ನವದೆಹಲಿ: 2023ರ ಏಪ್ರಿಲ್ ವೇಳೆಗೆ 15 ವರ್ಷ ಹಳೆಯದಾದ ಹಾಗೂ ಕೇಂದ್ರ ಸರ್ಕಾರದ (Government Of India) ವಿವಿಧ ಸಚಿವಾಲಯಗಳಿಗೆ ಸೇರಿದ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.
Advertisement
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 15 ವರ್ಷ ಪೂರೈಸಿದ ಹಾಗೂ ಕೇಂದ್ರ ಸರ್ಕಾರಕ್ಕೆ ಸೇರಿದ ಎಲ್ಲಾ ವಾಹನಗಳನ್ನು ಗುಜರಿಗೆ ಹಾಕುವುದಕ್ಕೆ ಸಂಬಂಧಿಸಿದ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾರ್ಗದರ್ಶನದಲ್ಲಿ ಸಹಿ ಹಾಕಲಾಗಿದೆ. ರಾಜ್ಯ ಸರ್ಕಾರಗಳಿಗೂ ಸ್ಕ್ರಾಪಿಂಗ್ ನೀತಿಯ ಸುತ್ತೋಲೆ ರವಾನೆ ಮಾಡಲಾಗಿದೆ. ರಾಜ್ಯಮಟ್ಟದಲ್ಲಿ ಇದನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೊಮ್ಮಾಯಿ ಸರಳ ಸಿಎಂ, ಹೆಬ್ಬೆಟ್ಟು ಸಿಎಂ ಅಲ್ಲ – ಎಚ್‍ಡಿಕೆ ವಿರುದ್ದ ಆರ್.ಅಶೋಕ್ ವಾಗ್ದಾಳಿ
Advertisement
Advertisement
ದೇಶದಲ್ಲಿ 80 ಲಕ್ಷ ಟನ್ ಬಯೊ-ಬಿಟುಮೆನ್ ಅಗತ್ಯವಿದೆ. ಪ್ರಸ್ತುತ 50 ಲಕ್ಷ ಟನ್ ಉತ್ಪಾದಿಸಲಾಗುತ್ತಿದೆ. ಉಳಿದ 25 ಲಕ್ಷ ಟನ್ ಆಮದು ಮಾಡಿಕೊಳ್ಳಲಾಗುತ್ತಿದೆ. ಅದಕ್ಕಾಗಿ ಸರ್ಕಾರ (Government) ಮಾಲಿನ್ಯ ನಿಯಂತ್ರಣಕ್ಕೆ ಹೊಸ ಪ್ಲ್ಯಾನ್ ಮಾಡಿದೆ ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಕರವೇ ಪ್ರತಿಭಟನೆ – ಮಹಾರಾಷ್ಟ್ರ ಪಾಸಿಂಗ್ ಇದ್ದ ವಾಹನಕ್ಕೆ ಕಪ್ಪು ಮಸಿ ಬಳಿದು ವೈಪರ್ ಮುರಿದು ಆಕ್ರೋಶ
Advertisement
ಶೀಘ್ರದಲ್ಲೇ ಮತ್ತೆರಡು ಇಂಡಿಯನ್ ಆಯಿಲ್ ಘಟಕ: ಇಂಡಿಯನ್ ಆಯಿಲ್‌ನ (Indian Oil) ಎರಡು ಘಟಕಗಳು ಪಾಣಿಪತ್‌ನಲ್ಲಿ ಶೀಘ್ರ ಆರಂಭವಾಗಲಿದೆ. ಒಂದರಲ್ಲಿ ನಿತ್ಯ 1 ಲಕ್ಷ ಟನ್ ಲೀಟರ್ ಎಥೆನಾಲ್ ಉತ್ಪಾದಿಸಿದರೆ, ಮತ್ತೊಂದರಲ್ಲಿ ಭತ್ತದ ಹುಲ್ಲು ಬಳಸಿ ಜೈವಿಕ -ಬಿಟುಮೆನ್ ಅನ್ನು ನಿತ್ಯ 150 ಟನ್ ಉತ್ಪಾದಿಸಲಾಗುವುದು. ಪಂಜಾಬ್ (Panjab), ಹರಿಯಾಣ, ಉತ್ತರ ಪ್ರದೇಶ ಹಾಗೂ ದೇಶದ ವಿವಿಧೆಡೆ ಅಕ್ಕಿ ಉತ್ಪಾದಿಸುವ ಭಾಗಗಳಲ್ಲಿ ಇದು ದೊಡ್ಡ ಬದಲಾವಣೆಯಾಗಿದೆ. ಭತ್ತದ ಹುಲ್ಲು ಸುಡುವುದರಿಂದ ಮಾಲಿನ್ಯ ಉಂಟಾಗುತ್ತದೆ. ಈಗ ಎಥೆನಾಲ್, ಬಯೊ-ಬಿಟುಮೆನ್ ಉತ್ಪಾದಿಸಲು ಬಳಸುವುದರಿಂದ ಮಾಲಿನ್ಯ ತಡೆಗಟ್ಟಬಹುದು ಎಂದು ತಿಳಿಸಿದ್ದಾರೆ.