ಇತ್ತೀಚೆಗಷ್ಟೇ ತೆಲುಗು ಚಿತ್ರರಂಗದ ಹಿರಿಯ ನಟ ಸೂಪರ್ ಸ್ಟಾರ್ ಕೃಷ್ಣ (Actor Krishna) ನಿಧನರಾಗಿದ್ದರು. ಈ ಬೆನ್ನಲ್ಲೇ ಟಾಲಿವುಡ್‌ನ ಮತ್ತೊಬ್ಬ ಹಿರಿಯ ನಟ ಚಲಪತಿ ರಾವ್ ನಿಧನರಾಗಿದ್ದಾರೆ. ಅವರ ಅನಿರೀಕ್ಷಿತ ಸಾವು ಚಿತ್ರರಂಗಕ್ಕೆ ಆಘಾತವನ್ನುಂಟು ಮಾಡಿದೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಿಂದ ಅಮೂಲ್ಯ ಗೌಡ ಔಟ್
600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ 78ರ ವಯಸ್ಸಿನ ನಟ ಚಲಪತಿ ರಾವ್(Actor Chalapathi Rao) ಇನ್ನಿಲ್ಲ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಭಾನುವಾರ (ಡಿ.25) ಬೆಳಗಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಬ್ಬರು ಪುತ್ರಿಯರು, ಪುತ್ರ ಮತ್ತು ಪತ್ನಿಯನ್ನು ಅಗಲಿದ್ದಾರೆ.
ಖಳನಟ, ಪೋಷಕ ನಟ, ಹಾಸ್ಯ ಪಾತ್ರಗಳ ಮೂಲಕ ರಂಜಿಸಿದ್ದ ಮಹಾನ್ ಪ್ರತಿಭೆ ಚಲಪತಿ ರಾವ್ ನಿಧನಕ್ಕೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಇನ್ನೂ ಅಮೆರಿಕದಲ್ಲಿರುವ ಪುತ್ರಿಯ ಆಗಮನ ನಂತರ (ಡಿ.28) ಮಧ್ಯಾಹ್ನ 3 ಗಂಟೆಯ ನಂತರ ನಟನ ಅಂತ್ಯಕ್ರಿಯೆ ನಡೆಯಲಿದೆ. ಪಾರ್ಥಿವ ಶರೀರವನ್ನು ಭಾನುವಾರ ಮಧ್ಯಾಹ್ನದವರೆಗೆ ಅಭಿಮಾನಿಗಳ ಭೇಟಿಗಾಗಿ ಬಂಜಾರಾ ಹಿಲ್ಸ್ನಲ್ಲಿರುವ ರವಿಬಾಬು ಅವರ ಮನೆಯಲ್ಲಿ ಇರಿಸಲಾಗಿದೆ.