವೆ ಎಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಳ್ಳುವ ಮೂಲಕವಾಗಿ ಇಬ್ಬರು ಬೇರೆಯಾಗುತ್ತಿದ್ದೇವೆ ಎಂದು ಹೇಳಿದ್ದರು. ಆ ಬಳಿಕದಿಂದ ಜೋಡಿಯ ಬಗ್ಗೆ ಹಲವಾರು ಸುಳ್ಳು ಸುದ್ದಿಗಳು ಹರಿದಾಡಲು ಪ್ರಾರಂಭವಾಗಿದೆ.

Click to comment

Leave a Reply

Your email address will not be published. Required fields are marked *

Advertisement
Advertisement
Public TV We would like to show you notifications for the latest news and updates.
Dismiss
Allow Notifications