ಅಮರಾವತಿ: ವ್ಯಕ್ತಿಯೊಬ್ಬ ಪತ್ನಿ ಹಾಗೂ ತಾಯಿಯನ್ನು ಕತ್ತು ಹಿಸುಕಿ ಕೊಂದು ಬಳಿಕ ಇಬ್ಬರು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಆಂದ್ರಪ್ರದೇಶದ ತಿರುಪತಿ (Tirupati) ಜಿಲ್ಲೆಯ ವೆಂಕಟಕೃಷ್ಣಪಲೆಂನಲ್ಲಿ ನಡೆದಿದೆ.
ವೆಂಕಟಕೃಷ್ಣಪಲೆಂ ಪಂಚಾಯತ್ ವ್ಯಾಪ್ತಿಯ ನಿವಾಸಿ ಮೋಹನ್ ತನ್ನ ತಾಯಿ ಚಂದ್ರಕಲಾ (65) ಮತ್ತು ಪತ್ನಿ ಹರಿತಾ (33) ಅವರನ್ನು ಮನೆಯಲ್ಲಿ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಅಲ್ಲಿಂದ ಇಬ್ಬರು ಮಕ್ಕಳಾದ ಕೌಶಿಕ್ (14) ಮತ್ತು ಹರಿಣಿ (12) ಓದುತ್ತಿದ್ದ ಶಾಲೆಗೆ ಹೋಗಿ ಮನೆಯಲ್ಲಿ ಕುಟುಂಬದ ಸದಸ್ಯರೊಬ್ಬರು ನಿಧನ ಹೊಂದಿದ್ದಾರೆ ಎಂದು ಮಕ್ಕಳನ್ನು ಕರೆದುಕೊಂಡು ಬಂದಿದ್ದ. ಆದರೆ ಆತ ಮನೆಗೆ ವಾಪಸ್ ಆಗಿರಲಿಲ್ಲ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ಲಕ್ಷ ಲಕ್ಷ ಲಾಸ್ – ನೇಣಿಗೆ ಶರಣಾದ ಯುವಕ
ಹರಿತಾ ಅವರ ಸಹೋದರ ಸಹ ಇವರೊಂದಿಗೆ ವಾಸವಾಗಿದ್ದು, ಆತ ಮೋಹನ್‌ಗೆ ಕರೆ ಮಾಡಿದಾಗ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದು ಗೊತ್ತಾಗಿದೆ. ಅನುಮಾನಗೊಂಡು ಮನೆಯನ್ನು ಪರಿಶೀಲಿಸಿದಾಗ ಇಬ್ಬರ ಶವ ಪತ್ತೆಯಾಗಿದೆ. ಬಳಿಕ ಪೊಲೀಸರಿಗೆ ಅವರು ಮಾಹಿತಿ ನೀಡಿದ್ದರು.
ಪೊಲೀಸರು (Police) ಹುಡುಕಾಟ ನಡೆಸಿದಾಗ ಮೋಹನ್ ಮಕ್ಕೊಳೊಂದಿಗೆ ಪುತ್ತೂರು ತಾಲೂಕಿನ ವೇಪಗುಂಟ ಬಳಿಯ ರೈಲ್ವೆ ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಇದನ್ನೂ ಓದಿ: ಬೈಕ್‌ಲ್ಲಿ ಬಂದು ಯುವತಿಯರಿಗೆ ಬ್ಯಾಡ್ ಟಚ್ – ಬೀದಿ ಕಾಮಣ್ಣರು ಅಂದರ್



