ಹೈದರಾಬಾದ್: ಇನ್ಮುಂದೆ ತಿರುಪತಿ (Tirupati) ತಿಮ್ಮಪ್ಪನ ದರ್ಶನಕ್ಕೆ ಹೋಗುವವರು ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗಬಹುದೆಂದು ತಿರುಮಲ ತಿರುಪತಿ ದೇವಸ್ಥಾನ (TTD) ಹೇಳಿದೆ.
ಹೌದು. ಇತ್ತೀಚೆಗೆ 6 ವರ್ಷದ ಬಾಲಕಿ ತಿಮ್ಮಪ್ಪನ ದರ್ಶನ ಮಾಡಲು ತೆರಳುತ್ತಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಇನ್ಮುಂದೆ ಇಂತಹ ಘಟನೆ ಮರುಕಳಿಸದಂತೆ ಟಿಟಿಡಿ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದು, ಭಕ್ತರು ಕೈಯಲ್ಲಿ ಕೋಲು ಹಿಡಿದುಕೊಂಡು ಹೋಗುವಂತೆ ತಿಳಿಸಿದೆ.
Advertisement
Advertisement
ಪಾದಾಚಾರಿ ಮಾರ್ಗವಾಗಿ ದೇವಾಸ್ಥಾನಕ್ಕೆ ಹೋಗುವಾಗ ಯಾತ್ರಾರ್ಥಿಗಳು ಬ್ಯಾಚ್ ಬ್ಯಾಚ್ ಆಗಿ ಹೋಗಬೇಕು. ಅಲ್ಲದೆ ಈ ಬ್ಯಾಚ್‍ಗೆ ಓರ್ವ ಸೆಕ್ಯುರಿಟಿ ಗಾರ್ಡ್ ಇರಲಿದ್ದಾರೆ ಎಂದು ಕೂಡ ತಿಳಿಸಿದೆ. ಇದನ್ನೂ ಓದಿ: ತಿರುಪತಿ ದೇವಾಲಯದ ಬಳಿ ಬಾಲಕಿಯನ್ನು ಕೊಂದಿದ್ದ ಚಿರತೆ ಸೆರೆ
Advertisement
ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಕಾಡುಪ್ರಾಣಿಗಳು ದಾಳಿ ಮಾಡಿದರೆ ಅವುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಸಾಧ್ಯವಾದಷ್ಟು ಪ್ರತಿಯೊಬ್ಬ ಯಾತ್ರಿಗೂ ಕೋಲನ್ನು ನೀಡಲಾಗುತ್ತದೆ. ಇನ್ನು ದಾರಿಯಲ್ಲಿ ಹೋಗುವಾಗ ಕೋತಿ ಮುಂತಾದ ಪ್ರಾಣಿಗಳಿಗೆ ಆಹಾರ ನೀಡದಂತೆ ಹಾಗೂ ಕಸ ಹಾಕದಂತೆ ಸೂಚಿಸಲಾಗಿದೆ. ಈ ಮೂಲಕ ಪ್ರಾಣಿಗಳನ್ನು ಆಕರ್ಷಿಸದಂತೆ ಟಿಟಿಡಿ ಅಧ್ಯಕ್ಷ ಬಿ ಕರುಣಾಕರ್ ರೆಡ್ಡಿ ಹೇಳಿದ್ದಾರೆ.
Advertisement
ದೇವಾಲಯವು ಅರಣ್ಯ ಪ್ರದೇಶದಲ್ಲಿ ಇರುವುದರಿಂದ ಪಾದಚಾರಿ ಪ್ರದೇಶಕ್ಕೆ ಬೇಲಿ ಹಾಕುವ ಪ್ರಸ್ತಾವನೆಯನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ ಕಳುಹಿಸಲಾಗಿದೆ. ಕೆಲವೊಮ್ಮೆ ದೇಗುಲದಲ್ಲಿ ನೂಕುನುಗ್ಗಲು ಕಂಡುಬಂದರೂ ಕೆಲವು ಕ್ರಮಗಳು ಭಕ್ತರಲ್ಲಿ ಅಸಮಾಧಾನ ಮೂಡಿಸಿದೆ ಎಂದು ಅಧಿಕಾರಿ ಹೇಳಿದರು.
ಬಾಲಕಿ ಮೇಲೆ ಚಿರತೆ ದಾಳಿ: ಕಳೆದ ವಾರ 6 ವರ್ಷದ ಬಾಲಕಿ ಲಕ್ಷಿತಾ ತನ್ನ ಪೋಷಕರೊಂದಿಗೆ ತಿರುಮಲ ಬೆಟ್ಟಕ್ಕೆ ತೆರಳುತ್ತಿದ್ದಾಗ 6 ವರ್ಷದ ಬಾಲಕಿ ಮೇಲೆ ಚಿರತೆ ದಾಳಿ ಮಾಡಿತ್ತು. ಬಾಲಕಿ ಪೋಷಕರೊಂದಿಗೆ ಪಾದಯಾತ್ರೆಯಲ್ಲಿದ್ದಾಗ ಆಕೆ ಕಾಡಿಗೆ ಹೋಗಿದ್ದಾಳೆ ಎಂದು ಶಂಕಿಸಲಾಗಿದೆ. ಬಳಿಕ ತಿರುಪತಿಯ ಬೆಟ್ಟದ ದೇಗುಲಕ್ಕೆ ಹೋಗುವ ಪಾದಾಚಾರಿ ಮಾರ್ಗದಲ್ಲಿ ಪೊದೆ ಪ್ರದೇಶದಲ್ಲಿ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಮೃತದೇಹದ ಮೇಲೆ ಕಾಡು ಪ್ರಾಣಿ ದಾಳಿ ಮಾಡಿದ್ದ ಗಾಯದ ಗುರುತುಗಳು ಪತ್ತೆಯಾಗಿತ್ತು. ಇದಾದ ಬಳಿಕ ಪ್ರದೇಶದಲ್ಲಿ 12 ಕ್ಯಾಮೆರಾಗಳನ್ನು ಅಳವಡಿಸಲಾಗತ್ತು. ಶನಿವಾರ ರಾತ್ರಿ ಪ್ರದೇಶದಲ್ಲಿ ಚಿರತೆಯ ಚಲನವಲನ ದಾಖಲಾಗಿತ್ತು. ಬಳಿಕ ಅರಣ್ಯಾಧಿಕಾರಿಗಳು ಬೋನು ಹಾಕಿ ಇದೀಗ ಚಿರತೆಯನ್ನು ಸೆರೆಹಿಡಿದಿದ್ದರು.
Web Stories